ವಿದ್ಯುತ್ ದರ ಹೆಚ್ಚಳಕ್ಕೆ ವಿರೋಧ- ಜೂ. 22 ರಂದು ವಿಜಯಪುರ ಬಂದ್ ಗೆ ಕರೆ ನೀಡಿದ ನಾನಾ ಸಂಘಟನೆಗಳು

ವಿಜಯಪುರ: ವಿದ್ಯುತ್ ದರ ಹೆಚ್ಚಳ ವಿರೋಧಿಸಿ ನಾನಾ ಸಂಘಟನೆಗಳು ಜೂ. 22ರಂದು ವಿಜಯಪುರ ಬಂದ್ ಕರೆ ನೀಡಿವೆ.

ಮರ್ಚಂಟ್ಸ್ ಅಸೋಸಿಯೇಶನ್ ಅಧ್ಯಕ್ಷ ರವೀಂದ್ರ ಬಿಜ್ಜರಗಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ನಾನಾ ಸಂಘಟನೆಗಳ ಮುಖಂಡರು ಪಾಲ್ಗೋಂಡು ಈ ನಿರ್ಧಾರ ಕೈಗೊಂಡಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ನಾನಾ ಮುಖಂಡರು, ರಾಜ್ಯ ಸರಕಾರ ವಿದ್ಯುತ ದರವನ್ನು ಅವೈಜ್ಞಾನಿಕವಾಗಿ ಹೆಚ್ಚಳ ಮಾಡಿದೆ.  ಇದರಿಂದಾಗಿ ಕೈಗಾರಿಕೋದ್ಯಮಕ್ಕೆ ಹೊಡೆತ ಬೀಳಲಿದೆ.  ಗ್ರಾಹಕರಿಗೂ ಇದು ಹೊರೆಯಾಗಲಿದೆ.  ಇಂದಿನ ಸ್ಪರ್ಧಾತ್ಮಕ ದಿನಗಳಲ್ಲಿ ಔದ್ಯೋಗಿಕ ರಂಗ, ಆಯಿಲ್ ಮಿಲ್, ಜಿನ್ನಿಂಗ ಫ್ಯಾಕ್ಟರಿ ಹಾಗೂ ಇತರೆ ಕೈಗಾರಿಕೋದ್ಯಮಗಳು ವಿದ್ಯುತ ದರ ಹೆಚ್ಚಳದಿಂದ ಸಂಕಷ್ಟಕ್ಕ ಸಿಲುಕಲಿವೆ.  ಕಾರ್ಖಾನೆಗಳನ್ನು ಮುಚ್ಚುವ ಪರಿಸ್ಥಿತಿಯೂ ಎದುರಾಗಲಿದೆ.  ಇದರಿಂದ ನಿರುದ್ಯೋಗ ಸೇರಿದಂತೆ ನಾನಾ ಸಮಸ್ಯೆಗಳು ಎದುರಾಗಲಿವೆ.  ಹೀಗಾಗಿ ಜೂ. 22 ರಂದು ಗುರುವಾರ ವಿಜಯಪುರ ಬಂದ್ ಕೆ ನಡೆಸುವುದು ಸೂಕ್ತ ಎಂದು ಹೇಳಿದರು.

ವಿಜಯಪುರ ಮರ್ಚಂಟ್ಸ ಅಸೋಸಿಯೇಶನ್ ನೇತೃತ್ವದಲ್ಲಿ ನಡೆಯಲಿರುವ ಈ ಬಂದ್ ಗೆ ಕಾಟನ್ ಮರ್ಚಂಟ್ಸ ಅಸೋಸಿಯೇಶನ್ ಆಯಿಲ್ ಮಿಲ್ ಓನರ್ಸ ಅಸೋಸಿಯೇಶನ್, ಶ್ರೀ ಸಿದ್ಧೇಶ್ವರ ಸಹಕಾರಿ ಬ್ಯಾಂಕ, ಶ್ರೀ ಸಿದ್ಧೇಶ್ವರ ಸಂಸ್ಥೆ, ಜವಳಿ ವರ್ತಕರ ಸಂಘ, ಸ್ಟೇಶನರಿ ವರ್ತಕರ ಸಂಘ-ಇಲೇಕ್ಟ್ರಿಕಲ್ ಮರ್ಚಂಟ್ಸ ಅಸೋಸಿಯೇಶನ್, ಟೈರ ಡೀಲರ್ಸ ಅಸೋಸಿಯೇಶನ್, ಮಶಿನರಿ ಮರ್ಚಂಟ್ಸ ಅಸೋಸಿಯೇಶನ್, ಪೆಟ್ರೋಲ ಡೀಲರ್ಸ ಅಸೋಸಿಯೇಶನ್, ಕಿರಾಣಾ ಮರ್ಚಂಟ್ಸ ಅಸೋಸಿಯೇಶನ್, ಟ್ರಕ್ ಓನರ್ಸ ಅಸೋಸಿಯೇಶನ್, ಸರಾಫ ಮರ್ಚಂಟ್ಸ ಅಸೋಸಿಯೇಶನ್, ಭಾಂಡೆ ವರ್ತಕರ ಸಂಘ, ಲಿಕರ ಅಸೋಸಿಯೇಶನ್, ಫೂಟವೇರ ಅಸೋಸಿಯೇಶನ್,ರೆಡಿಮೇಡ ವರ್ತಕರ ಸಂಘ, ಎಲ್‍ಬಿಎಸ್ ಕಾಂಪ್ಲೆಕ್ಸ ಅಸೋಸಿಯೇಶನ್, ಹೊಟೇಲ ಓನರ್ಸ ಅಸೋಸಿಯೇಶನ್, ಸಿಮೆಂಟ/ ಹಾರ್ಡವೇರ ಅಸೋಸಿಯೇಶನ್, ಸೈಕಲ ಡೀಲರ್ಸ ಅಸೋಸಿಯೇಶನ್, ಥಿಯೇಟರ ಮಾಲೀಕರ ಸಂಘ, ಬಾಗವಾನ ಮರ್ಚಂಟ್ಸ ಅಸೋಸಿಯೇಶನ್, ನೆಹರು ಮಾರ್ಕೆಟ ಕಾಂಪ್ಲೆಕ್ಸ ಸಂಘ, ಉದ್ದಿಮೆದಾರರ ಸಂಘ, ಟ್ರಾನ್ಸಪೋರ್ಟರ್ಸ ಅಸೋಸಿಯೇಶನ್, ಜಿನ್ನಿಂಗ್ ಫ್ಯಾಕ್ಟರಿ ಅಸೋಸಿಯೇಶನ್, ಜೋಳದ ಮಾರ್ಕೆಟ ಸಂಘ, ಅಟೋಮೊಬೈಲ್ ಡೀಲರ್ಸ ಅಸೋಸಿಯೇಶನ್, ಆಯ್ ಟಿ ಅಸೋಸಿಯೇಶನ್, ವಿಜಯಪುರ ವಿಕಾಸ ವೇದಿಕೆ, ಟ್ಯಾಕ್ಸ ಬಾರ ಅಸೋಸಿಯೇಶನ್, ವಕೀಲರ ಸಂಘ, ಔಷಧ ವ್ಯಾಪರಸ್ಥರ ಸಂಘ, ಗ್ರಾಮೋದ್ಯೋಗ ಎಣ್ಣೆ ಉತ್ಪಾಧಕರ ಸಂಘ, ಝರಾಕ್ಸ ಮೇಕರ್ಸ ಅಸೋಸಿಯೇಶನ, ಅಗರಬತ್ತಿ ಅಸೋಸಿಯೇಶನ ಹಾಗೂ  ಸಾರ್ವಜನಿಕರ ವತಿಯಿಂದ. ಬೆಂಬಲ ಸೂಚಿಸಿವೆ ಎಂದು ರವೀಂದ್ರ ಎಸ್. ಬಿಜ್ದರಗಿ ಮಾಧ್ಯಮ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.

Leave a Reply

ಹೊಸ ಪೋಸ್ಟ್‌