ಯೋಗ ಜೀವನ ಪದ್ಧತಿಯಾಗಿದೆ- ಪ್ರತಿದಿನ ಮಾಡುವುದರಿಂದ ಉತ್ತಮ ದೈಹಿಕ, ಮಾನಸಿಕ ಆರೋಗ್ಯ ಸಾಧ್ಯ- ಪ್ರೊ. ವೈ. ಎನ್. ಜಯರಾಜ

ವಿಜಯಪುರ: ಯೋಗ ಅಲೋಪಥಿ, ಹೋಮಿಯೋಪಥಿ, ಆಯುರ್ವೇದ ಯಾವುದೂ ಅಲ್ಲ. ಇದು ಜೀವನದ ವಿಧಾನವಾಗಿದೆ ಎಂದು ವೂ ಅಲ್ಲಇದು ಜೀವನದ ವಿಧಾನವಾಗಿದೆ ಎಂದು ಬಿ. ಎಲ್. ಡಿ. ಇ ಡೀಮ್ಡ್ ವಿಶ್ವವಿದ್ಯಾಲಯದ ಸಮಕಲಾಧಿಪತಿ ಪ್ರೊ. ವೈ. ಎನ್. ಜಯರಾಜ ಹೇಳಿದ್ದಾರೆ.

ವಿಶ್ವವಿದ್ಯಾಲಯದಲ್ಲಿ 9ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಉದ್ಗಾಟಿಸಿ ಅವರು ಮಾತನಾಡಿದರು.
ಸದೃಢ ದೇಹ ಮತ್ತು ಮನಸ್ಸು ಮನುಷ್ಯನನ್ನು ದೈಹಿಕ ಮತ್ತು ಮಾನಸಿಕವಾಗಿ ಆರೋಗ್ಯವಂತ ಮತ್ತು ಬುದ್ದಿವಂತನನ್ನಾಗಿ ಮಾಡುತ್ತದೆ. 21ನೇ ಶತಮಾನದಲ್ಲಿ ಇದರ ಅಗತ್ಯ ಹೆಚ್ಚಾಗಿದೆ. ಭಾರತದ ಯೋಗ ವಿಶ್ವಕ್ಕೆ ಆರೋಗ್ಯಕ್ಕೆ ಕ್ಷೇತ್ರಕ್ಕೆ ಕಾಲ ಕಾಲಕ್ಕೆ ಅಪಾರ ಕೊಡುಗೆ ನೀಡುತ್ತಿದೆ. ಯೋಗ ಕೇವಲ ಒಂದು ಕ್ರಿಯೆ ಅಲ್ಲ. ಜೀವನದ ವಿಧಾನವಾಗಿದೆ ಎಂದು ಅವರು ಹೇಳಿದರು.

ಯೋಗದಿಂದ ದೈಹಿಕವಾಗಿ ಸಲದೃಢವಾಗಿರಲು ಸಾಧ್ಯ. ಮಾನಸಿಕವಾಗಿ ಏಕಾಗ್ರತೆ ಸಾಧಿಸುವುದರಿಂದ ನಮ್ಮ ಇಡೀ ಶರೀರವನ್ನು ಆರೋಗ್ಯವಾಗಿರಲು ನಿಯಂತ್ರಿಸಬಹುದಾಗಿದೆ. ಪ್ರತಿಯೊಬ್ಬರು ಇದರಿಂದ ವೈಯಕ್ತಿಕವಾಗಿ ಮತ್ತು ಸರ್ವಾಂಗೀಣವಾಗಿ ಅಭಿವೃದ್ಧಿಯಾಗಲು ಇದು ದಿಕ್ಸೂಚಿಯಾಗಿದೆ ಎಂದು ಪ್ರೊ. ವೈ. ಎನ್. ಜಯರಾಜ ತಿಳಿಸಿದರು.

ಡೀಮ್ಡ್ ವಿಶ್ವವಿದ್ಯಾಲಯದ ಕುಲಪತಿ ಡಾ. ಡಾ. ಆರ್. ಎಸ್. ಮುಧೋಳ ಮಾತನಾಡಿ, ಮಾನವ ಜೀವನನ್ನು ಹೇಗೆ ನಡೆಸಬೇಕು ಎಂಬುದನ್ನು ಯೋಗದ ಮೂಲಕ ಭಾರತ ಇಡೀ ವಿಶ್ವಕ್ಕೆ ತೋರಿಸಿಕೊಟ್ಟಿದೆ. ಪ್ರತಿಯೊಬ್ಬರಲ್ಲಿ ಧನಾತ್ಮಗ ಮತ್ತು ಋಣಾತ್ಮಕ ಗುಣಗಳಿರುತ್ತವೆ. ಯೋಗದಿಂದ ಋಣಾತ್ಮಕ ಗುಣಗಳನ್ನು ಹೋಗಲಾಡಿಸಿ ಧನಾತ್ಮಕ ಅಂಶಗಳನ್ನು ಬೆಳೆಸಿಕೊಂಡು ಸಮಾಜಮುಖಿ ಕೆಲಸ ಮಾಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಯೋಗಪಟುಗಳು ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ನಾನಾ ಭಂಗಿಗಳನ್ನು ಹೇಳಿಕೊಟ್ಟರು

ಮನಸ್ಸು ಮತ್ತು ಶರೀರ ಜೊತೆಯಾಗಿ ಕೆಲಸ ಮಾಡಿದಾಗ ಏಕಾಗ್ರತೆ ಹೆಚ್ಚಾಗುತ್ತದೆ. ನಾವು ಸದೃಢವಾಗಿದ್ದರೆ ಉತ್ತಮ ಸೇವೆ ಒದಗಿಸಲು ಸಾಧ್ಯ. ಇದರಿಂದ ವೈದ್ಯಕೀಯ ವಿದ್ಯಾರ್ಥಿಗಳು ಮತ್ತು ವೈದ್ಯರು ರೋಗಿಗಳಿಗೆ ಮಾನವೀಯ ಮೌಲ್ಯಗಳಡಿ ಚಿಕಿತ್ಸೆ ನೀಡಿದರೆ ಸುಂದರ ಸಮಾಜ ನಿರ್ಮಿಸಲು ಸಾಧ್ಯ. ವೈದ್ಯಕೀಯ ವಿದ್ಯಾರ್ಥಿಗಳು ಶಿಕ್ಷಣದಲ್ಲಿ ಕೇವಲ ಪಠ್ಯಕ್ರಮ ಅನುಸರಿಸಿದರೆ ಸಾಲದು. ಇದರ ಜೊತೆ ವೈಯಕ್ತಿಕ ಮತ್ತು ಸಮಾಜದ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಯೋಗ ಪ್ರಮುಖ ಮಾಧ್ಯಮವಾಗಿದೆ. ದೇಶದಲ್ಲಿ ಪ್ರಾಚೀನ ಕಾಲದಿಂದಲೂ ಉಳಿಸಿಕೊಂಡು ಬರಲಾಗಿರುವ ಯೋಗ ಭಫಾರತ ಜಗತ್ತಿಗೆ ನೀಡಿರುವ ಅಮೂಲ್ಯ ಕೊಡುಗೆಯಾಗಿದೆ ಎಂದು ಡಾ. ಆರ್. ಎಸ್. ಮುಧೋಳ ತಿಳಿಸಿದರು.

ಈ ಸಂದರ್ಭದಲ್ಲಿ ಪ್ರಾಚಾರ್ಯ ಡಾ. ಅರವಿಂದ ಪಾಟೀಲ, ರಜಿಸ್ಚ್ರಾರ ಡಾ. ರಾಘವೇಂದ್ರ ಕುಲಕರ್ಣಿ, ವೈದ್ಯಕೀಯ ಅಧೀಕ್ಷಕ ಡಾ. ರಾಜೇಶ ಹೊನ್ನುಟಗಿ, ಡಾ. ಎಂ. ಬಿ. ಪಾಟೀಲ, ಡಾ. ಸುಮಗಂಲಾ ಪಾಟೀಲ, ಡಾ. ಜ್ಯೋತಿ ಖೋದ್ನಾಪುರ, ಡಾ. ತನುಜಾ ಪಟ್ನಾಕರ, ಅನನ್ಯ, ಮಿಥಾಲಿ, ರಿಷಿತ, ಅರುಷಿ, ಸೂಜನ, ಸುಭಗಾ, ಭೃಂದಾ, ಭಾಮಿಮಿ, ಸಿಯಾ, arpan, ಮೇಘಾ, ಆನಂದ ಪಾಟೀಲ ಮುಂತಾದವರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಯೋಗ ನಿರ್ದೇಶಕ ಎಂ. ಪಿ. ದೊಡಮನಿ, ಡಾ. ಶಿವಲೀಲಾ ದೇವರಮನಿ, ವೈದ್ಯಕೀಯ ವಿದ್ಯಾರ್ಥಿಗಳಾದ ಮಾಣಿಕ್ಯ, ಚಿನ್ಮಯಿ, ಅನುರಾಧಾ, ನಿಖಿತಾ, ಬಿಶಾನಾ, ಶಿಫಾ ಯೋಗದ ನಾನಾ ಭಂಗಿಗಳನ್ನು ನೆರೆದ ವೈದ್ಯರು ಮತ್ತು ಇತತರಿಗೆ ಹೇಳಿಕೊಟ್ಟರು.

Leave a Reply

ಹೊಸ ಪೋಸ್ಟ್‌