ವಿಜಯಪುರ: ಹಾಲುಮತ ಧರ್ಮದ ವಿಜಯಪುರ ಜಿಲ್ಲೆಯ ಪಟ್ಟದ ಪೂಜಾರಿಗಳ ಹಾಗೂ ಜಡೆತಲೆ ಪೂಜಾರಿಗಳ ಸಂಘದ ವತಿಯಿಂದ ಸಚಿವರಾದ ಎಂ. ಬಿ. ಪಾಟೀಲ, ಶಿವಾನಂದ ಪಾಟೀಲ ಹಾಗೂ ಶಾಸಕ ವಿಠ್ಠಲ ಕಟಕದೊಂಡ ಅವರನ್ನು ಸನ್ಮಾನಿಸಲಾಯಿತು.
ಎಂ. ಬಿ. ಪಾಟೀಲ ಅವರ ನಿವಾಸಕ್ಕೆ ತೆರಳಿದ ಸಂಘದ ಪೂಜಾರಿಗಳು ಸಚಿವರನ್ನು ಕಂಬಳಿ ಮತ್ತು ಹೂಮಾಲೆ ಹಾಕಿ ಸನ್ಮಾನಿಸಿ ಗೌರವಿಸಿದರು.
ನಂತರ ಸಚಿವ ಶಿವಾನಂದ ಪಾಟೀಲ ಅವರನ್ನು ಭೇಟಿ ಮಾಡಿದ ಪೂಜಾರಿಗಳು ಅವರನ್ನೂ ಸನ್ಮಾನಿಸಿ ಗೌರವಿಸಿದರು.
ಅಷ್ಟೇ ಅಲ್ಲ, ನಾಗಠಾಣ(ಮೀ) ಕಾಂಗ್ರೆಸ್ ಶಾಸಕ ವಿಠ್ಠಲ ಕಟಕದೊಂಡ ಅವರನ್ನೂ ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪೂಜಾರಿಗಳು, ರಾಜ್ಯದ ಹಾಲುಮತ ಧರ್ಮದ ಪಟ್ಟದ ಪೂಜಾರಿಗಳು ಜಡೆ ತಲೆ ಪೂಜಾರಿಗಳು ವಂಶ ಪರಂಪರೆ ವಾಗಿ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿದ್ದಾರೆ. ಇವರಿಗೆ ಯಾವುದೇ ತರದಿಂದ ಆರ್ಥಿಕ ಮೂಲ ಇರುವುದಿಲ್ಲ. ಈ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ಪಟ್ಟದ ಪೂಜಾರಿಗಳಿಗೆ ಜಡೆತಲೆ ಪೂಜಾರಿಗಳಿಗೆ ಗೌರವ ಧನ ನೀಡಬೇಕು ಎಂದು ಮನವಿ ಸಲ್ಲಿಸಿದರು. ಚುನಾವಣೆ ಪೂರ್ವದಲ್ಲಿ ಎಸ್. ಸಿದ್ಧರಾಮಯ್ಯ ಅವರನ್ನು ವಿಜಯಪುರದಲ್ಲಿ ಭೇಟಿ ಮಾಡಿದಾಗ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದರೆ ಎಲ್ಲ ಪೂಜಾರಿಗಳ ಗೌರವಧನ ನೀಡುವುದಾಗಿ ಭರವಸೆ ನೀಡಿದ್ದರು. ಆದ್ದರಿಂದ ಜಿಲ್ಲೆಯ ಸಚಿವರು ಮತ್ತು ಶಾಸಕರು ಪೂಜಾರಿಗಳ ಬೇಡಿಕೆಯ ಕುರಿತು ಮುಖ್ಯಮಂತ್ರಿ ಎಸ್. ಸಿದ್ಧರಾಮಯ್ಯ ಅವರಿಗೆ ಈ ಕುರಿತು ಗಮನ ಸೆಳೆಯಬೇಕು. ರಾಜ್ಯಾದ್ಯಂತ ಎಲ್ಲ ಜಡೆತಲೆ ಪೂಜಾರಿಗಳಿಗೆ ಗೌರವ ಧನ ಒದಗಿಸುವ ಮೂಲಕ ತಮ್ಮ ಕುಟುಂಬ ನಿರ್ವಹಣೆಗೆ ನೆರವಾಗಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ಬೀರಪ್ಪ ಜುಮುನಾಳ, ಅಹಿಂದ ಮುಖಂಡರಾದ ಸೋಮನಾಥ ಕಳ್ಳಿಮನಿ, ಸಂಘದ ಅಧ್ಯಕ್ಷ ನಾಗಠಾಣದ ಮಾಳಿಂಗರಾಯ ಮಾರಾಯರು, ಬನಸಿದ್ದ ಮಾರಾಯರು, ರೂಗಿ ಜಟ್ಟಿಂಗೇಶ್ವರ ದೇವಸ್ಥಾನದ ಮಲ್ಲಪ್ಪ ಮಾರಾಯರು, ಬರಟ್ಟಿಗೆ ಬಾಳು ಮಾಮ ದೇವಸ್ಥಾನದ ಶಂಕರ ಮಾರಾಯರು, ತೊರವಿ ಅಮೀನಪ್ಪ ಮಾರಾಯರು, ಅಮೋಘಿದ್ದ ಮಾರಾಯರು, ಬೀರೇಶ ಮಾರಾಯರು, ನಿಂಗಪ್ಪ ಮಾರಾಯರು, ಕಲ್ಲಪ್ಪ ಮಾರಾಯರು, ಕಣಮುಚನಾಳ ಎಲ್ಲಪ್ಪ ಮಾರಾಯರು, ಕಾಲೇಬಾಗ ಬೀರಪ್ಪ ಕಣಿಮಣಿ ಮಾರಾಯರು, ಶಿವರಾಯ ಮಾರಾಯರು, ಅಲಿಯಾಬಾದ ನಿಂಗಪ್ಪ ಪೂಜಾರಿ ಮಾರಾಯರು, ಎಲ್ಲಪ್ಪ ಪೂಜಾರಿ ಮಾರಾಯರು, ಸಾರವಡದ ಜೊತೆಪ್ಪ ಮಾರಾಯರು, ತಿಪ್ಪರಾಯ ಬಿರಾದಾರ ಮಾರಾಯರು ಹಾಗೂ ಸುಮಾರು 80ಕ್ಕೂ ಹೆಚ್ಚು ಮಾರಾಯರು ಉಪಸ್ಥಿತರಿದ್ದರು.