ವಿಜಯಪುರ: ದೇಶದಲ್ಲಿ ಶಿಶುಗಳು ಮತ್ತು ಮಕ್ಕಳಿಗೆ ಈವರೆಗೆ ನಡೆದ ಸಂಶೋಧನೆಗಳ ಫಲಿತಾಂಶದ ಆಧಾರದ ಮೇಲೆ ಚಿಕಿತ್ಸೆ ನೀಡಲಾಗುತ್ತಿದೆ. ಈಗ ನಡೆಯುತ್ತಿರುವ ಸಂಶೋಧನೆಗಳಿಂದ ಮುಂಬರುವ ದಿನಗಳಲ್ಲಿ ಮಕ್ಕಳ ಆರೋಗ್ಯ ಮತ್ತಷ್ಟು ವೃದ್ಧಿಸಲಿದೆ ಎಂದು ರಿಷಿಕೇಶ ಏಮ್ಸ್ ನರ್ಸಿಂಗ್ ಕಾಲೇಜಿನ ಪ್ರಿನ್ಸಿಪಾಲ ಡಾ. ಸ್ಮೃತಿ ಅರೊರಾ ಹೇಳಿದ್ದಾರೆ.
ನಗರದ ಬಿ.ಎಲ್.ಡಿ.ಇ. ಸಂಸ್ಥೆಯ ಶ್ರೀ. ಬಿ. ಎಂ. ಪಾಟೀಲ ನರ್ಸಿಂಗ ಕಾಲೇಜಿನಲ್ಲಿ ರಾಜೀವ ಗಾಂಧಿ ಆರೋಗ್ಯ ವಿಜ್ಙಾನ ವಿಶ್ವವಿದ್ಯಾಲಯದ ಸಹಯೋಗದಲ್ಲಿ ನಡೆದ ಮಕ್ಕಳ ಮತ್ತು ಶಿಶು ಆರೈಕೆಯ ಅವಕಾಶ, ಸವಾಲು ಹಾಗೂ ಸಂಶೋಧನೆಗಳ ಬಗ್ಗೆ ಒಂದು ದಿನದ ರಾಷ್ಟ್ರೀಯ ಸಮ್ಮೇಳನದಲ್ಲಿ ಪಾಲ್ಗೋಂಡು ಅವರು ಮಾತನಾಡಿದರು.
ಈಗ ನಡೆಯುತ್ತಿರುವ ಸಂಶೋಧನೆಗಳ ಫಲಿತಾಂಶಗಳು ಉತ್ತಮವಾಗಿವೆ. ಇವುಗಳನ್ನು ಪುರಾವೆಯಾಗಿಟ್ಟುಕೊಂಡು ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ಸಂಶೋಧನೆಗಳು ನಿರಂತರವಾಗಿದ್ದು, ಮತ್ತಷ್ಟು ಉತ್ತಮ ಫಲಿತಾಂಶಗಳ ಬರಲಿದ್ದು, ಶಿಶುಗಳು ಮತ್ತು ಮಕ್ಕಳ ಆರೋಗ್ಯಕ್ಕೆ ಸಂಬಂಧಿಸಿದಂತೆ ಎಲ್ಲ ಸವಾಲುಗಳಿಗೆ ಉತ್ತರ ಸಿಗಲಿವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಬಾಗಲಕೋಟೆ ಸಜ್ಜಲಶ್ರೀ ನರ್ಸಿಂಗ ಕಾಲೇಜಿನ ಪ್ರಿನ್ಸಿಪಾಲ್ ಮತ್ತು ರಾಜೀವ ಗಾಂದಿ ವಿಶ್ವವಿದ್ಯಾಲಯದ ಸೆನೆಟ ಸದಸ್ಯ ಡಾ. ದೀಲಿಪ ನಾಟಿಕಾರ ಮಾತನಾಡಿ, ಮಕ್ಕಳ ಆರೋಗ್ಯ ರಕ್ಷಣೆ ಮತ್ತು ಆರೋಗ್ಯ ವೃದ್ಧಿಸುವುದಕ್ಕೆ ಪ್ರಾಧಾನ್ಯತೆ ನೀಡಬೇಕು. ಮಕ್ಕಳ ಆರೋಗ್ಯ ದೇಶದ ಆರೋಗ್ಯವಾಗಿದೆ. ದೇಶದ ಆರೋಗ್ಯ ಕ್ಷೇತ್ರದಲ್ಲಿ ದಾದಿಯರ ಪಾತ್ರ ಬಹುಮುಖ್ಯವಾಗಿದೆ. ಪ್ರತಿಯೊಬ್ಬರು ನರ್ಸ್ ಗಳು ಕೂಡ ಸಂಶೋಧನೆ ನಡೆಸಲು, ಸವಾಲುಗಳನ್ನು ಎದುರಿಸಲು ಮತ್ತು ದೇಶದ ಆರೋಗ್ಯವನ್ನು ಕಾಪಾಡುವಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತಿದ್ದಾರೆ ಎಂದು ಹೇಳಿದರು.
ಬಿ. ಎಲ್. ಡಿ. ಇ ಸಂಸ್ಥೆಯ ಶ್ರೀ. ಬಿ. ಎಂ. ಪಾಟೀಲ ನರ್ಸಿಂಗ್ ಕಾಲೇಜಿನ ಪ್ರಿನ್ಸಿಪಾಲ್ ಡಾ. ಶಾಲೋಮನ್ ಚೋಪಡೆ ಮಾತನಾಡಿ, ಈ ಸಮ್ಮೇಳನದಿಂದ ಮಕ್ಕಳ ಆರೋಗ್ಯ ಕ್ಷೇತ್ರದ ಪ್ರಸ್ತುತ ವಿದ್ಯಮಾನಗಳನ್ನು ಅವಲೋಕನ ಮಾಡಲು ಮತ್ತು ಹೊಸ ಹೊಸ ಚಿಕಿತ್ಸೆ ವಿಧಾನಗಳನ್ನು ಬಳಸಿ ಚಿಕಿತ್ಸೆ ನೀಡಲು ಅನುಕೂಲವಾಗಲಿದೆ. ಅಲ್ಲದೇ, ದೇಶದ ಭವಿಷ್ಯವಾಗಿರುವ ಮಕ್ಕಳ ಆರೋಗ್ಯವನ್ನು ಸುಧಾರಿಸಲು ಪ್ರತಿಯೊಬ್ಬರಿಗೂ ವೃತ್ತಿ ಕೌಶಲ್ಯ ಹೆಚ್ಚಿಸಕೊಳ್ಳಲು ನೆರವಾಗಲಿದೆ ಎಂದು ಹೇಳಿದರು.
ಬಿ. ಎಲ್. ಡಿ. ಇ ಡೀಮ್ಡ್ ವಿಶ್ವವಿದ್ಯಾಲಯದ ಕುಲಪತಿ ಡಾ. ಆರ್. ಎಸ್. ಮುಧೋಳ ಸಮ್ಮೇಳನ ಆಯೋಜನೆ ಮತ್ತು ಈ ಸಮ್ಮೇಳನದಲ್ಲಿ ಪಾಲ್ಗೋಳ್ಳುವುದರಿಂದ ಪ್ರತಿಯೊಬ್ಬರಿಗೂ ಪ್ರಸಕ್ತ ವಿದ್ಯಮಾನಗಳ ಬಗ್ಗೆ ಜ್ಞಾನಾರ್ಜನೆಗೆ ಸಹಾಯವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಿಶು ಸಮರ್ಪಿತ ಕೈಪಿಡಿ ಬಿಡುಗಡೆ ಮಾಡಲಾಯಿತು.
ಈ ಸಮ್ಮೇಳನದಲ್ಲಿ ದೇಶದ ನಾನಾ ಭಾಗಗಳಿಂದ 550ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಸಮ್ಮೇಳನದ ಆಯೋಜಕಿ ಡಾ. ಕವಿತಾ ಕೆ., ಡಾ. ಬಶೀರ್ ಅಹ್ಮದ ಸಿಕಂದರ, ಡಾ. ಸುಚಿತ್ರಾ ರಾಟಿ, ಪ್ರವೀಣ ಬಗಲಿ, ಡಾ. ಎನ್. ಜಿ. ಪಾಟೀಲ ಹಾಗೂ ಮಹಾವಿದ್ಯಾಲಯದ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಡಾ. ಜಯಶ್ರೀ ಪೂಜಾರಿ ನಿರೂಪಿಸಿದರು.