ವರುಣನ ಕೃಪೆಗಾಗಿ ಸ್ಮಶಾನದಲ್ಲಿರುವ ಗೋರಿಗಳಿಗೆ ನೀರು ಹಾಕಿ ಪ್ರಾರ್ಥಿಸಿದ ಕಲಕೇರಿ ಜನ
ವಿಜಯಪುರ: ಮುಂಗಾರು ಹಂಗಾಮು ಆರಂಭವಾಗಿ ಜೂನ್ ತಿಂಗಳು ಮುಗಿಯುತ್ತ ಬಂದರೂ ಮೇಘರಾಜ ಮಳೆ ಸುರಿಸುತ್ತಿಲ್ಲ. ವರಣನ ದೇವನ ಕೃಪೆಗಾಗಿ ಜನರು ಹಾತೊರಯುತ್ತಿದ್ದಾರೆ. ಅದೇ ರೀತಿ ರಾಜ್ಯದಲ್ಲಿ ದೇವೇಂದ್ರ ಮಳೆ ಸುರಿಸಲಿ ಎಂದು ಜನರು ದೇವರ ಪೂಜೆ, ಶಿವಲಿಂಗಕ್ಕೆ ಜಲಪೂಜೆ, ಕತ್ತೆಗಳ ಮದುವೆ, ಕಪ್ಪೆಗಳ ಮದುವೆ, ಮಕ್ಕಳ ಸಾಂಕೇತಿಕ ಮದುವೆ ಮಾಡುವುದು ತಾವೆಲ್ಲರೂ ಕೇಳಿರ್ತೀರಿ ಮತ್ತು ನೋಡಿರ್ತೀರಿ. ಆದರೆ, ಐತಿಹಾಸಿಕ ವಿಜಯಪುರ ಜಿಲ್ಲೆಯಲ್ಲಿ ಮಳೆಗಾಗಿ ಜನರು ವಿಚಿತ್ರ ಆಚರಣೆ ನಡೆಸಿದ ಘಟನೆ ತಾಳಿಕೋಟೆ ತಾಲೂಕಿನ ಕಲಕೇರಿ ಗ್ರಾಮದಲ್ಲಿ ನಡೆದಿದೆ. […]