ವಿಜಯಪುರ: ಇಂದಿನ ದಿನಗಳಲ್ಲಿ ಉತ್ತಮ ಆರೋಗ್ಯಕ್ಕೆ ಶುದ್ಧ ಕುಡಿಯುವ ನೀರು ಸೇವನೆ ಮುಖ್ಯವಾಗಿದೆ ಎಂದು ಬಿ. ಎಲ್. ಡಿ. ಇ ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿ ಡಾ. ಆರ್. ಬಿ. ಕೊಟ್ನಾಳ ಹೇಳಿದ್ದಾರೆ.
ನಗರದ ಬಿ.ಎಲ್.ಡಿಇ ಸಂಸ್ಥೆಯ ಎಸ್. ಎಸ್. ಪಿಯು ಕಾಲೇಜಿನಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟಿಸಿ ಅವರು ಮಾತನಾಡಿದರು.
ಮೂಲಭೂತ ಸೌಕರ್ಯಗಳಲ್ಲಿ ನೀರು ಪ್ರಮುಖವಾಗಿದೆ. ಈ ಹಿನ್ನೆಲೆಯಲ್ಲಿ ಎಸ್. ಎಸ್. ಪಿಯು ಕಾಲೇಜು ಆವರಣದಲ್ಲಿ ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆ ಜೊತೆಗೆ ಶುದ್ಧ ನೀರು ಕುಡಿಯುವ ವ್ಯವಸ್ಥೆ ಕಲ್ಪಿಸಲು ಈ ವ್ಯವಸ್ಥೆ ಮಾಡಲಾಗಿದೆ. 3000 ಲೀಟರ್ ಸಾಮರ್ಥ್ಯದ ಘಟಕ ಇದಾಗಿದೆ. ಇದರಿಂದ ಸುಮಾರು ನಾಲ್ಕು ಸಾವಿರ ವಿದ್ಯಾರ್ಥಿಗಳಿಗೆ ಶುದ್ಧ ಕುಡಿಯುವ ನೀರು ಲಭ್ಯವಾಗಲಿದೆ ಎಂದು ಡಾ. ಆರ್. ಬಿ. ಕೊಟ್ನಾಳ ತಿಳಿಸಿದರು.
ಎಸ್. ಎಸ್. ಆವರಣದ ಆಡಳಿತಾಧಿಕಾರಿಗಳಾದ ಆಯ್. ಎಸ್. ಕಾಳಪ್ಪನವರ ಮಾತನಾಡಿ, ವಿದ್ಯಾರ್ಥಿಗಳು ಶಿಸ್ತು, ಸಮಯ, ಪ್ರಯತ್ನ ಎಂಬ ಮೂರು ಸೂತ್ರಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಉತ್ತಮ ಸಾಧನೆ ಮಾಡಬಹುದು. ಶುದ್ಧ ನೀರಿನ ಘಟಕ ಸ್ಥಾಪಿಸಲು ಸಹಕಾರ ನೀಡಿದ ಸಂಸ್ಥೆಯ ಅಧ್ಯಕ್ಷ ಎಂ. ಬಿ. ಪಾಟೀಲ ಮತ್ತು ಪ್ರಧಾನ ಕಾರ್ಯದರ್ಶಿ ಜಿ. ಕೆ. ಪಾಟೀಲ ಅವರಿಗೆ ಕೃತಜ್ಞತೆ ಸಲ್ಲಿಸಿದರು.
ಈ ಕಾರ್ಯಕ್ರಮದಲ್ಲಿ ಪಿಯು ಕಾಲೇಜುಗಳ ಆಡಳಿತಾಧಿಕಾರಿ ಕೆ. ಜಿ. ಪೂಜಾರಿ, ಪ್ರಾಚಾರ್ಯರಾದ ಡಾ. ಜಿ. ಡಿ. ಅಕಮಂಚಿ, ಡಾ. ಬಿ. ವೈ. ಖಾಸನಿಸ, ಕೆ. ಬಿ. ಪಾಟೀಲ, ವಿ. ಪಿ. ನಿಡೋಣಿ, ಪಿ. ಎಸ್. ನಾಯಕ, ಸಿದ್ದು ಬಿರಾದಾರ, ಕಾಲೇಜಿನ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು
ಸಿದ್ದು ತೊರವಿ ಸ್ವಾಗತಿಸಿದರು. ಅಮರೇಶ ಸಾಲಕ್ಕಿ ನಿರೂಪಿಸಿದರು ಸಿದ್ದು ತೋರವಿ ಸ್ವಾಗತಿಸಿದರು ಎಸ್. ಟಿ. ತೇಲಕರ ವಂದಿಸಿದರು.