ವಿಜಯಪುರ: ಮಾಜಿ ಸಚಿವ ದಿ. ಶ್ರೀ ಬಿ. ಎಂ. ಪಾಟೀಲ ಅವರ ಪುಣ್ಯಸ್ಮರಣೆ ಅಂಗವಾಗಿ ಜುಲೈ 1 ರಿಂದ ಜುಲೈ 31ರ ವರೆಗೆ ನಗರದ ಬಿ. ಎಲ್. ಡಿ. ಇ ಡೀಮ್ಡ್ ವಿಶ್ವವಿದ್ಯಾಲಯದ ಶ್ರೀ ಬಿ. ಎಂ. ಪಾಟೀಲ ವೈದ್ಯಕೀಯ ಮಹಾವಿದ್ಯಾಲಯ, ಆಸ್ಪತ್ರೆ ಮತ್ತು ಸಂಶೋಧನೆ ಕೇಂದ್ರದಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ ಆಯೋಜಿಸಲಾಗಿದೆ.
ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ರಾಜೇಶ ಹೊನ್ನುಟಗಿ, ಈ ಶಿಬಿರದಲ್ಲಿ ಉಚಿತವಾಗಿ ನೋಂದಣಿ, ಬಿಪಿ, ಬ್ಲಡ್ ಶುಗರ್, ಇಸಿಜಿ ತಪಾಸಣೆ ನಡೆಸಲಾಗುವುದು. ಅಲ್ಲದೇ, ಶೇ. 50ರ ರಿಯಾಯಿತಿ ದರಲ್ಲಿ ಸಿಬಿಸಿ, ಯುರೀನ್ ರೊಟೀನ್, ಆರ್ ಬಿ ಎಸ್, ಕ್ರಿಯೇಟಿನೈನ್ ತಪಾಸಣೆ ನಡೆಸಲಾಗುವುದು ತಿಳಿಸಿದ್ದಾರೆ.
ಸಾಮಾನ್ಯ ವಾರ್ಡಿಗೆ ದಾಖಲಾಗುವ ರೋಗಿಗಳಿಗೆ ಕೆಲವು ನಿರ್ದಿಷ್ಠ ತಪಾಸಣೆಗಳು ಹಾಗೂ ಔಷಧಿ ಹೊರತು ಪಡಿಸಿ ದಾಖಲಾತಿ, ವೈದ್ಯರು ಮತ್ತು ಶುಶ್ರೂಷಕರ ಸೇವೆ ಹಾಗೂ ಶಸ್ತ್ರಚಿಕಿತ್ಸೆಗಳನ್ನು ಉಚಿತವಾಗಿ ಮಾಡಲಾಗುತ್ತದೆ ಎಂದು ಬಿ. ಎಲ್ ಡಿ ಇ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ರಾಜೇಶ ಹೊನ್ನುಟಗಿ ಮಾಧ್ಯಮ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.