ಕುಡಿಯುವ ನೀರಿನ ಸಮಸ್ಯೆ: ಗ್ರಾ. ಪಂ. ಯತ್ ಮಟ್ಟದಲ್ಲಿ ಕಾರ್ಯಪಡೆ ರಚಿಸಿ ಕಾರ್ಯ ನಿರ್ವಹಿಸಲು ಡಿಸಿ ಡಾ. ದಾನಮ್ಮನವರ ಸೂಚನೆ

ವಿಜಯಪುರ: ಕುಡಿಯುವ ನೀರಿನ ಸಮಸ್ಯೆ ನಿವಾರಿಸುವ ನಿಟ್ಟಿನಲ್ಲಿ ಗ್ರಾ. ಪಂ. ಮಟ್ಟದಲ್ಲಿ ಗ್ರಾ. ಪಂ. ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಕಾರ್ಯಪಡೆ ರಚಿಸಿ ಕಾರ್ಯ ನಿರ್ವಹಿಸುವಂತೆ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. 

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯಲ್ಲಿ ಕುಡಿಯುವ ನೀರಿನ ನಿರ್ವಹಣೆ ಕುರಿತ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ಗ್ರಾಮ ಮಟ್ಟದಲ್ಲಿ ರಚಿತವಾಗುವ ಕಾರ್ಯಪಡೆ ಸಮಿತಿಯಲ್ಲಿ ಪಂಚಾಯತ್ ಅಭಿವೃದ್ದಿ ಅಧಿಕಾರಿ, ವಿಎ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ  ಇಲಾಖೆ ಸಹಾಯಕ ಅಭಿಯಂತರರನ್ನೊಳಗೊAಡ ಸಮಿತಿಯು ಕಾರ್ಯಪಡೆ ಸಮಿತಿ  ಪ್ರತಿ ಶುಕ್ರವಾರ ಸಭೆ ನಡೆಸಿ ಗ್ರಾಮೀಣ ಮಟ್ಟದಲ್ಲಿ ಕುಡಿಯುವ ನೀರಿನ ಸಮಸ್ಯೆ, ಸಮಸ್ಯಾತ್ಮಕ ಗ್ರಾಮಗಳ ವಿವರ, ಕಾಮಗಾರಿಗಳು, ಟ್ಯಾಂಕರ್‌ಗಳ ಲಭ್ಯತೆ, ಖಾಸಗಿ ಬೊರವೆಲ್‌ಗಳ ಮಾಹಿತಿಯನ್ನು ಕಲೆ ಹಾಕಿ, ಕೈಗೊಳ್ಳಬೇಕಾದ ಪರಿಹಾರ ಕಾಮಗಾರಿಗಳ ಕುರಿತು ಆಯಾ ತಾಲೂಕಿನ ತಹಶೀಲ್ದಾರ ಅಧ್ಯಕ್ಷತೆಯಲ್ಲಿರುವ  ತಾಲೂಕಾ ಮಟ್ಟದ ಕಾರ್ಯಪಡೆ ಸಮಿತಿಗೆ ವರದಿಯನ್ನು ಸಲ್ಲಿಸಬೇಕು ಎಂದು ಹೇಳಿದರು.

ತಾಲೂಕಾ ಮಟ್ಟದ ಕಾರ್ಯಪಡೆ ಸಮಿತಿ ಪ್ರತಿ ಶನಿವಾರ ಸಭೆ ನಡೆಸಿ, ವರದಿಯನ್ನು ಕೂಲಂಕೂಷವಾಗಿ ಪರಿಶೀಲನೆ ನಡೆಸಿ ಜಿಲ್ಲಾ ಮಟ್ಟದ ಕಾರ್ಯಪಡೆ ಸಮಿತಿ ವರದಿ ಸಲ್ಲಿಸಬೇಕು ಎಂದು ಸೂಚನೆ ನೀಡಿದರು.

ಮುಂಬರುವ 15 ದಿನಗಳಲ್ಲಿ ಉದ್ಭವಿಸಬಹುದಾದ ನೀರಿನ ಸಮಸ್ಯೆಗಳ ನಿವಾರಣೆಗಾಗಿ ಸೂಕ್ತ ಕ್ರೀಯಾಯೋಜನೆ ಸಿದ್ಧಪಡಿಸಬೇಕು. ಎಲ್ಲ ಖಾಸಗಿ ಬೊರವೆಲ್‌ಗಳನ್ನು ಗುರುತಿಸಿ ನೀರು ಪಡೆಯಲು ಕ್ರಮ ವಹಿಸಬೇಕು. ತಹಶೀಲ್ದಾರ, ಕಾರ್ಯನಿರ್ವಾಹಕ ಅಧಿಕಾರಿಗಳು  ಹಾಗೂ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿಗಳು ಸಮನ್ವಯತೆಯಿಂದ ಕಾಯನಿರ್ವಹಿಸಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಅಗತ್ಯ ಕ್ರಮ ಕೈಗೊಳ್ಳುವಂತೆ ಅವರು ಸೂಚನೆ ನೀಡಿದರು.

ವಿಜಯಪುರ ಡಿಸಿ ಕಚೇರಿಯಲ್ಲಿ ಡಾ. ದಾನಮ್ಮನವರ ಅಧ್ಯಕ್ಷತೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ನಿರ್ವಹಣೆ ಕುರಿತು ಸಭೆ ನಡೆಯಿತು

ಗ್ರಾಮ ಪಂಚಾಯತ್ ಮಟ್ಟದಲ್ಲಿ ಉದ್ಭವಿಸುವ ನೀರಿನ ಸಮಸ್ಯೆಗೆ ಮುಂಚಿತವಾಗಿ ಟ್ಯಾಂಕರ್‌ಗಳ ವ್ಯವಸ್ಥೆ, ಬಾವಿಗಳು, ಬೊರವೆಲ್ ಸೇರಿದಂತೆ ಜಲಮೂಲಗಳ ಬಗ್ಗೆ ಖಚಿತಪಡಿಸಿಕೊಳ್ಳಬೇಕು. ಮುಂಬರುವ ಕುಡಿಯುವ ನೀರಿನ ಸಮಸ್ಯೆಯನ್ನು ಸಮರ್ಪಕವಾಗಿ ಎದುರಿಸಲು ಈಗಿನಿಂದಲೇ ಎಲ್ಲ ಅಧಿಕಾರಿಗಳು ಸನ್ನದ್ಧರಾಗಬೇಕು. ಆದ್ಯತೆ ಮೇಲೆ ಕುಡಿಯುವ ನೀರಿನ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವಂತೆ ಸಂಬAಧಿಸಿದ ಅಧಿಕಾರಿಗಳಿಗೆ ಅವರು ಸೂಚನೆ ನೀಡಿದರು.

ನೀರಿನ ಸಮಸ್ಯೆಗೊಳಪಡಲಿರುವ ಗ್ರಾಮಗಳು : ಬರುವ ಜೂನ್-30ರ ಅಂತ್ಯಕ್ಕೆ ವಿಜಯಪುರ ತಾಲೂಕಿನ 5, ತಿಕೋಟಾ ತಾಲೂಕಿನ 13, ಮುದ್ದೇಬಿಹಾಳ ತಾಲೂಕಿನ 34, ತಾಳಿಕೋಟೆ ತಾಲೂಕಿನ 07, ಇಂಡಿ ತಾಲೂಕಿನ 31, ಚಡಚಣ ತಾಲೂಕಿನ 20, ಸಿಂದಗಿ ತಾಲೂಕಿನ 4 ಹಾಗೂ ಆಲಮೇಲ ತಾಲೂಕಿನ 13 ಗ್ರಾಮಗಳು ಸೇರಿದಂತೆ 124 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗಲಿದೆ.

ಬರುವ ಜುಲೈ 15ರ ಅಂತ್ಯಕ್ಕೆ ಜಿಲ್ಲೆಯ ವಿಜಯಪುರ ತಾಲೂಕಿನ 15, ತಿಕೋಟಾ ತಾಲೂಕಿನ 24, ಬಬಲೇಶ್ವರ ತಾಲೂಕಿನ 36,  ಮುದ್ದೇಬಿಹಾಳ ತಾಲೂಕಿನ 33, ತಾಳಿಕೋಟೆ ತಾಲೂಕಿನ 14, ಕೊಲ್ಹಾರ ತಾಲೂಕಿನ 11, ನಿಡಗುಂದಿ ತಾಲೂಕಿನ 2,  ಇಂಡಿ ತಾಲೂಕಿನ 42, ಚಡಚಣ ತಾಲೂಕಿನ 29, ಸಿಂದಗಿ ತಾಲೂಕಿನ 3, ದೇವರಹಿಪ್ಪರಗಿ ತಾಲೂಕಿನ 11 ಹಾಗೂ ಆಲಮೇಲ ತಾಲೂಕಿನ 34 ಗ್ರಾಮಗಳು ಸೇರಿದಂತೆ 254 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗಲಿದೆ.

ಬರುವ ಜುಲೈ 31ರ ಅಂತ್ಯಕ್ಕೆ ಜಿಲ್ಲೆಯ ವಿಜಯಪುರ ತಾಲೂಕಿನ 21, ತಿಕೋಟಾ ತಾಲೂಕಿನ 24, ಬಬಲೇಶ್ವರ ತಾಲೂಕಿನ 47,  ಮುದ್ದೇಬಿಹಾಳ ತಾಲೂಕಿನ 37, ತಾಳಿಕೋಟೆ ತಾಲೂಕಿನ 15, ಬಸವನಬಾಗೇವಾಡಿ ತಾಲೂಕಿನ 15, ಕೊಲ್ಹಾರ ತಾಲೂಕಿನ 14, ನಿಡಗುಂದಿ ತಾಲೂಕಿನ 2,  ಇಂಡಿ ತಾಲೂಕಿನ 48, ಚಡಚಣ ತಾಲೂಕಿನ 29, ಸಿಂದಗಿ ತಾಲೂಕಿನ 3, ಹಾಗೂ ಆಲಮೇಲ ತಾಲೂಕಿನ 35 ಗ್ರಾಮಗಳು ಸೇರಿದಂತೆ 290 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗಲಿದೆ.

ಕುಡಿಯುವ ನೀರು ಪೂರೈಸುವ ಟ್ಯಾಂಕರ್‌ಗಳ ಲಭ್ಯತೆ : ಜಿಲ್ಲೆಯ ಸಮಸ್ಯಾತ್ಮಕ ಗ್ರಾಮಗಳಲ್ಲಿ ಕುಡಿಯುವ ನೀರು  ಪೂರೈಸಲು ವಿಜಯಪುರ ತಾಲೂಕಿನ 18 ಗ್ರಾಮ ಪಂಚಾಯತಿಗಳ ವ್ಯಾಪ್ತಿಯ 38 ಗ್ರಾಮ-ಜನವಸತಿಗಳಿಗೆ ನೀರು ಪೂರೈಸಲು 107 ಟ್ಯಾಂಕರ್‌ಗಳು, ತಿಕೋಟಾ ತಾಲೂಕಿನ 14 ಗ್ರಾಮ ಪಂಚಾಯತ್ ವ್ಯಾಪ್ತಿಯ 25 ಗ್ರಾಮ-ಜನವಸತಿಗಳಿಗೆ ನೀರು ಪೂರೈಸಲು  128 ಟ್ಯಾಂಕರ್‌ಗಳು, ಬಬಲೇಶ್ವರ ತಾಲೂಕಿನ 14 ಗ್ರಾಮ ಪಂಚಾಯತ್ ವ್ಯಾಪ್ತಿಯ 144 ಗ್ರಾಮ-ಜನವಸತಿಗಳಿಗೆ ನೀರು ಪೂರೈಸಲು   34 ಟ್ಯಾಂಕರ್‌ಗಳು, ಬಸವನಬಾಗೇವಾಡಿ ತಾಲೂಕಿನ 15 ಗ್ರಾಮ ಪಂಚಾಯತ್ ವ್ಯಾಪ್ತಿಯ 53 ಗ್ರಾಮ ಜನವಸತಿಗಳಿಗೆ ನೀರು ಪೂರೈಸಲು 25 ಟ್ಯಾಂಕರ್‌ಗಳು  ಲಭ್ಯವಿವೆ ಎಂದು ತಿಳಿಸಿದರು.

ಅದರಂತೆ ಕೊಲ್ಹಾರ ತಾಲೂಕಿನ 10 ಗ್ರಾಮ ಪಂಚಾಯತ್ ವ್ಯಾಪ್ತಿಯ 35 ಗ್ರಾಮ-ಜನವಸತಿಗಳಿಗೆ ನೀರು ಪೂರೈಸಲು 41 ಟ್ಯಾಂಕರ್‌ಗಳು, ಇಂಡಿ ತಾಲೂಕಿನ 25 ಗ್ರಾಮ ಪಂಚಾಯತ್ ವ್ಯಾಪ್ತಿಯ 48 ಗ್ರಾಮ-ಜನವಸತಿಗಳಿಗೆ ನೀರು ಪೂರೈಸಲು  212 ಟ್ಯಾಂಕರ್‌ಗಳು, ಸಿಂದಗಿ ತಾಲೂಕಿನ 7 ಗ್ರಾಮ ಪಂಚಾಯತ್ ವ್ಯಾಪ್ತಿಯ 9 ಗ್ರಾಮ-ಜನವಸತಿಗಳಿಗೆ ನೀರು ಪೂರೈಸಲು 16 ಟ್ಯಾಂಕರ್‌ಗಳು, ದೇವರಹಿಪ್ಪರಗಿ ತಾಲೂಕಿನ 15 ಗ್ರಾಮ ಪಂಚಾಯತ್ ವ್ಯಾಪ್ತಿಯ 43 ಗ್ರಾಮ-ಜನವಸತಿಗಳಿಗೆ ನೀರು ಪೂರೈಸಲು 51 ಟ್ಯಾಂಕರ್‌ಗಳು, ಆಲಮೇಲ ತಾಲೂಕಿನ 10 ಗ್ರಾಮ ಪಂಚಾಯತ್ ವ್ಯಾಪ್ತಿಯ 10 ಗ್ರಾಮ-ಜನವಸತಿಗಳಿಗೆ ನೀರು ಪೂರೈಸಲು 17 ಟ್ಯಾಂಕರ್‌ಗಳು ಸೇರಿದಂತೆ ಜಿಲ್ಲೆಯ 141 ಗ್ರಾಮ ಪಂಚಾಯತಿಯ 447 ಗ್ರಾಮ-ಜನವಸತಿಗಳಿಗೆ ನೀರು ಪೂರೈಸಲು 631 ಟ್ಯಾಂಕರ್‌ಗಳು ಲಭ್ಯವಿವೆ ಎಂದು ಸಭೆಯಲ್ಲಿ ಮಾಹಿತಿ ನೀಡಲಾಯಿತು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಮಹಾನಗರ ಪಾಲಿಕೆ ಆಯುಕ್ತ ವಿಜಯಕುಮಾರ ಮೆಕ್ಕಳಕಿ, ಇಂಡಿ ಉಪವಿಭಾಗಾಧಿಕಾರಿ ರಾಮಚಂದ್ರ ಗಡದೆ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಆಜೂರ ಸೇರಿದಂತೆ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌