ಮಾದರಿ ಅಂಗನವಾಡಿಯಲ್ಲಿದೆ ಚಿಣ್ಣ ಕಲಿಯಲು ಬೇಕಾದ ಜ್ಞಾನದ ಭಂಡಾರ- ಆಟದೊಂದಿಗೆ ಶಿಕ್ಷಕರು ಮಾಡುವ ಪಾಠ ಬಲು ಸುಂದರ

ವಿಜಯಪುರ: ಖಾಸಗಿ ಶಿಕ್ಷಣ ಸಂಸ್ಥೆಗಳ ಪ್ರಭಾವ ಹೆಚ್ಚಾಗಿರುವ ಇಂದಿನ ದಿನಗಳಲ್ಲಿ ಇಲಾಖೆ, ಗ್ರಾ. ಪಂ. ಆಡಳಿತ ಮಂಡಳಿ ಮತ್ತು ಶಿಕ್ಷಕರು ಮನಸ್ಸು ಮಾಡಿದರೆ ಹೇಗೆ ಮಾದರಿ ಕೆಲಸ ಮಾಡಬಲ್ಲರು ಎಂಬುದಕ್ಕೆ ಸಾಕ್ಷಿಯಾಗಿದೆ ಬಸವ ನಾಡಿನ ಈ ಅಂಗನವಾಡಿ ಕೇಂದ್ರ.  ಇಲ್ಲಿ ಮಕ್ಕಳ ಆಟದ ಜೊತೆಗೆ ಪಾಠವನ್ನು ಕಲಿಸಲಾಗುತ್ತಿದ್ದು, ಎಲ್ಲವೂ ಹೊಸ ಶಿಕ್ಷಣ ನೀತಿಯಂತೆ ನಡೆಯುತ್ತಿರುವುದು ಗಮನಾರ್ಹವಾಗಿದೆ.  ಯಾವುದೇ ಕಾನ್ವೆಂಟ್ ಗಳಿಗೂ ಕಮ್ಮಿ ಇಲ್ಲ ನಮ್ಮ ಅಂಗನವಾಡಿ ಎಂದು ಅಲ್ಲಿ ಪೋಷಕರೇ ಹೇಳುವುದು ಕುತೂಹಲಕ್ಕ ಕೆರಳಿಸುತ್ತಿದೆ.

ಇದು ಬಸವನಾಡು ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಲೋಹಗಾಂವ ಅಂಗನವಾಡಿ ಕೇಂದ್ರ.  ಇತ್ತೀಚೆಗೆ ನಡೆದ ಜಿಲ್ಲಾ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಈ ಅಂಗನವಾಡಿ ಕೇಂದ್ರದ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಹೆಮ್ಮೆಯಿಂದ ಹೇಳಿಕೊಂಡಿದ್ದರು.  ಅಲ್ಲದೇ, ಈ ಅಂಗನವಾಡಿ ಕೇಂದ್ರದ ಮಾದರಿಯಲ್ಲಿ ಜಿಲ್ಲೆಯಲ್ಲಿಯೂ ಅಭಿವೃದ್ಧಿ ಕೆಲಸ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.  ಇದು ಸಚಿವರ ಶಿಕ್ಷಣ ಕಾಳಜಿಯ ಬಗ್ಗೆಯೂ ಶ್ಲಾಘನೆಗೆ ಕಾರಣವಾಗಿತ್ತು.

ಲೋಹಗಾಂವ ಅಂಗನವಾಡಿ ಕೇಂದ್ರ

ಈ ಕೇಂದ್ರಕ್ಕೆ ಭೇಟಿ ನೀಡಿದಾಗ ಕಂಡುಬಂದ ದೃಷ್ಯ ಮನಮೋಹಕವಾಗಿತ್ತು.  ಸಚಿವರು ಹೇಳಿದಂತೆ ಕಲಿಕಾ ವಾತಾರವಣ ಗಮನ ಸೆಳೆಯಿತು.  ಸಚಿವರ ಸೂಕ್ಷ್ಮ ಗ್ರಹಿಕೆಗೆ ಇದು ಸಾಕ್ಷಿಯಾಗಿತ್ತು.ಅಂಗನವಾಡಿ ಕಾರ್ಯಕರ್ತೆ ಗಂಗೂಬಾಯಿ ಕೋಟ್ಯಾಳ ಮತ್ತು ಅಂಗನವಾಡಿ ಸಹಾಯಕಿ ಭಾರತಿ ಹಿರೆಕುರುಬರ ಸಮ್ಮುಖದಲ್ಲಿ ಪುಟ್ಟಪುಟ್ಟ ಪುಟಾಣಿಗಳು ಹೇಳುತ್ತಿದ್ದ ಮಾತುಗಳು, ಹಾಡುತ್ತಿದ್ದ ಗೀತೆಗಳು, ವ್ಯಕ್ತಪಡಿಸುತ್ತಿದ್ದ ಹಾವಭಾವವಗಳು ಮಂತ್ರಮುಗ್ದಗೊಳಿಸುತ್ತಿದ್ದವು.  ಇಲ್ಲಿನ ಅಂಗನವಾಡಿ ಕೇಂದ್ರಕ್ಕೆ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ಕುರ್ಚಿ ಕುರ್ಚಿ ಮತ್ತು ಬೇಂಚ್ ಗಳನ್ನು ನೀಡಿದ್ದು ಇತರರಿಗೆ ಮಾದರಿಯಾಗಿದೆ.  ಮಕ್ಕಳು ಸುಂದರವಾದ ಕುರ್ಚಿಯ ಮೇಲೆ ಕುಳಿತು, ಮೇಜಿನ ಮೇಲೆ ಪುಸ್ತಕಗಳನ್ನು ಇಟ್ಟುಕೊಂಡು ಆಟದ ಜೊತೆಗೆ ಪಾಠ ಕೇಳುತ್ತ, ಹಾಡು ಹೇಳುತ್ತ ಬೆರೆಯುತ್ತಿದ್ದ ದೃಷ್ಯ ಭಾರತದ ಅನೇಕತೆಯಲ್ಲಿ ಏಕತೆಗೆ ಸಾಕ್ಷಿಯಾಗಿತ್ತು.

 

ಇಲ್ಲಿನ ಅಂಗನವಾಡಿ ಕಾರ್ಯಕರ್ತೆರು ಮಾಡುವ ಪಾಠ, ಆಂಗಿಕ ಭಾಷೆಯೊಂದಿಗೆ ಕಲಿಸಿ ಕೊಡುವ ಹಾಡುಗಳು ಮಕ್ಕಳನ್ನು ಇನ್ನಿಲ್ಲದಂತೆ ಸೆಳೆಯುತ್ತಿದೆ.  ಬಣ್ಣಬಣ್ಣದ ಕುರ್ಚಿಗಳು, ವಿಶಾಲವಾದ ಬೆಂಚ್, ಅಂಗನವಾಡಿ ಕೇಂದ್ರದ ತುಂಬ ಮಕ್ಕಳಿಗೆ ಕುತೂಹಲದಿಂದ ಕಲಿಯುವಂತಾಗಲು ಅಂಟಿಸಲಾಗಿರುವ ಚಿತ್ರಸಹಿತ ಮಾಹಿತಿಯನ್ನು ಹೊಂದಿರುವ ಪೋಸ್ಟರ್ ಗಳು ಎಂಥವರೂ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತೆ ಮಾಡುತ್ತಿವೆ.  ಅಲ್ಲದೇ, ಮಕ್ಕಳು ಆಟವಾಡಲು ಜಾರಗುಂಡಿ, ಕುದುರೆ, ಸೈಕಲ್ ಕೂಡ ಮಕ್ಕಳನ್ನು ಇನ್ನಿಲ್ಲದಂತೆ ಸೂಜಿಗಲ್ಲಿನಂತೆ ಅಂಗನವಾಡಿಗೆ ಸೆಳೆಯುತ್ತಿದೆ.

ವಿಜಯಪುರ ತಾಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಎಸ್. ಎ. ಮ್ಯಾಗೇರಿ ಹೇಳುವಂತೆ, ಮಕ್ಳಳ ಮಾನಸಿಕ ಮತ್ತು ದೈಹಿಕ ಬೆಳೆವಣಿಗೆಗೆ ರಾಷ್ಟ್ರೀಯ ಶಿಕ್ಷಣ ನೀತಿ ಅಡಿಯಲ್ಲಿ ಆಟದೊಂದಿಗೆ ಪಾಠ ಪರಿಕಲ್ಪನೆಯಲ್ಲಿ ಅವರಿಗೆ ಬೇಕಾಗುವ ಮತ್ತು ಸ್ಥಳೀಯವಾಗಿ ಸಿಗುವ ಸಾಮಗ್ರಿಗಳನ್ನ ತರಿಸಲಾಗಿದೆ.  ಬಣ್ಣಗಳು, ಮರಗಳು, ಗಿಡಗಳು, ಮಳೆ, ಗಾಳಿ, ಬಿಸಿಲು, ವಿಷಯಗಳ ಪರಿಚಯ, ಕ್ಲಾಲೆಂಡರ್, ದಿನಾಂಕ, ವರ್ಷದಲ್ಲಿ ಎಷ್ಟು ವಾರಗಳು ಬರುತ್ತವೆ? ವರ್ಷದಲ್ಲಿ ತಿಂಗಳುಗಳು ಮುಂತಾದ ಸಾಮಾನ್ಯ ಜ್ಞಾನದ ಜೊತೆಗೆ ಅವರ ಕಲಿಕಾ ಗುಣಮಟ್ಟ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.

 

ಅಂಗನವಾಡಿ ಮೇಲ್ವಿಚಾರಕಿ ಸುರೇಖಾ ತೇಲಿ, ಈ ಅಂಗನವಾಡಿ ಬಗ್ಗೆ ಅಪಾರ ಹೆಮ್ಮೆ ವ್ಯಕ್ತಪಡಿಸಿದ್ದು, ಈ ಅಂಗನವಾಡಿ ಕೇಂದ್ರದಲ್ಲಿ 35 ಮಕ್ಕಳಲ್ಲಿ 30 ಮಕ್ಕಳು ಬರುತ್ತಾರೆ.  ಚೇರ್ ಮತ್ತು ಟೇಬಲ್ ಗಳನ್ನು ಗ್ರಾ. ಪಂ. ನವರು ನೀಡಿ್ದ್ದಾರೆ.  ಶಾಲಾಪೂರ್ವ ಶಿಕ್ಷಣಕ್ಕೆ ಒಳಪಡಿಸಲಾಗುತ್ತದೆ.  ಈ ಮಕ್ಕಳಿಗೆ ಭಾಷಾ ಬೆಳವಣಿಗೆ ಭಾವನಾತ್ಮಕ ಬೌದ್ಧಿಕ ಬೆಳವಣಿಗೆ ನೀಡುತ್ತೇವೆ.  ಗ್ರಾ. ಪಂ. ಸದಸ್ಯರೂ ಈ ಕೇಂದ್ರದ ಅಭಿವದ್ಧಿಗೆ ನೆರವು ನೀಡುತ್ತಿದ್ದಾರೆ.  ಪ್ರಾಥಮಿಕ ಶಾಲೆಗೆ ಹೋಗಲು ಮಕ್ಕಳು ಇಷ್ಟ ಪಡುವುದಿಲ್ಲ.  ಇಲ್ಲಿ 3- 6 ವರ್ಷದ ಮಕ್ಕಳಿಗಕೆ ನಾವು ಕಲಿಕೆಯ ಮೂಲಕ ಹೇಳಿಕೊಟ್ಟು ಅಭ್ಯಾಸ ಮಾಡಿಸುತ್ತೇವೆ.  ಆ ಮಕ್ಕಳು ಪ್ರಾಥಮಿಕ ಶಾಲೆಗಳಿಗೆ ಹೋಗಲು ತಯಾರು ಮಾಡುತ್ತೇವೆ.  ಖಾಸಗಿ ಕಾನ್ವೆಂಟ್ ಗಳಲ್ಲಿ ಪಾಠಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಾರೆ.  ನಮ್ಮಲ್ಲಿ ಆಟದ ಮೂಲಕ ಪಾಠ ಕಲಿಸುತ್ತೇವೆ.  ಪ್ರತಿಯೊಂದು ಅಕ್ಷರ ಅಭ್ಯಾಸ ಮಾಡಿಸುವ ಜೊತೆಗೆ ಅವರಲ್ಲಿರುವ ಕ್ರಿಯಾತ್ಮಕ ಚಟುವಟಿಕೆಗಳನ್ನು ಹೊರಗೆ ತೆಗೆಯುತ್ತೇವೆ.  ಅವರಿಗೆ ಆ ನಿಟ್ಟಿನಲ್ಲಿ ಪ್ರೋತ್ಸಾಹ ನೀಡಿ ಬೆಳೆಸುತ್ತೇವೆ.  ಮುಂಚೆ ಮಕ್ಕಳ ಸಂಖ್ಯೆ ಕಡಿಮೆಯಿತ್ತು.  ಈಗ ಹೆಚ್ಚಾಗಿದೆ.  ಕಾನ್ವೆಂಟ್ ಗಿಂತಲೂ ನಮ್ಮ ಅಂಗನವಾಡಿ ಕೇಂದ್ರ ಚೆನ್ನಾಗಿದೆ ಎಂದು ಅರಿತ ಪೋಷಕರು ತಮ್ಮ ಮಕ್ಕಳನ್ನು ಅಂಗನವಾಡಿಗೆ ಕಳುಹಿಸುತ್ತಿದ್ದಾರೆ.  ತಾವೇ ತಂದು ಬಿಟ್ಟು, ಕರೆದುಕೊಂಡು ಹೋಗುತ್ತಾರೆ.  ವಿದ್ಯಾರ್ಥಿಗಳು ಕೂಡ ಇತರ ಮಕ್ಕಳೊಂದಿಗೆ ಬೆರೆಯುವುದರಿಂದ ಉತ್ತಮ ವಾತಾವರಣವಿದೆ.  ಐದು ಮೂಲೆಗಳಲ್ಲಿ ಬೇರೆ ಬೇರೆ ಚಟುವಟಿಕೆಗಳನ್ನು ನಡೆಸುವುದರಿಂದ ಮಕ್ಕಳು ತರಗತಿಗಳಿಗೆ ಬರಲು ತುದಿಗಾಲ ಮೇಲೆ ನಿಂತಿರುತ್ತವೆ ಎಂದು ಸಂತಸ ವ್ಯಕ್ತಪಡಿಸಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಕೆ. ಕೆ. ಚವ್ಹಾಣ ಮಾತನಾಡಿ, ಲೋಹಗಾಂವ ಮಕ್ಕಳ ಅಂಗನವಾಡಿ ಕೇಂದ್ರ ಆಕರ್ಷಣೆಯ ಕೇಂದ್ರವಾಗಿದೆ.  ಇಲ್ಲಿಕ ಸಕಲ ಮೂಲಭೂತೌ ಸೌಕರ್ಯಗಳಿವೆ.  ಐಡಿಕಾರ್ಡ್, ಆರೋಗ್ಯ ತಪಾಸಣೆ, ಭಾಷಾ ಬೆಳವಣಿಗೆ, ದೈಹಿಕ ಬೆಳವಣಿಗೆ ಜೊತೆ ಮಕ್ಕಳ ಜೊತೆ ಗರ್ಭಿಣಿ ಮಹಿಳೆಯರಿಗೂ ನಿಗದಿತ ಆಹಾರ ಮಾಡುತ್ತಿದ್ದೇವೆ.  ಇಲ್ಲಿನ ಮಾದರಿಯನ್ನು ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಮತ್ತು ಜಿ. ಪಂ. ಸಿಇಓ ರಾಹುಲ ಶಿಂಧೆ, ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ಕೂಡ ಶ್ಲಾಘಿಸಿದ್ದಾರೆ.  ಕಾನ್ವೆಂಟ್ ಗಳಲ್ಲಿ ಹೋಂ ವರ್ಕ ಹೆ್ಚ್ಚಿರುತ್ತದೆ.  ಬುಕ್, ಬ್ಯಾಗ್ ಇರುತ್ತವೆ.  ನಮ್ಮಲ್ಲಿ ಮಕ್ಕಳಿಗೆ ಸ್ವಾತಂತ್ರ್ಯ ಹೆಚ್ಚಾಗಿರುತ್ತದೆ.  ಮಕ್ಕಳು ತಮ್ಮದೇ ರೀತಿಯಲ್ಲಿ ಮಾತನಾಡುತ್ತಾರೆ, ತಮ್ಮದೇ ರೀತಿಯಲ್ಲಿ ಆಟವಾಡುತ್ತಾರೆ.  ಭಾಷಾ ಬೆಳವಣಿಗೆಯಾಗುತ್ತದೆ.  ನಮ್ಮ ಕಾರ್ಯಕರ್ತೆಯರು ಕೂಡ ಆಟ ಮತ್ತು ಪಾಠಗಳನ್ನು ಬೆಳಿಗ್ಗೆ 10 ರಿಂದ ಮಧ್ಯಾಹ್ನ 1ರ ವರೆಗೆ ಎಲ್ಲ ಕ್ರಿಯಾತ್ಮಕ ಚಟುವಟಿಕೆಗಳನ್ನು ತೊಡಗಿಸಿ ಕೊಡುತ್ತಾರೆ.  ಇಲ್ಲಿನ ಗ್ರಾ. ಪಂ. ನವರು ಮಕ್ಕಳಿಗೆ ಬಾಲಸ್ನೇಹಿ ವ್ಯವಸ್ಥೆ ಕಲ್ಪಿಸಿದ್ದಾರೆ.  ಜಿಲ್ಲಾದ್ಯಂತ ಲೋಹಗಾಂವ ಮಾದರಿಯಲ್ಲಿ ಅಂಗನವಾಡಿ ಕೇಂದ್ರಗಳಲ್ಲಿ ಅಭಿವೃದ್ಧಿ ಮಾಡುವಂತೆ ಸೂಚನೆ ನೀಡಿದ್ದಾರೆ.  ಮಕ್ಕಳು ಮನೆಗೆ ಹೋಗಿ ಕಥೆ ಹೇಳುತ್ತಾರೆ.  ಆಗ, ತಾಯಂದಿರು ನಮ್ಮ ಬಳಿಗೆ ಬಂದು ನನ್ನ ಮಗ ಕ್ರೀಯಾಶೀಲನಾಗಿದ್ದಾನೆ.  ಇಂಗ್ಲಿಷನ್ ನಲ್ಲಿ ಎಬಿಸಿಡಿ, ಅ, ಆ ಇ, ಈ ಓದುತ್ತಾನೆ.  ಆತನ ಬಗ್ಗೆ ಇನ್ನು ಕಾಳಜಿ ವಹಿಸಿ.  ನಮಗೆ ಕಾನ್ವೆಂಟ್ ಬೇಡ, ಅಂಗನವಾಡಿ ಇರಲಿ.  ಸಂಸ್ಕಾರ ಕಲಿಸಿದ್ದೀರಿ ಎಂದು ಹೇಳುತ್ತಾರೆ.  ಇದು ನಮಗೆಲ್ಲ ಹೆಮ್ಮೆಯ ಸಂಗತಿ ಎಂದು ತಿಳಿಸಿದರು.

ಗ್ರಾಮದ ಮಹಿಳೆ ಶುೃತಿ ಕಾಂಬಳೆ ಮಾತನಾಡಿ, ಲೋಹಗಾಂವ ಅಂಗನವಾಡಿ ಯಲ್ಲಿ ನಮ್ಮ ಮಗ ನಕುಲ ಕಾಂಬಳೆ ಹೋಗುತ್ತಾರೆ.  ಎರಡು ವರ್ಷಗಳಿಂದ ಹೋಗುತ್ತಿರುವುದರಿಂದ ಇಲ್ಲಿ ಊಟ, ಆಟವಾಡಲು ಸಕಲಣೆಗಳು, ಬೇಂಚ್ ಗಳಿವೆ ಸ್ವಚ್ಛತೆ ಇದೆ.  ಶೇಂಗಾ ಬೆಲ್ಲ, ಹಾಲು, ಉಪಹಾರ, ಅವಲಕ್ಕಿ ಎಲ್ಲ ನೀಡುತ್ತಾರೆ.  ಇಲ್ಲಿನ ಮೇಡಂ ಹಾಡನ್ನು ಕಲಿಸಿದ್ದಾರೆ.  ಖಾಸಗಿ ಶಾಲೆಗಳಿಗೆ ನಾವು ಹಣ ನೀಡಬೇಕಾಗುತ್ತದೆ.  ಆದರೆ, ಇಲ್ಲಿ ಉಚಿತವಾಗಿ ಖಾಸಗಿ ಶಾಲೆಗಳಿಗಿಂತ ಉತ್ತಮ ಶಿಕ್ಷಣ ನೀಡಲಾಗುತ್ತಿದೆ.  ಹೊಸ ಶಿಕ್ಷಣ ನೀತಿಯಂತೆ ಬೋಧನೆ ಮಾಡುತ್ತಿದ್ದಾರೆ.  ಪಾಠದ ಜೊತೆಗೆ ನೀಡಲಾಗುವು ಗುಣಮಟ್ಟದ ಆಹಾರ ನಮ್ಮ ಮಗುವಿನ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾಗಿದೆ.  ಅಲ್ಲದೇ, ನಮ್ಮ ಮನೆಯ ಸುತ್ತಮುತ್ತಲಿನವರು ಎಲ್ಲರೂ ಇಲ್ಲಿಗೆ ಕಳುಹಿಸುತ್ತಾರೆ.  ನಮ್ಮ ಮಗ ಕನ್ನಡವವಷ್ಟೇ ಅಲ್ಲ, ಇಂಗ್ಲಿಷ್ ಹಾಡನ್ನೂ ಹಾಡುತ್ತಾನೆ.  ಆತನ ಮಾತು ಕೇಳುತ್ತಿದ್ದರೆ ಹೊತ್ತು ಹೋಗಿರುವುದು ಗೊತ್ತೆ ಆಗುವುದಿಲ್ಲ ಎಂದು ಸಂತಸ ವ್ಯಕ್ತಪಡಿಸಿದರು.

ಇಲಾಖೆಯ ನಿರೂಪಣಾಧಿಕಾರಿ ಗೀತಾ ಗುತ್ತರಗಿ ಮಠ ಮತ್ತು ಅಂಗನವಾಡಿ ಮೇಲ್ವಿಚಾರಕಿ ಶಹನಾಜ ಸಾಂಗಲಿಕರ ಮಾತನಾಡಿ ಗ್ರಾ. ಪಂ. ಸದಸ್ಯರು ಮತ್ತು ಪೋಷಕರು ಕಾನ್ವೆಂಟ್ ಸ್ಕೂಲುಗಳಿಗೆ ಕಳುಹಿಸುವ ಬದಲು ಅಂಗನವಾಡಿಗಳಿಗೆ ಕಳುಹಿಸುತ್ತಾರೆ. ಇದರಿಂದ ಅವರಿಂದ ಉಚಿತ ಹಣದ ಜೊತೆಗೆ ಉತ್ತಮ ಶಿಕ್ಷಣ ಸಿಗುತ್ತದೆ.  ಹೊರಗಡೆ ರೂ. 1.20 ವೆಚ್ಚ ಉಳಿತಾಯ, ಇಲ್ಲಿ ಅಂಗನವಾಡಿ ಕಾರ್ಯಕರ್ತರು ಉತ್ಸಾಹದಿಂದ ಕೆಲಸ ಮಾಡುತ್ತಾರೆ.  ಬಾಲಿಕಾ ಸಮಿತಿಯವರು ಸಭೆ ಕರೆದಾಗ ಪೋಷಕರೂ ಬಂದು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ.  ಇದು ನಮ್ಮ ಇಲಾಖೆಗೆ ಹೆಮ್ಮೆಯ ವಿಷಯವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

Leave a Reply

ಹೊಸ ಪೋಸ್ಟ್‌