ಹಸುವಿನ ಅಂತ್ಯಕ್ರಿಯೆ ನೆರವೇರಿಸಿ ಗೋಭಕ್ತಿ ತೋರಿದ ಬಸವನಾಡಿನ ಮಾತೋಶ್ರೀ ಕಾಲನಿ ನಿವಾಸಿಗಳು

ವಿಜಯಪುರ: ಬೀಡಾಡಿ ದನಗಳೆಂದರೆ ಸಾಕು ಮಾಲಿಕರು ಗೊತ್ತಾಗದ ಕಾರಣ ಸಾರ್ವಜನಿಕರೂ ಅವುಗಳನ್ನು ನಿರ್ಲಕ್ಷ್ಯಿಸುವುದುಂಟು.  ಆದರೆ, ತಮ್ಮ ಬಡಾವಣೆಯಲ್ಲಿ ಕಳೆದ ಹಲವಾರು ವರ್ಷಗಳಿಂದ ತಿರುಗಾಡಿಕೊಂಡಿದ್ದ ಹಸು ಅಸುನೀಗಿಡಾದ ಅದನ್ನು ಅಂತ್ಯಕ್ರಿಯೆ ನೆರವೇರಿಸುವ ಮೂಲಕ ಬಸವ ನಾಡಿನ ಜನ ಗಮನ ಸೆಳೆದಿದ್ದಾರೆ.

ಮಾತೋಶ್ರಿ ಕಾಲನಿಯಲ್ಲಿ ಅಸುನೀಗಿರುವ ಆಕಳು

ನಗರದ ವಾರ್ಡನಂ. 12ರಲ್ಲಿ ಬರುವ ಮಾತೋಶ್ರೀ ಕಾಲನಿಯಲ್ಲಿ ಕಳೆದ ಹಲವಾರು ವರ್ಷಗಳಿಂದ ಬೀಡಾಡಿ ಆಕಳೊಂದು ತಿರುಗಾಡಿಕೊಂಡಿತ್ತು.  ವಿಜಯ ಟಾಯರ್ ಹಿಂದುಗಡೆ ಬರುವ ಬಡಾವಣೆಯಲ್ಲಿ ಬರುವ ಈ ಪ್ರದೇಶದಲ್ಲಿನ ಈ ಹಸು ಸಾವನ್ನಪ್ಪಿದೆ.  ಈ ವಿಷಯ ತಿಳಿದ ಬಟಾವಣೆ ನಿವಾಸಿಗಳು ಪೂಜೆ ಸಲ್ಲಿಸಿ ಹಸುವಿನ ಅಂತ್ಯಕ್ರಿಯೆ ಮಾಡಿ ಮಾನವೀಯತೆ ತೋರಿದ್ದಾರೆ.  ಇದೇ ಪ್ರದೇಶದ ರವಿ ಶರಣಪ್ಪ ಎಂಬುವರು ತಮ್ಮ ಸ್ವಂತ ಜಾಗದಲ್ಲಿ ಹಸುವಿನ ಅಂತ್ಯಕ್ರಿಯೆ ನೆರವೇರಿಸಲು ಅವಕಾಶ ಮಾಡಿಕೊಟ್ಟು ಗೋವುಗಳ ಬಗ್ಗೆ ಇರುವ ಭಕ್ತಿಗೆ ಸಾಕ್ಷಿಯಾಗಿದ್ದಾರೆ.  ಎಲ್ಲ ವಿಧಿ ವಿಧಾನಗಳೊಂದಿ ಬೀಡಾಡಿ ಆಕಳ ಅಂತ್ಯಕ್ರಿಯೆ ನೆರವೇರಿದ್ದು, ಬಡಾವಣೆಯ ನಿವಾಸಿಗಳು ಇದಕ್ಕೆ ಸಾಕ್ಷಿಯಾಗಿದ್ದಾರೆ.

ಈ ಸಂದರ್ಭದಲ್ಲಿ ಮಾತೋಶ್ರಿ ಕಾಲನಿ ನಿವಾಸಿಗಳಾದ ಸುಭಾಸ ಶರಣಪ್ಪ ಉಮರಾಣಿ, ಸಂತೋಷ ಶರಣಪ್ಪ ಉಮರಾಣಿ, ಸಾವಿತ್ರಿ ಸುರೇಶ ಉಮರಾಣಿ, ಬಡಾವಣೆಯ ಪ್ರಮುಖರಾದ ಮಹೇಶ ಪೀರಗೌಡ್ರ,  ಪ್ರಕಾಶ ಯಮನಪ್ಪ ಹಲಕಟ್ಟಿ, ಗಂಗಾಧರ ಬಡಿಗೇರ, ಮುತೃಂಜಯ ಎಸ್. ಹಿರೇಮಠ, ತಾನಾಜಿ ಚವ್ಹಾಣ, ರಮೇಶ ಜಾಧವ, ಚನ್ನಪ್ಪ ಚವ್ಹಾಣ, ವಿನೋದ ಚವ್ಹಾಣ, ಮರಗು ಚವ್ಹಾಣ, ಸಂಭಾಜಿ ಚವ್ಹಾಣ, ಮಹಾದೇವ ಚವ್ಹಾಣ, ಸತೀಶ ಬಡಿಗೇರ, ಉಮಾ ಉಪ್ಪಿನ, ಸಂತೋಷ, ಕುಮೇಶ ಶರಣಪ್ಪ ಅಂಬಿ,ಅಶೋಕ ಶಿರಶ್ಯಾಡ ಹಾಗೂ ಬಡಾವಣೆಯ  ಗಣ್ಯರು, ಹಿರಿಯರು, ಮಹಿಳೆಯರು, ಮಕ್ಕಳು ಈ ಅಂತ್ಯಕ್ರಿಯೆ ಸಂದರ್ಭದಲ್ಲಿ ಉಪಸ್ಥಿತರಿದ್ದದ್ದು ಗಮನಾರ್ಹವಾಗಿದೆ.

Leave a Reply

ಹೊಸ ಪೋಸ್ಟ್‌