ವಿಜಯಪುರ: ವಚನಪಿತಾಮಹ ಡಾ. ಫ.ಗು.ಹಳಕಟ್ಟಿ ಜಯಂತಿಯನ್ನು ನಗರದ ಬಿ.ಎಲ್.ಡಿ.ಇ. ಸಂಸ್ಥೆಯಲ್ಲಿ ಆಚರಿಸಲಾಯಿತು.
ಸಂಸ್ಥೆಯ ಆವರಣದಲ್ಲಿರುವ ಸಂಶೋಧನ ಕೇಂದ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಳಕಟ್ಟಿಯವರ ಸಮಾಧಿಗೆ ಗಣ್ಯರು ನಮನ ಸಲ್ಲಿಸಿದರು. ಅಲ್ಲದೇ ಹಳಕಟ್ಟಿಯವರ ಭಾವಚಿತ್ರ ಹಾಗೂ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.
ಈ ಸಂದರ್ಭದಲ್ಲಿ ಹಳಕಟ್ಟಿಯವರ ಮರಿಮೊಮ್ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಬಿ.ಎಲ್.ಡಿ.ಇ. ಸಂಸ್ಥೆಯ ವತಿಯಿಂದ ಮುಖ್ಯ ಆಡಳಿತಾಧಿಕಾರಿ ಡಾ. ಆರ್.ಬಿ.ಕೊಟ್ನಾಳ ಅವರು ಹಳಕಟ್ಟಿಯವರ ಕುಟುಂಬಸ್ಥರಿಗೆ ಗೌರವಧನದ ಚೆಕ್ ವಿತರಿಸಿದರು. ಹಳಕಟ್ಟಿಯವರ ಮೊಮ್ಮಗ ಗಿರೀಶ ಹಳಕಟ್ಟಿ, ಅವರ ಪತ್ನಿ ಸುಜಾತಾ ಹಳಕಟ್ಟಿ ಮತ್ತು ಮರಿಮೊಮ್ಮಕ್ಕಳಾದ ಸುಮನ್ ಹಳಕಟ್ಟಿ ಹಾಗೂ ಗುರುಪುತ್ರ ಹಳಕಟ್ಟಿ ಚೆಕ್ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಬಿ.ಎಲ್.ಡಿ.ಇ. ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿ ಡಾ. ಆರ್.ಬಿ.ಕೊಟ್ನಾಳ, ಬಿ.ಎಲ್.ಡಿ.ಇ. ಡೀಮ್ಡ್ ವಿಶ್ವವಿದ್ಯಾಲಯದ ರಜಿಸ್ಟ್ರಾರ್ ಡಾ. ಆರ್.ವಿ.ಕುಲಕರ್ಣಿ, ಆಡಳಿತಾಧಿಕಾರಿಗಳಾದ ಆಯ್.ಎಸ್.ಕಾಳಪ್ಪನವರ, ಕೆ.ಜಿ.ಪೂಜಾರಿ, ಡಾ. ಎಂ.ಎಸ್.ಮದಭಾವಿ, ಎ.ಬಿ.ಬೂದಿಹಾಳ, ಎಸ್.ಬಿ.ಆಟ್ರ್ಸ್ ಮತ್ತು ಕೆ.ಸಿ.ಪಿ. ವಿಜ್ಞಾನ ಮಹಾವಿದ್ಯಾಲಯ ಹಾಗೂ ಎಸ್.ಎಸ್. ಪಿ.ಯು. ಕಾಲೇಜಿನ ಪ್ರಾಚಾರ್ಯರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.
ಇದಕ್ಕೂ ಮೊದಲು ನಡೆದ ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಮಹಾನಗರ ಪಾಲಿಕೆ ಆಯುಕ್ತ ಸೌದಾಗರ, ಉಪಆಯುಕ್ತ ಮಹಾವೀರ ಬೋರಣ್ಣವರ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕರಾದ ಬಿ.ನಾಗರಾಜ, ಮುಖಂಡರಾದ ಕೆ.ಎಫ್.ಅಂಕಲಗಿ, ವಿದ್ಯಾವತಿ ಅಂಕಲಗಿ, ಸಂಗಮೇಶ ಮೇತ್ರಿ, ಸೇರಿದಂತೆ ನಾನಾ ಅಧಿಕಾರಿಗಳು ಬಿ.ಎಲ್.ಡಿ.ಇ. ಸಂಸ್ಥೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.