ವಿಜಯಪುರ: ನಗರದ ಪ್ರತಿಷ್ಠಿತ ಬಿ. ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಚರ್ಮರೋಗ ವಿಭಾಗ ಮತ್ತು ವಿಶ್ವದ ಹೆಸರಾಂತ ಇಟಲಿಯ ಡೆಕಾ(DEKA) ಲೇಸರ್ ಕಂಪನಿ ನಡುವೆ ಸಿಂಗಾಪುರದಲ್ಲಿ ಒಡಂಬಡಿಕೆ ನಡೆದಿದೆ.
ಸಿಂಗಾಪುರದಲ್ಲಿ ನಡೆಯುತ್ತಿರುವ 25ನೇ ಜಾಗತಿಕ ಚರ್ಮರೋಗ ಸಮ್ಮೇಳನದಲ್ಲಿ ಈ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಬಿ.ಎಲ್.ಡಿ.ಇ ವಿಶ್ವವಿದ್ಯಾಲಯದ ಸಮಉಪಕುಲಪತಿ ಡಾ. ಅರುಣ ಇನಾಮದಾರ ಮತ್ತು ಇಟಲಿಯ ಡೆಕಾ ಲೇಸರ ಕಂಪನಿಯ ಡೈರೆಕ್ಟರ್ ಜನರಲ್ ಪಾವಲೋ ಸಾಲ್ವಾಡಿಒ ಮಧ್ಯೆ ಈ ಒಡಂಬಡಿಕೆಗೆ ಸಹಿ ಹಾಕಲಾಗಿದೆ.
ಈ ಒಡಂಬಡಿಕೆಯಂತೆ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದಲ್ಲಿ ಲೇಸರ್ ಅಕಾಡೆಮಿ ಸ್ಖಾಪನೆಯಾಗಲಿದೆ. ಇದರಿಂದ ವಿದ್ಯಾರ್ಥಿಗಳ ವಿನಿಮಯ, ಜಂಟಿ ಸಂಶೋಧನೆಗೆ ಅವಕಾಶ ಸಿಗಲಿದೆ. ಅಲ್ಲದೇ, ಲೇಸರ ಅಕಾಡೆಮಿಯಿಂದ ರಾಷ್ಟ್ರೀಯ ಮಟ್ಟದ ತರಬೇತಿ ನೀಡುವ ಮೂಲಕ ಬಿ.ಎಲ್.ಡಿ.ಇ ಡೀಮ್ಮ್ ವಿಶ್ವವಿದ್ಯಾಲಯ ಪ್ರಮುಖ ಪಾತ್ರ ವಹಿಸಲಿದೆ.
ಇದೇ ವೇಳೆ, ಡಾ. ಅರುಣ ಇನಾಮದಾರ ಅವರು, ಚರ್ಮರೋಗ ಚಿಕಿತ್ಸೆಯಲ್ಲಿ ಕೃತಕ ಬುದ್ದಿಮತ್ತತೆ
ಕುರಿತು ಪ್ರಬಂಧ ಮಂಡಿಸಿದ್ದಾರೆ. ಈ ಸಮ್ಮೇಳನದಲ್ಲಿ ವಿಶ್ವದ ನಾನಾ ದೇಶಗಳಿಂದ 20 ಸಾವಿರ ಜನ ಚರ್ಮರೋಗ ತಜ್ಞರು ಭಾಗವಹಿಸಿದ್ದರು.