ವಿಜಯಪುರ: ಪರಿಸರ ಸಂರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯ. ಮನುಷ್ಯನು ಪರಿಸರವನ್ನು ಬಿಟ್ಟು ಬದುಕಲಾರ ಎಂದು ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಜೈವಿಕ ಮಾಹಿತಿ ವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಜಾಯ್ ಹೊಸಮನಿ ಹೇಳಿದರು.
ವಿಜಯಪುರ ತಾಲೂಕಿನ ಹಿಟ್ಟಿನಹಳ್ಳಿಯಲ್ಲಿ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ವಿಶ್ವವಿದ್ಯಾನಿಲಯದ ರಾಷ್ಟಿçÃಯ ಸೇವಾ ಯೋಜನೆ ಕೋಶ ಮತ್ತು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ರಾಷ್ಟಿçÃಯ ಸೇವಾ ಯೋಜನೆಯ ಸಹಯೋಗದಲ್ಲಿ ಎನ್.ಎಸ್.ಎಸ್ ಮುಕ್ತ ಹಾಗೂ ಬ ಘಟಕದ ವತಿಯಿಂದ ಅಮೃತ ಸಮುದಾಯ ಅಭಿವೃದ್ಧಿ ಯೋಜನೆ ಅಡಿಯಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ವಿಶೇಷ ಶಿಬಿರದ ನಾಲ್ಕನೇ ದಿನದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮನುಷ್ಯನಿಗೆ ಪರಿಸರದಲ್ಲಿ ಸಿಗುವ ಗಾಳಿ, ನೀರು, ಸ್ವಚ್ಚವಾದ ವಾತಾವರಣ, ದಿನನಿತ್ಯದ ಅಗತ್ಯಕ್ಕೆ ಬೇಕಿರುವ ಕೇವಲ ಮೂಲಭೂತ ಅಂಶಗಳು ಅತೀ ಅವಶ್ಯವಾಗಿ ಬೇಕಾಗುವುದು. ಅಗತ್ಯವಿರುವುದಷ್ಟು ಬಿಟ್ಟು ಹೆಚ್ಚಾಗಿ ಬಳಸುತ್ತಿರುವುದರಿಂದ ಪರಿಸರ ನಾಶವಾಗುತ್ತಿದೆ ಎಂದು ಅವರು ಹೇಳಿದರು.
ಪರಿಸರದಲ್ಲಿ ಅಗತ್ಯವಾಗಿ ಬೇಕಾಗಿರುವುದೆ ನೀರು, ಗಾಳಿ. ಇದಕ್ಕಾಗಿ ನಾವು ಪರದಾಡಿದಷ್ಟೇ, ನಮ್ಮ ಮುಂದಿನ ಪೀಳಿಗೆ ಪರದಾಡಬಾರದು, ಅದಕ್ಕಾಗಿ ಪ್ರತಿ ಮನೆ-ಮನೆಯಲ್ಲಿಯೂ ಮರ-ಗಿಡಗಳನ್ನು ಬೆಳೆಸಿ, ನೀರನ್ನು ಹಿತಮಿತವಾಗಿ ಬಳಸುವುದನ್ನು ಕಲಿಯೋದು ಅಗತ್ಯ ಎಂದು ಅವರು ಹೇಳಿದರು.
ಸಹಾಯಕ ಪ್ರಾಧ್ಯಾಪಕ ಸಂದೀಪ ನಾಯಕ ಮಾತನಾಡಿ, ಪ್ರಕೃತಿ ವಿಷಯ ಬಂದಾಗ ತುಂಬಾ ಗಂಭೀರವಾಗಿರುವುದನ್ನು ಕಲಿಯುವುದು ಅವಶ್ಯ. ನಮ್ಮಿಂದ ಪರಿಸರವಲ್ಲ. ಪರಿಸರದಿಂದ ನಾವು ಎಂಬುದನ್ನು ಅರಿಯ ಬೇಕು. ಕವಿ ಡಿ. ವಿ. ಗುಂಡಪ್ಪ ಅವರು ಪರಿಸರದ ಬಗ್ಗೆ ಹೇಳಿದ ಮಾತುಗಳನ್ನು ಮತ್ತೊಮ್ಮೆ ಮರುಕಳಿಸುವಂತೆ ನಾವು ನಡೆಯಬೇಕು. ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಪರಿಸರವನ್ನು ಹಾಳು ಮಾಡುವಂತೆ ತಂತ್ರಜ್ಞಾನವನ್ನು ಬಳಸಿಕೊಳ್ಳುತ್ತಿದ್ದಾನೆ. ಇದರಿಂದ ವಿನಾಶ ಕಟ್ಟಿ ಇಟ್ಟ ಬುತ್ತಿ ಎಂದು ಹೇಳಿದರು.
ಪ್ರೊ. ನಾಮದೇವಗೌಡರ ಮಾತನಾಡಿ, ಜನರು ತಮಗೆ ಕಷ್ಟ ಬರುವ ವರೆಗೂ ಎಚ್ಚೆತ್ತುಕೊಳ್ಳುವುದಿಲ್ಲ. ಪರಿಸರವನ್ನು ಕೇವಲ ಪರಿಸರ ದಿನಾಚರಣೆಗೆ ಮಾತ್ರ ಸೀಮಿತವಾಗಿರಿಸದೆ, ಅದನ್ನು ಪ್ರತಿದಿನವು ಅಳವಡಿಸಬೇಕು ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಶಿಬಿರದ ನಿರ್ದೇಶಕ ಡಾ. ತಹಮೀನಾ ನಿಗಾರ ಸುಲ್ತಾನಾ ಹಾಗೂ ಡಾ. ಅಮರನಾಥ ಪ್ರಜಾಪತಿ, ವಿವಿಯ ಮುಕ್ತ ಮತ್ತು ಬ ಘಟಕದ ಸ್ವಯಂಸೇವಕಿಯರು ಉಪಸ್ಥಿತರಿದ್ದರು.
ಸ್ವಯಂ ಸೇವಕಿ ಆಫ್ರೀನ್ ಸ್ವಾಗತಿಸಿದರು. ಗೀತಾಂಜಲಿ ಸುನಂದ ಮತ್ತು ರೇಣುಕಾ ಅತಿಥಿಗಳನ್ನು ಪರಿಚಯಿಸಿದರು. ಪ್ರಿಯಾಂಕಾ ನಿರೂಪಿಸಿದರು. ಶಿಲ್ಪಾ ವಂದಿಸಿದರು.