ಯುವ ಜನಾಂಗ ಪಾಶ್ಚಾತ್ಯ ಸಂಸ್ಕೃತಿಯತ್ತ ವಾಲುತ್ತಿರುವುದು ವಿಷಾದನೀಯ- ಎಎಸ್ಪಿ ಶಂಕರ ಮಾರಿಹಾಳ
ವಿಜಯಪುರ: ಇಂದಿನ ಯುವ ಜನಾಂಗ ನಮ್ಮ ಸಂಸ್ಕೃತಿಯ ಸೊಬಗು ಬಿಟ್ಟು ಪಾಶ್ಚಾತ್ಯ ಸಂಸ್ಕೃತಿಯತ್ತ ವಾಲುತ್ತಿರುವುದು ಅತ್ಯಂತ ವಿಷಾದದ ಸಂಗತಿ ಎಂದು ವಿಜಯಪುರ ಜಿಲ್ಲಾ ಎಎಸ್ಪಿ ಶಂಕರ ಮಾರಿಹಾಳ ಹೇಳಿದ್ದಾರೆ. ವಿಜಯಪುರ ತಾಲೂಕಿನ ಹಿಟ್ಟಿನಹಳ್ಳಿಯಲ್ಲಿ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ವಿಶ್ವವಿದ್ಯಾನಿಲಯದ ರಾಷ್ಟ್ರೀಯ ಸೇವಾ ಯೋಜನೆ ಕೋಶದ ಮುಕ್ತ ಹಾಗೂ ಬ ಘಟಕದ ವತಿಯಿಂದ ಆಯೋಜಿಸಲಾದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಯುವ ಪೀಳಿಗೆ ಶಿಬಿರದ ಸದುಪಯೋಗ ಪಡೆದುಕೊಂಡು ಉನ್ನತ ಹುದ್ದೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಸಮಾಜ […]
ಬಸವನಾಡಿನಲ್ಲಿ ನಡುರಾತ್ರಿ ವೇಳೆ ಭೂಕಂಪನ- ಎಲ್ಲಿ? ಎಷ್ಟು ಪ್ರಮಾಣ? ಇಲ್ಲಿದೆ ಮಾಹಿತಿ
ವಿಜಯಪುರ: ಬಸವನಾಡು ವಿಜಯಪುರ ಜಿಲ್ಲೆಯಲ್ಲಿ ನಸುಕಿನ ಜಾವ 1.38 ಗಂಟೆಗೆ ಭೂಕಂಪನ ಉಂಟಾಗಿದೆ. ಮಧ್ಯರಾತ್ರಿಯಾಗಿದ್ದರಿಂದ ಬಹುತೇಕರಿಗೆ ಇದರ ಅನುಭವವಾಗಿಲ್ಲ. ಆದರೆ, ಹಲವರಿಗೆ ಭೂಮಿಯೊಳಗಿಂದ ಶಬ್ದ ಕೇಳಿ ಬಂದಿದೆ. ಮಂಚದ ಮೇಲೆ ಮಲಗಿದ್ದವರಿಗೆ ಕಂಪನದ ಅನುಭವವಾಗಿದೆ. ಮಂಚ ಅಲುಗಾಡಿದ ಅನುಭವ ಆಗಿದೆ. ನೆಲದ ಮೇಲೆ ಮಲಗಿದ್ದವರಿಗೆ ಭೂಮಿಯ ಒಳಗಡೆಯಿಂದ ಶಬ್ದ ಕೇಳಿ ಬಂದಿದ್ದು, ಕಂಪನದ ಅನುಭವೂ ಕೂಡ ಉಂಟಾಗಿದೆ. ವಿಜಯಪುರ ನಗರ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಭೂಕಂಪನದ ಅನುಭವವಾಗಿದೆ. ಆದರ್ಶ ನಗರ, ಐಶ್ವರ್ಯ ನಗರ, ಆನಂದ ನಗರ, ಗಚ್ಚಿನಕಟ್ಟಿ […]