ಬೆತ್ತಲೆಯಾಗಿ ಮೊಬೈಲ್ ಟವರ್ ಹತ್ತಿ ತುತ್ತತುದಿಯಲ್ಲಿ ಯುವಕನ ಹುಚ್ಚಾಟ- ಮದ್ಯ, ಗುಟ್ಕಾ ಆಮಿಷ ತೋರಿಸಿ ಕೆಳಗಿಳಿಸಿದ ಗ್ರಾಮಸ್ಖರು, ಪೊಲೀಸರು

ವಿಜಯಪುರ: ಮೊಬೈಲ್ ಟವರ್ ಹತ್ತಿದ ಯುವಕನೊಬ್ಬ ಬೆತ್ತಲೆಯಾಗಿ ಹುಚ್ಚಾಟ ತೋರಿಸುತ್ತ ಆವಾಂತರ ಸೃಷ್ಠಿಸಿದ ಘಟನೆ ವಿಜಯಪುರ ಜಿಲ್ಲೆಯ ಆಲಮೇಲ ತಾಲೂಕಿನ ಬಳಗಾನೂರ ಗ್ರಾಮದಲ್ಲಿ ನಡೆದಿದೆ. ಬೆಳಿಗ್ಗೆಯಿಂದಲೇ ಮೊಬೈಲ್ ಟವರ್ ಮೇಲಿದ್ದ ಯುವಕ ಬೆತ್ತಲೆಯಾಗಿಯೇ ಟಾವರ್ ನ ತುತ್ತ ತುದಿಯ ಮೇಲೆ ನಿಂತು ಬೇಕಾದಂತೆ ಕೈ ಬೀಸುತ್ತಿದ್ದ.  ಈ ಸುದ್ದಿ ಇಡೀ ಗ್ರಾಮವಷ್ಟೇ ಅಲ್ಲ, ಅಕ್ಕಪಕ್ಕದ ಹಳ್ಳಿಗಳಲ್ಲಿಯೂ ಕಾಳ್ಗಿಚ್ಚಿನಂತೆ ಹರಡಿತು.  ಸುದ್ದಿ ತಿಳಿದ ಗ್ರಾಮಸ್ಥರೂ ಸೇರಿದಂತೆ ಅಕ್ಕಪಕ್ಕದ ಜನರೂ ಆ ಸ್ಥಳಕ್ಕೆ ದೌಡಾಯಿಸಿದರು.  ಮಾಹಿತಿ ಪಡೆದ ಆಲಮೇಲ ಪೊಲೀಸರು […]

ವಿಜಯಪುರ ವಿಮಾನ ನಿಲ್ದಾಣ ಕಾಮಗಾರಿ ನ್ಯೂನ್ಯತೆಗಳ ಕುರಿತು ತನಿಖೆ- ಎಂ. ಬಿ. ಪಾಟೀಲ

ವಿಜಯಪುರ: ಬುರಣಾಪುರ ಬಳಿ ನಡೆಯುತ್ತಿರುವ ವಿಮಾನ ನಿಲ್ದಾಣ ಕಾಮಗಾರಿಗಳನ್ನು ಮೂಲಸೌಲಭ್ಯ ಅಭಿವೃದ್ಧಿ ಇಲಾಖೆಯ ಬದಲು ಲೋಕೋಪಯೋಗಿ ಇಲಾಖೆಯ ಮೂಲಕ ಟೆಂಡರ್ ಮಾಡಿಸಲು ಕಾರಣಗಳ ಕುರಿತು ತನಿಖೆ ನಡೆಸುವುದಾಗಿ ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ.ಪಾಟೀಲ ತಿಳಿಸಿದ್ದಾರೆ. ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ವಿಜಯಪುರ ವಿಮಾನ ನಿಲ್ದಾಣ ನಿರ್ಮಾಣ ಕಾಮಗಾರಿಯಲ್ಲಿ ಬಹಳಷ್ಟು ನ್ಯೂನ್ಯತೆಗಳಾಗಿವೆ.  ಮೂಲಸೌಲಭ್ಯ ಅಭಿವೃದ್ಧಿ ಇಲಾಖೆ(ಐಡಿಡಿ) ಮಾಡಬೇಕಿದ್ದ ಕೆಲಸವನ್ನು ಲೋಕೋಪಯೋಗಿ ಇಲಾಖೆಗೆ ನೀಡಿದ್ದಾರೆ.  ಐಡಿಡಿ ಮಾಡಬೇಕಿದ್ದ […]

ಬಿಜೆಪಿಯವರು ಪ್ರತಿಪಕ್ಷದ ನಾಯಕನ ಸ್ಥಾನಕ್ಕೂ ದರ ನಿಗದಿ ಪಡಿಸಿರಬಹುದು- ಸಚಿವ ಎಂ. ಬಿ. ಪಾಟೀಲ ವ್ಯಂಗ್ಯ

ವಿಜಯಪುರ: ಬಿಜೆಪಿಯವರು ಪ್ರತಿಪಕ್ಷದ ನಾಯಕನ ಸ್ಥಾನಕ್ಕೂ ದರ ಫಿಕ್ಸ್ ಮಾಡಿದ್ದಾರಾ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ವ್ಯಂಗ್ಯವಾಡಿದ್ದಾರೆ. ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಪ್ರತಿಪಕ್ಷದ ನಾಯಕ ಆಯ್ಕೆಗೆ ಬಿಜೆಪಿ ವಿಳಂಬ ಮಾಡುತ್ತಿರುವ ಕುರಿತು ಕೇಳಲಾದ ಪ್ರಶ್ನೆಗೆ ವ್ಯಂಗ್ಯಭರಿತವಾಗಿ ಪ್ರತಿಕ್ರಿಯೆ ನೀಡಿದರು. ಈ ಹಿಂದೆ ಮುಖ್ಯಮಂತ್ರಿ ಹುದ್ದೆಗೆ ರೂ. 2500 ಕೋ. ಕೊಡಬೇಕು ಎಂದು ಬಿಜೆಪಿಯಲ್ಲಿದ್ದವರೇ ಹೇಳಿದ್ದರು.  ಸಿಎಂ ಪಟ್ಟಕ್ಕೆ ರೂ. […]