ಜ್ಞಾನಯೋಗಾಶ್ರಮದಲ್ಲಿ ಪ್ರತಿದಿನ ಬೆಳಿಗ್ಗೆ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಪ್ರವಚನಗಳ ಧ್ವನಿಸುರುಳಿ ಪ್ರಸಾರ

ವಿಜಯಪುರ: ಪ್ರತಿವರ್ಷ ಜ್ಞಾನಯೋಗಾಶ್ರಮದಲ್ಲಿ ಗುರುಪೂರ್ಣಿಮೆ ಕಾರ್ಯಕ್ರಮ ಮುಗಿದ ನಂತರ ನಡೆದಾಡುವ ದೇವರು ಶ್ರೀ ಸಿದ್ದೇಶ್ವರ ಸ್ವಾಮೀಜಿಗಳ ಪ್ರವಚನ ನಡೆಯುತ್ತಿತ್ತು.  ಆದರೆ, ಶತಮಾನದ ಸಂತ ಈ ವರ್ಷಾರಂಭದಲ್ಲಿಯೇ ಪ್ರಕೃತಿಯಲ್ಲಿ ಲೀನರಾಗಿದ್ದಾರೆ.  ಶ್ರೀಗಳು ಈಗ ಇಲ್ಲವಾದರೂ, ಅವರು ಈ ಹಿಂದೆ ನೀಡಿದ ಪ್ರವಚನಗಳ ಧ್ವನಿಸುರುಳಿಗಳ ಪ್ರಸಾರಕ್ಕೆ ಚಾಲನೆ ನೀಡಲಾಗಿದೆ. 

ನಯೋಗಾಶ್ರಮದಲ್ಲಿ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳು ಪ್ರವಚನ ನೀಡುತ್ತಿದ್ದ ಸ್ಳಳದಲ್ಲಿ ಶ್ರೀಗಳ ಭಾವಚಿತ್ರ ಇಟ್ಟು ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಜ್ಞಾನಯೋಗಾಶ್ರಮದ ಅಧ್ಯಕ್ಷ ಶ್ರೀ ಬಸವಲಿಂಗ ಸ್ವಾಮೀಜಿ, ಶ್ರೀ ಸಿದ್ಧೇಶ್ವರ ಸ್ವಾಮೀಜಿ ಪ್ರವಚನ ನೀಡುತ್ತಿದ್ದ ಸ್ಥಳದಲ್ಲಿಯೇ ಪ್ರತಿದಿನ ಈ ಪ್ರವಚನ ನಡೆಯಲಿದ್ದು, ಜು. 10 ಸೋಮವಾರದಿಂದ ಧ್ವನಿ ಸುರುಳಿ ಪ್ರಸಾರವಾಗಲಿದೆ ಎಂದು ತಿಳಿಸಿದರು.

ವಿಜಯಪುರ ಜ್ಞಾನಯೋಗಾಶ್ರಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಾನಾ ಸ್ವಾಮೀಜಿ ಪಾಲ್ಗೊಂಡಿದ್ದರು

ಶ್ರೀ ಸಿದ್ದೇಶ್ವರ ಸ್ವಾಮೀಜಿಯವರು ನಮ್ಮ ರಾಜ್ಯವಷ್ಟೇ ಅಲ್ಲ, ಅಕ್ಕಪಕ್ಕದ ರಾಜ್ಯಗಳು, ವಿದೇಶಗಳಲ್ಲಿಯೂ ನೀಡಿರುವ ಪ್ರವಚನಗಳ ಧ್ವನಿಸುರುಳಿಗಳ ಸಂಗ್ರಹ ನಮ್ಮಲ್ಲಿದೆ.  ಭಕ್ತರ ಆಶಯದಂತೆ ಈ ಧ್ವನಿಸುರುಳಿಗಳ ಪ್ರಸಾರ ಕಾರ್ಯ ನಡೆಯುತ್ತಿದೆ.  ಆಶ್ರಮದ ಭಕ್ತರು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಶ್ರೀಗಳು ಹೇಳಿದರು.

ಲಿಂಗಾಯಿತ ಪಂಚಮಸಾಲಿ ಆಲಗೂರು ಪೀಠದ ಜಗದ್ಗುರು ಶ್ರೀ ಡಾ. ಮಹಾದೇವ ಶಿವಾಚಾರ್ಯರು ಮಾತನಾಡಿ, ಶ್ರೀ ಸಿದ್ದೇಶ್ವರ ಸ್ವಾಮೀಜಿ ಬಾಲ್ಯದಲ್ಲಿ ಸರಳತೆಯ ಮುಗ್ಧ ಭಾವನೆಯಿಂದ ಇರುತ್ತಿದ್ದರು.  ಕೆಲವು ದಿನಗಳ ನಂತರ ಒಳ್ಳೆಯ ಅಭ್ಯಾಸ ವಾಣಿಯಿಂದ ಜನತೆಯ ಹೃದಯವನ್ನು ಗೆದ್ದರು.  ಯಾರ ಮನಸ್ಸಿಗೆ ನೋವಾಗದಂತೆ ಮಾತನಾಡುತ್ತಿದ್ದರು.  ನನ್ನನ್ನು ಆಧ್ಯಾತ್ಮಿಕ ಜೀವನದಲ್ಲಿ ಬೆಳಕಿಗೆ ತಂದವರು ವೇದಾಂತ ಕೇಸರಿ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಹಾಗೂ ಪರಮಪೂಜ್ಯ ಸಿದ್ದೇಶ್ವರ ಮಹಾ ಸ್ವಾಮೀಜಿಯವರು ಎಂದು ತಮ್ಮ ಬಾಲ್ಯದ ಜೀವನ ಹಾಗೂ ಶಿಕ್ಷಣದ ಹಳೆಯ ನೆನಪುಗಳನ್ನುಹಂಚಿಕೊಂಡರು.

ಬಸವರಾಜ ಪಾಟೀಲ ಸೇಡಂ ಮಾತನಾಡಿ, ವಿಜಯಪುರ ಶರಣರ ನಾಡು.  ಸಾಂಸ್ಕೃತಿಕ ಬೀಡು.  ಇಲ್ಲಿ ತಿರುಗಾಡುವಾಗ ನನಗೆ ಬಹಳ ಆನಂದವಾಗುತ್ತದೆ.  ಜಗಜ್ಯೋತಿ ಬಸವೇಶ್ವರರು ಮತ್ತು ಶ್ರೀ ಸಿದ್ದೇಶ್ವರ ಸ್ವಾಮೀಜಿಗಳು ಸಂಚರಿಸಿದ ನಾಡು ಇದಾಗಿದೆ.  ಮುದ್ದು ಎಲ್ಲರಿಗೂ ಒಂದು ಕಿವಿಮಾತು ಹೇಳುತ್ತೇನೆ.  ಮಕ್ಕಳ ಕೈಯಲ್ಲಿ ಮೊಬೈಲ್ ಕೊಡಬೇಡಿ.  ಒಂದು ವೇಳೆ ಕೊಡುತ್ತಿದ್ದರೆ ಅದನ್ನು ಕಡಿಮೆ ಮಾಡಿ.  ಅವರು ಏನು ಮಾಡುತ್ತಾರೆ ಎಂಬುದನ್ನು ಗಮನ ಹರಿಸಿ.  ಮೊಬೈಲ್ ದಲ್ಲಿ ಒಳ್ಳೆಯ ಆಧ್ಯಾತ್ಮಿಕ ವಿಷಯಗಳನ್ನು ಎಲ್ಲರೂ ಕುಟುಂಬಸ್ಥರು ನೋಡಿ ಕೇಳುವುದು ಮತ್ತು ನೋಡುವುದು ಮಾಡಬೇಕು.  ಕುಟುಂಬ ಸದಸ್ಯರೆಲ್ಲರೂ ಸೇರಿಕೊಂಡು ಒತ್ತು ಹೊತ್ತಾದರೂ ಊಟ ಮಾಡಿ ಎಂದು ಹೇಳಿದರು.

ಶ್ರೀ ಅಮೃತಾನಂದ ಸ್ವಾಮೀಜಿ ಮಾತನಾಡಿ, ಶ್ರೀ ಸಿದ್ದೇಶ್ವರ ಸ್ವಾಮಿಜಿಗಳು 33 ವರ್ಷಗಳಿಂದ ಲಕ್ಷಾಂತರ ಭಕ್ತರ ಮುಂದೆ ಹೇಳಿರುವ ಪ್ರವಚನದ ಧ್ವನಿಸುರುಳಿ ಸಂಗ್ರಹ ಲಭ್ಯವಿದೆ.  ಭೌತಿಕವಾಗಿ ಅವರು ನಮ್ಮೊಂದಿಗೆ ಇರದಿದ್ದರೂ ಅವರ ಮಾತುಗಳು, ಸೂರ್ಯ- ಚಂದ್ರನ ಸಾಕ್ಷಿಯಾಗಿ ಅವರ ನುಡಿಗಳು ಅಜರಾಮರವಾಗಿ ಬೆಳಗಲಿವೆ ಎಂದು ಶ್ರೀ ಅಮೃತಾನಂದ ಮಹಾಸ್ವಾಮೀಜಿ ಹೇಳಿದರು.

ಈ ಸಂದರ್ಭದಲ್ಲಿ ಜ್ಞಾನಯೋಗಾಶ್ರಮದ ಭಕ್ತರು, ಸಾಹಿತಿಗಳು, ಉದ್ದಿಮೆದಾರರು ಮುಂತಾದವರು ಉಪಸ್ಥಿತರಿದ್ದರು.

ಡಾ. ಶ್ರದ್ದಾನಂದ ಸ್ವಾಮೀಜಿ ಕವನ ವeಚನ ಮಾಡಿದರು.  ನಿವೃತ್ತ ಶಿಕ್ಷಕರಾದ ವಿ. ಸಿ. ನಾಗಠಾಣ ನಿರೂಪಿಸಿದರು.

 

Leave a Reply

ಹೊಸ ಪೋಸ್ಟ್‌