ಸವನಹಳ್ಳಿಯಲ್ಲಿ ಮಳೆಗಾಗಿ ಪ್ರಾರ್ಥಿಸಿ ಗ್ರಾಮಸ್ಥರಿಂದ ಗುಳ್ಳವನ ಪೂಜೆ
ವಿಜಯಪುರ: ಮುಂಗಾರು ಹಂಗಾಮು ಪ್ರಾರಂಭವಾಗಿ ಒಂದು ತಿಂಗಳಿಗೂ ಹೆಚ್ಚು ಕಾಲವಾಗಿದ್ದರೂ ಮಳೆ ಸುರಿಯದ ಹಿನ್ನೆಲೆಯಲ್ಲಿ ಸವನಹಳ್ಳಿ ಗ್ರಾಮಸ್ಥರು ಗುಳ್ಳವನ ಅಂದರೆ ಗುರ್ಜಿ ಪೂಜೆ ಮೊರೆ ಹೋಗಿದ್ದಾರೆ. ಮಳೆಗಾಗಿ ಪ್ರಾರ್ಥಿಸಿದ ರೈತರ ಮಕ್ಕಳು ಮನೆ ಮನೆಗಳಿಗೆ ಹೋಗಿ ಗುರಜಿ ಗುರುಜಿ ಎಲ್ಲ್ಯಾಡಿ ಬಂದೆ ಹಳ್ಳಾ ಕೊಳ್ಳಾ ತಿರುಗಾಡಿ ಬಂದೆ ಕಾರ ಮಳೆಯೇ ಕಪ್ಪತ ಮಳೆಯೇ ಹಳ್ಳಾ ಕೊಳ್ಳಾ ತುಂಬಿಸು ಮಳೆಯೇ ಸುಣ್ಣಾ ಕೊಡತೀನಿ ಸುರಿಯಲೆ ಮಳೆಯೇ ಬಣ್ಣಾ ಕೊಡತೀನಿ ಬಾರಲೆ ಮಳೆಯೇ ಸುರಿಮಳೆಯೇ ಸುರಿಮಳೆಯೇ ಕಾರ ಮಳೆಯೇ ಕಪ್ಪತ […]
ರಾಹುಲ ಗಾಂಧಿ ವಿರುದ್ಧ ಕೇಂದ್ರ ಸರಕಾರ ದ್ವೇಷ ರಾಜಕಾರಣ ಆರೋಪ- ಗುಮ್ಮಟ ನಗರಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಂದ ಮೌನ ಪ್ರತಿಭಟನೆ
ವಿಜಯಪುರ: ಪ್ರಜಾಪ್ರಭುತ್ವ ಉಳಿವಿಗಾಗಿ ದೇಶದ ಹಿತಾಸಕ್ತಿ ಕಾಪಾಡಲು ಹೋರಾಟ ನಡೆಸುತ್ತಿರುವ ಕಾಂಗ್ರೆಸ್ ನಾಯಕ ರಾಹುಲ ಗಾಂಧಿ ವಿರುದ್ಧ ಕೇಂದ್ರ ಸರಕಾರ ಸುಳ್ಳು ಆರೋಪಗಳನ್ನು ಮಾಡಿ ದ್ವೇಷ ರಾಜಕೀಯ ನಡೆಸುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್ ಕಾರ್ಯಕರ್ತರು ವಿಜಯಪುರ ನಗರದಲ್ಲಿ ಮೌನ ಪ್ರತಿಭಟನೆ ನಡೆಸಿದರು. ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಜಿಲ್ಲಾ ಕಾಂಗ್ರೆಸ್ ವತಿಯಿಂದ ನಡೆದ ಹೋರಾಟದಲ್ಲಿ ಪಾಲ್ಗೋಂಡ ನಾನಾ ಮುಖಂಡರು ರಾಹುಲ ಗಾಂಧಿ ಅವರಿಗೆ ನೈತಿಕ ಬೆಂಬಲ ವ್ಯಕ್ತಪಡಿಸಿದರು. ಕಾಂಗ್ರೆಸ್ ಜಿಲ್ಲಾಧ್ಯಕ್ಷ ರಾಜು ಆಲಗೂರ ಮಾತನಾಡಿ, ರಾಹುಲ್ ಗಾಂಧಿ […]
ಎನ್ಎಸ್ಎಸ್ ಸ್ವಯಂ ಸೇವಕರ ಜೀವನವನ್ನೇ ಬದಲಿಸುತ್ತದೆ- ಶಂಕರ ಮಾರಿಹಾಳ
ವಿಜಯಪುರ: ರಾಷ್ಟ್ರೀಯ ಸೇವಾ ಯೋಜನೆ ಸ್ವಯಂ ಸೇವಕರ ಜೀವನವನ್ನೇ ಬದಲಿಸುತ್ತದೆ ಎಂದು ವಿಜಯಪುರ ಎಎಸ್ಪಿ ಶಂಕರ ಮಾರಿಹಾಳ ಹೇಳಿದ್ದಾರೆ. ವಿಜಯಪುರ ತಾಲೂಕಿನ ಬರಟಗಿ ಗ್ರಾಮದಲ್ಲಿ ಬಿ.ಎಲ್.ಡಿ.ಇ ಸಂಸ್ಥೆಯ ಎ. ಎಸ್. ಪಾಟೀಲ ವಾಣಿಜ್ಯ ಮಹಾವಿದ್ಯಾಲಯದ ಎನ್ಎಸ್ಎಸ್ ಘಟಕ 1 ಮತ್ತು 2ರ ಆಶ್ರಯದಲ್ಲಿ ಆಯೋಜಿಸಲಾಗಿದ್ದ 2023ರ ವಿಶೇಷ ಸೇವಾ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ಸ್ವಯಂ ಸೇವಕರಾಗಿದ್ದಾಗ ಇಷ್ಟಪಟ್ಟು ಇನ್ನೂ ಕೆಲವರು ಕಷ್ಟಪಟ್ಟು ಮಾಡಿದ ಶ್ರಮದಾನ, ಕಾರ್ಯಕ್ರಮಗಳ ಆಯೋಜನೆ, ಯೋಜನಾಧಿಕಾರಿಗಳ ಮಾರ್ಗದರ್ಶನ ಎಲ್ಲವೂ ಮುಂದೊಂದು ದಿನ […]