ಸವನಹಳ್ಳಿಯಲ್ಲಿ ಮಳೆಗಾಗಿ ಪ್ರಾರ್ಥಿಸಿ ಗ್ರಾಮಸ್ಥರಿಂದ ಗುಳ್ಳವನ ಪೂಜೆ

ವಿಜಯಪುರ: ಮುಂಗಾರು ಹಂಗಾಮು ಪ್ರಾರಂಭವಾಗಿ ಒಂದು ತಿಂಗಳಿಗೂ ಹೆಚ್ಚು ಕಾಲವಾಗಿದ್ದರೂ ಮಳೆ ಸುರಿಯದ ಹಿನ್ನೆಲೆಯಲ್ಲಿ ಸವನಹಳ್ಳಿ ಗ್ರಾಮಸ್ಥರು ಗುಳ್ಳವನ ಅಂದರೆ ಗುರ್ಜಿ ಪೂಜೆ ಮೊರೆ ಹೋಗಿದ್ದಾರೆ.

ಮಳೆಗಾಗಿ ಪ್ರಾರ್ಥಿಸಿದ ರೈತರ ಮಕ್ಕಳು ಮನೆ ಮನೆಗಳಿಗೆ ಹೋಗಿ ಗುರಜಿ ಗುರುಜಿ ಎಲ್ಲ್ಯಾಡಿ ಬಂದೆ ಹಳ್ಳಾ ಕೊಳ್ಳಾ ತಿರುಗಾಡಿ ಬಂದೆ ಕಾರ ಮಳೆಯೇ ಕಪ್ಪತ ಮಳೆಯೇ ಹಳ್ಳಾ ಕೊಳ್ಳಾ ತುಂಬಿಸು ಮಳೆಯೇ ಸುಣ್ಣಾ ಕೊಡತೀನಿ ಸುರಿಯಲೆ ಮಳೆಯೇ ಬಣ್ಣಾ ಕೊಡತೀನಿ ಬಾರಲೆ ಮಳೆಯೇ ಸುರಿಮಳೆಯೇ ಸುರಿಮಳೆಯೇ ಕಾರ ಮಳೆಯೇ ಕಪ್ಪತ ಮಳೆಯೇ ಎಂದು ಹಾಡು ಹೇಳಿದರು.  ಈ ಹಾಡು ಹಾಡುತ್ತ ತಲೆಯ ಮೇಲೆ ಗುಳ್ಳವ್ವ ಅಂದರೆ ಮಣ್ಣಿನಿಂದ ತರಾಯಿರಿಸ ಗುರ್ಜಿ ಹೆಸರಿನ ಮೂರ್ತಿಯನ್ನು ಹೊತ್ತು ನೀರು ಹಾಕಿಸಿಕೊಳ್ಳುವ ಮೂಲಕ ಮಕ್ಕಳು ತಿರುಗಾಡಿ ಗಮನ ಸೆಳೆದರು.

ಗುರ್ಜಿ ದೇವಿಯಲ್ಲಿ ಮಕ್ಕಳ, ಮಹಿಳೆಯರು, ಪುರುಷರು, ರೈತಾಪಿ ವರ್ಗದವರು ಹಾಗೂ ಕಾವೇರಿ ಮಲ್ಲಿಕಾರ್ಜುನ ಹುಣಶ್ಯಾಳ ದಂಪತಿಗಳು ವರುಣ ದೇವರನ್ನು ಪ್ರಾರ್ಥಿಸಿದರು.  ಸ್ವಾಮಿ ವಿವೇಕಾನಂದ  ಯುವಕ ಸಂಘದ ಯುವಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌