ಜೈನಮುನಿ ಹತ್ಯೆ ಪ್ರಕರಣ ಸಿಬಿಐಗೆ ವಹಿಸಲು ಆಗ್ರಹ- ಗುಮ್ಮಟ ನಗರಿಯಲ್ಲಿ ಬಿಜೆಪಿ ಪ್ರತಿಭಟನೆ- ಕೇಶ ಮುಂಡನ ಮಾಡಿಕೊಂಡು ಆಕ್ರೋಶ ವ್ಯಕ್ತಪಡಿಸಿದ ಯುವಕರು

ವಿಜಯಪುರ: ಚಿಕ್ಕೋಡಿ ತಾಲೂಕಿನ ಹಿರೇಕೋಡಿಯ ಜೈನಮುನಿ ಕಾಮಕುಮಾರ ನಂದಿ ಮಹಾರಾಜರ ಹತ್ಯೆ ಖಂಡಿಸಿ ಬಿಜೆಪಿ ಜಿಲ್ಲಾ ಘಟಕದ ವತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು. ನಗರದ ಡಾ. ಬಿ. ಆರ್. ಅಂಬೇಡ್ಕರ್ ವೃತ್ತದಲ್ಲಿ ಜಮಾಯಿಸಿದ ಬಿಜೆಪಿಯ ನೂರಾರು ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.  ನಂತರ ಮೆರವಣಿಗೆ ನಡೆಸಿದರು.  ಅಲ್ಲದೇ, ಈ ಸಂದರ್ಭದಲ್ಲಿ ಕಾಂಗ್ರೆಸ್ ಸರಕಾರ ಹಿಂದೂ ವಿರೋಧಿಯಾಗಿದೆ ಎಂದು ಆರೋಪಿಸಿ ಘೋಷಣೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.  ನಂತರ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಪತ್ರ ಸಲ್ಲಿಸಿದರು ಈ ಸಂದರ್ಭದಲ್ಲಿ ಮಾತನಾಡಿದ […]

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ- ವರ್ಗಾವಣೆ ದಂಧೆ ನಡೆಯುತ್ತಿದೆ- ಆರ್. ಎಸ್. ಪಾಟೀಲ ಕೂಚಬಾಳ

ವಿಜಯಪುರ: ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದ್ದು, ವರ್ಗಾವಣೆ ದಂಧೆ ನಡೆಯುತ್ತಿದೆ ಎಂದು ವಿಜಯಪುರ ಬಿಜೆಪಿ ಜಿಲ್ಲಾಧ್ಯಕ್ಷ ಆರ್. ಎಸ್. ಪಾಟೀಲ ಕೂಚಬಾಳ ಆರೋಪಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸುಳ್ಳು ಭರವಸೆ ನೀಡಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿದೆ ಎಂದು ಕಿಡಿಕಾರಿದರು. ಕಾಂಗ್ರೆಸ್ ಒಂದು ಕೈಯಲ್ಲಿ ಯೋಜನೆ ನೀಡಿ ಮತ್ತೊಂದು ಕಡೆಗೆ ಕಸಿದುಕೊಳ್ಳುವ ಕೆಲಸ ಮಾಡುತ್ತಿದೆ.  ನಾನಾ ಕಡೆಗಳಲ್ಲಿ ಹತ್ಯೆಗಳು ಆಗುತ್ತಿವೆ.  ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಇಲ್ಲದಂತೆ ಆಗಿದೆ.  ಜೈನ ಮುನಿಗಳ ಹತ್ಯೆ ಪ್ರಕರಣದ ತನಿಖೆಯನ್ನು […]

ಗಿಡಮೂಲಿಕೆಗಳು ಪ್ರತಿಯೊಬ್ಬರ ಆರೋಗ್ಯದಲ್ಲೂ ಮಹತ್ವದ ಪಾತ್ರ ವಹಿಸುತ್ತವೆ- ಡಾ. ಡಿ. ಎನ್. ಧರಿ

ವಿಜಯಪುರ: ದೈನಂದಿಕ ಜೀವನದಲ್ಲಿ ಮಕ್ಕಳಿಂದ ಹಿರಿಯರವರಗೂ ಆರೋಗ್ಯ ವೃದ್ಧಿಗೆ ಗಿಡಮೂಲಿಕೆಗಳು ಮಹತ್ವದ ಪಾತ್ರ ವಹಿಸುತ್ತವೆ ಎಂದು ಬಿ. ಎಲ್. ಡಿ. ಇ ಸಂಸ್ಥೆಯ ಎ. ವಿ. ಎಸ್ ಆಯುರ್ವೇದÀ ಮಹಾವಿದ್ಯಾಲಯದÀ ಪ್ರಾಧ್ಯಾಪಕ ಡಾ. ಡಿ. ಎನ್. ಧರಿ ಹೇಳಿದರು. ಇಂಡಿ ತಾಲೂಕಿನ ಹೊರ್ತಿಯ ಮುರಾರ್ಜಿ ದೇಸಾಯಿ ವಸತಿ ಶಾಲೆಯ ಆವರಣದಲ್ಲಿ ಶಾಲಾ ಔಷಧಿ ವನ ನಿರ್ಮಾಣ ಕಾರ್ಯಕ್ರಮ ಉದ್ಘಾಟನೆ ಸಮಾರಂಭದಲ್ಲಿ ಅವರು ಮಾತನಾಡಿದರು. ರಾಜ್ಯ ಔಷಧಿ ಗಿಡಮೂಲಿಕೆ ಪ್ರಾಧಿಕಾರ ಎ.ವಿ.ಎಸ್. ಆಯುರ್ವೇದ ಮಹಾವಿದ್ಯಾಲಯ, ಆಸ್ಪತ್ರೆ ಮತ್ತು ಸಂಶೋಧನೆ […]

ರಾಷ್ಟ್ರೀಯ ಮುಕ್ತ ಕರಾಟೆ ಪಂದ್ಯಾವಳಿ- ಗುಮ್ಮಟ ನಗರಿಯ ವಿದ್ಯಾರ್ಥಿ ಉಸ್ಮಾನಗಣಿ ವಾಲಿಕಾರ ಪ್ರಥಮ ಸ್ಥಾನ

ವಿಜಯಪುರ: ನಗರದ ಸ್ಟಾರ್ ಬುಡೋಕಾನ್ ಕರಾಟೆ ಕ್ಲಬ್ ಕರಾಟೆ ತರಬೇತಿಯ ವಿದ್ಯಾರ್ಥಿಗಳು ಗದಗದಲ್ಲಿ ನಡೆದ ರಾಷ್ಟ್ರೀಯ ಮುಕ್ತ ಕರಾಟೆ ಪಂದ್ಯಾವಳಿಯಲ್ಲಿ ಉತ್ತಮ ಸಾಧನೆ ಮಾಡಿದ್ದು, ಉಸ್ಮಾನಗಣಿ ಎಂ. ವಾಲಿಕಾರ ಪ್ರಥಮ ಸ್ಥಾನ ಪಡೆದು ಗಮನ ಸೆಳೆದಿದ್ದಾರೆ. ಅಲ್ಲದೇ, ವಿದ್ಯಾರ್ಥಿಗಳಾದ ಸ್ವಾಲೇಹಾ ಎಂ. ವಾಲಿಕಾರ, ಝಕಿ ಐ. ಹೊನ್ನುಟಗಿ ದ್ವಿತಿಯ ಸ್ಥಾನ ಪಡೆದಿದ್ದಾರೆ.  ವಿದ್ಯಾರ್ಥಿ ಸಫೀಯಾ ಎಂ. ವಾಲಿಕಾರ ತೃತಿಯ ಸ್ಥಾನ ಪಡೆದುಕೊಂಡು ಜಿಲ್ಲೆಗೆ ಕೀರ್ತಿ ತಂದಿದ್ದಾರೆ ಎಂದು ಎಂದು ಕ್ಲಬ್ ನ ಕರಾಟೆ ತರಬೇತಿದಾರ ನಾಸೀರ ಎಂ. […]

ಸಿಹಿ ನೀರು ಅಲಂಕಾರಿಕ ಮೀನು ಸಾಕಾಣಿಕೆ ಕುರಿತು ಮಹಿಳೆಯರಿಗೆ ತರಬೇತಿ ಕಾರ್ಯಕ್ರಮ

ವಿಜಯಪುರ: ಮೀನು ಅಧಿಕ ಜನಪ್ರೀಯಗೊಳ್ಳುತ್ತಿರುವ ಆಹಾರವಾಗಿದ್ದು, ದೇಶದ ಹೆಚ್ಚುತ್ತಿರುವ ಜನಸಂಖ್ಯೆಗೆ ಪೌಷ್ಠಿಕಾಂಶಭರಿತ ಹಾಗೂ ಕಡಿಮೆ ವೆಚ್ಚದ ಸಮತೋಲ ಆಹಾರವನ್ನು ಇದರಿಂದ ಒದಗಿಸಬಹುದಾಗಿದೆ ಎಂದು ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ, ವಿಜ್ಞಾನ ವಿಭಾಗದ ಸಂಯೋಜಕಿ ಡಾ. ರೇಣುಕಾ ಮೇಟಿ  ಹೇಳಿದರು. ನಗರದ ಹೊರ ವಲಯದ ಭೂತನಾಳ ಕೆರೆಯ ಬಳಿ ಇರುವ ಮೀನುಗಾರಿಕೆ ಸಂಶೋಧನೆ ಮತ್ತು ಮಾಹಿತಿ ಕೇಂದ್ರದಲ್ಲಿ ಸಿಹಿನೀರು ಅಲಂಕಾರಿಕ ಮೀನು ಸಾಕಾಣಿಕೆ ವಿಷಯದ ಕುರಿತು ಆಯೋಜಿಸಲಾಗಿದ್ದ ಮೂರು ದಿನಗಳ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ದೇಶದ […]

ವಿಶ್ವ ಜನಸಂಖ್ಯಾ ದಿನ ಆಚರಣೆ: ಜನಸಂಖ್ಯೆ ನಿಯಂತ್ರಣ ಅತ್ಯವಶ್ಯಕ- ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ

ವಿಜಯಪುರ: ಶರವೇಗದಿಂದ ಬೆಳೆಯುತ್ತಿರುವ ಜನಸಂಖ್ಯೆ ಅಪಾಯದ ಸಂಕೇತ ಮತ್ತು ಅಭಿವೃದ್ದಿಗೆ ಮಾರಕವಾಗಿದ್ದು, ಜನಸಂಖ್ಯೆ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವುದು ಅಗತ್ಯವಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಹೇಳಿದ್ದಾರೆ.  ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲೂಕು ಆರೋಗ್ಯ ಅಧಿಕಾರಿಗಳ ಕಾರ್ಯಾಲಯ, ನಗರ ಆರೋಗ್ಯ ಕೇಂದ್ರ ನವಬಾಗ ಹಾಗೂ ಸರಕಾರಿ ಬಾಲಕೀಯರ ಪದವಿಪೂರ್ವ ಕಾಲೇಜ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿರುವ ವಿಶ್ವಜನಸಂಖ್ಯಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಜನಸಂಖ್ಯೆ ನಿಯಂತ್ರಣ ಕುರಿತು ಜಾಗೃತಿ ಮೂಡಿಸಲು ವಿಶ್ವ […]

ಹದಿಹರೆಯದಲ್ಲಿ ಪೋಷಕರ ಬೆಂಬಲ ಅಗತ್ಯ: ಡಾ.ವಿಶ್ವನಾಥ ಜಾಲವಾದಿ

ವಿಜಯಪುರ: ಹದಿಹರೆಯ ಎನ್ನುವದು ಜೀವನದ ಅತ್ಯಂತ ವಿಶಿಷ್ಠವಾದ ಬೆಳವಣಿಗೆ ಹಂತವಾಗಿರುವುದರಿಂದ ಈ ಸಂದರ್ಭದಲ್ಲಿ ಪೋಷಕರ ಮತ್ತು ಕುಟುಂಬ ಸದಸ್ಯರ ಬೆಂಬಲ ಅಗತ್ಯವಿದೆ ಎಂದು ವಿಜಯಪುರ ಜಾಲವಾದಿ ಆಸ್ಪತ್ರೆಯ ಹೃದಯ ಮತ್ತು ಮಧುಮೇಹ ತಜ್ಞ ಡಾ. ವಿಶ್ವನಾಥ ಜಾಲವಾದಿ ಹೇಳಿದ್ದಾರೆ. ಕೊಲ್ಹಾರ ತಾಲೂಕಿನ ಕೂಡಗಿ ಸರಕಾರಿ ಪಿಯು ಕಾಲೇಜಿನಲ್ಲಿ ಆಸ್ಪತ್ರೆ ವತಿಯಿಂದ ಆಯೋಜಿಸಲಾಗಿದ್ದ ಉಚಿತ ಆರೋಗ್ಯ ತಪಾಸಣೆ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು. ಹರೆಯದ ವಯಸ್ಸಿನಲ್ಲಿ ಪೋಷಕರು ಮತ್ತು ಕುಟುಂಬ ಸದಸ್ಯರ ಬೆಂಬಲ ಇಲ್ಲದಿದ್ದರೆ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.  […]