ಜೈನಮುನಿ ಹತ್ಯೆ ಪ್ರಕರಣ ಸಿಬಿಐಗೆ ವಹಿಸಲು ಆಗ್ರಹ- ಗುಮ್ಮಟ ನಗರಿಯಲ್ಲಿ ಬಿಜೆಪಿ ಪ್ರತಿಭಟನೆ- ಕೇಶ ಮುಂಡನ ಮಾಡಿಕೊಂಡು ಆಕ್ರೋಶ ವ್ಯಕ್ತಪಡಿಸಿದ ಯುವಕರು

ವಿಜಯಪುರ: ಚಿಕ್ಕೋಡಿ ತಾಲೂಕಿನ ಹಿರೇಕೋಡಿಯ ಜೈನಮುನಿ ಕಾಮಕುಮಾರ ನಂದಿ ಮಹಾರಾಜರ ಹತ್ಯೆ ಖಂಡಿಸಿ ಬಿಜೆಪಿ ಜಿಲ್ಲಾ ಘಟಕದ ವತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.

ನಗರದ ಡಾ. ಬಿ. ಆರ್. ಅಂಬೇಡ್ಕರ್ ವೃತ್ತದಲ್ಲಿ ಜಮಾಯಿಸಿದ ಬಿಜೆಪಿಯ ನೂರಾರು ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.  ನಂತರ ಮೆರವಣಿಗೆ ನಡೆಸಿದರು.  ಅಲ್ಲದೇ, ಈ ಸಂದರ್ಭದಲ್ಲಿ ಕಾಂಗ್ರೆಸ್ ಸರಕಾರ ಹಿಂದೂ ವಿರೋಧಿಯಾಗಿದೆ ಎಂದು ಆರೋಪಿಸಿ ಘೋಷಣೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.  ನಂತರ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಪತ್ರ ಸಲ್ಲಿಸಿದರು

ಈ ಸಂದರ್ಭದಲ್ಲಿ ಮಾತನಾಡಿದ ಜೈನ ಸಮಾಜದ ಮುಖಂಡ ಶೀತಲಕುರಮಾ ಓಗಿ, ಜೈನ್ ಮುನಿಗಳನ್ನು ಬರ್ಬರವಾಗಿ ಹತ್ಯೆ ಮಾಡಿರುವುದು ಅತ್ಯಂತ ಹೇಯ ಕೃತ್ಯವಾಗಿದೆ.  ಈ ಪ್ರಕರಣದ ಹಾದಿ ತಪ್ಪಿಸುವ ಕೆಲಸವನ್ನು ಕಾಂಗ್ರೆಸ್ ಸರಕಾರ ಮಾಡುತ್ತಿದೆ.  ಒತ್ತಡ ಹೇರಿದ ಬಳಿಕ ಎರಡನೇ ಆರೋಪಿ ಹೆಸರು ಹೇಳಿರುವುದು ಸಂಶಯ ಹುಟ್ಟಿಸಿದೆ.  ದಮ್ ಇದ್ದರೆ ಈ ಪ್ರಕರಣವನ್ನು ಸಿಬಿಐಗೆ ವಹಿಸಬೇಕು.  ಸಾಧುವಿನ ಶಾಪ ನಿಮ್ಮ ಸರಕಾರಕ್ಕೆ ತಟ್ಟುತ್ತದೆ ಎಂದು ಎಚ್ಚರಿಕೆ ನೀಡಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಆರ್. ಎಸ್. ಪಾಟೀಲ ಕೂಚಬಾಳ ಮಾತನಾಡಿ, ಜೈನ್ ಸಮುದಾಯ ಜಗತ್ತಿಗೆ ಅಪಾರ ಕೊಡುಗೆ ನೀಡಿದೆ.  ಅಹಿಂಸೆ ಸಂದೇಶ ಸಾರುವ ಮುನಿಗಳ ಹತ್ಯೆ ಖಂಡನೀಯ.  ಅಖಂಡ ಹಿಂದೂ ಸಮಾಜ ಜೈನ್ ಸಮುದಾಯದ ಜೊತೆಗಿದೆ.  ನ್ಯಾಯ ಕೊಡಿಸಲು ಹೋರಾಟ ನಡೆಸುತ್ತೆವೆ.  ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಹಿಂದೂ ಕಾರ್ಯಕರ್ತರ ಕೊಲೆಗಳು ನಡೆಯುತ್ತಿವೆ.  ಹಿಂದಿನ ಅವಧಿಯಲ್ಲೂ ಇದೇ ಪರಿಸ್ಥಿತಿ ಇತ್ತು.  ದೊಡ್ಡ ಸ್ವಾಮೀಜಿಗಳಿಗೆ ರಕ್ಷಣೆ ಇಲ್ಲವೆಂದರೆ ಜನಸಾಮಾನ್ಯರ ಗತಿ ಏನು ಎಂಬ ಆತಂಕ ಕಾಡುತ್ತಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಾಜಿ ಸಚಿವ ಸಂಗಣ್ಣ ಕೆ. ಬೆಳ್ಳುಬ್ಬಿ ಮುಖಂಡ ಚಂದ್ರಶೇಖರ ಕವಟಗಿ ಮಾತನಾಡಿದರು.

ಜೈನಮುನಿ ಕೊಲೆ ಖಂಡಿಸಿ ವಿಜಯಪುರದಲ್ಲಿ ಯುವಕರಾದ ನೇಮಿನಾಥ ಬಾಗೇವಾಡಿ, ಇಂದ್ರೇಶ ಜೈನ್ ಕೇಶ ಮುಂಡನೆ ಮಾಡಿಕೊಂಡು ಪ್ರತಿಭಟನೆ ನಡೆಸಿದರು

ಈ ವೇಳೆ ನೇಮಿನಾಥ ಬಾಗೇವಾಡಿ, ಇಂದ್ರೇಶ ಜೈನ್ ಕೇಶ ಮುಂಡನೆ ಮಾಡಿಕೊಂಡ ವಿನೂತನವಾಗಿ ಪ್ರತಿಭಟನೆ ನಡೆಸಿದರು.

ಈ ಪ್ರತಿಭಟನೆಯಲ್ಲಿ ಬಿಜೆಪಿ ಮುಖಂಡರಾದ ಪ್ರಕಾಶ ಅಕ್ಕಲಕೋಟ, ಮಹಾನಗರ ಪಾಲಿಕೆ ಸದಸ್ಯ ಮಳುಗೌಡ ಪಾಟೀಲ, ಜೈನ್ ಸಮುದಾಯದ ಶೀತಲಕುಮಾರ ಓಗಿ, ಮಹಾವೀರ ಪಾರೇಖ, ಪ್ರವೀಣ ಕಾಸರ, ಭರತ ಧನಶೆಟ್ಟಿ, ಸಮೀರ ಧನಶೆಟ್ಟ, ಬಸು ಬಿರಾದಾರ, ಮಲ್ಲಿಕಾರ್ಜುನ ಜೋಗೂರ, ಚಿದಾನಂದ ಚಲವಾದಿ, ಕಾಸುಗೌಡ ಬಿರಾದಾರ, ಶಿಲ್ಪಾ ಕುದರಗೊಂಡ, ರಾಜಕುಮಾರ ಸಗಾಯಿ, ಸಾಯಬಣ್ಣ ಭೋವಿ, ಚಂದ್ರು ಚೌಧರಿ, ಎಂ. ಎಸ್. ಕರಡಿ, ರಾಜೇಶ ದೇವಗಿರಿ, ವಿಠ್ಠಲ ಹೊಸಪೇಟ, ಪ್ರೇಮಾನಂದ ಬಿರಾದಾರ, ಕಿರಣ ಪಾಟೀಲ, ಜವಾಹರ ಗೋಸಾಯಿ, ಮಲ್ಲಿಕಾರ್ಜುನ ಗಡಗಿ, ಅಶೋಕ ಬೆಲ್ಲದ, ಛಾಯಾ ಮಶಿಯವರ, ಮುಖಂಡರಾದ ಚಂದ್ರು ಚೌದರಿ, ಲಕ್ಷ್ಮಣ ಜಾಧವ, ದತ್ತಾ ಗೊಲಂಡೆ, ಲಕ್ಷ್ಮಿ ಕನ್ನೊಳ್ಳಿ, ರಾಜಲಕ್ಷ್ಮಿ ಪರತನವರ, ವಿಠ್ಠಲ ನಡುವಿನಕೇರಿ, ಉಮೇಶ ಕಾರಜೋಳ, ವಿಜಯ ಜೋಷಿ, ಶರಣು ಕಾಖಂಡಕಿ, ಮಹಾದೇವ ಯಾಳವಾರ, ಸೇರಿದಂತೆ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌