ವಿಜಯಪುರ: ದೈನಂದಿಕ ಜೀವನದಲ್ಲಿ ಮಕ್ಕಳಿಂದ ಹಿರಿಯರವರಗೂ ಆರೋಗ್ಯ ವೃದ್ಧಿಗೆ ಗಿಡಮೂಲಿಕೆಗಳು ಮಹತ್ವದ ಪಾತ್ರ ವಹಿಸುತ್ತವೆ ಎಂದು ಬಿ. ಎಲ್. ಡಿ. ಇ ಸಂಸ್ಥೆಯ ಎ. ವಿ. ಎಸ್ ಆಯುರ್ವೇದÀ ಮಹಾವಿದ್ಯಾಲಯದÀ ಪ್ರಾಧ್ಯಾಪಕ ಡಾ. ಡಿ. ಎನ್. ಧರಿ ಹೇಳಿದರು.
ಇಂಡಿ ತಾಲೂಕಿನ ಹೊರ್ತಿಯ ಮುರಾರ್ಜಿ ದೇಸಾಯಿ ವಸತಿ ಶಾಲೆಯ ಆವರಣದಲ್ಲಿ ಶಾಲಾ ಔಷಧಿ ವನ ನಿರ್ಮಾಣ ಕಾರ್ಯಕ್ರಮ ಉದ್ಘಾಟನೆ ಸಮಾರಂಭದಲ್ಲಿ ಅವರು ಮಾತನಾಡಿದರು.
ರಾಜ್ಯ ಔಷಧಿ ಗಿಡಮೂಲಿಕೆ ಪ್ರಾಧಿಕಾರ ಎ.ವಿ.ಎಸ್. ಆಯುರ್ವೇದ ಮಹಾವಿದ್ಯಾಲಯ, ಆಸ್ಪತ್ರೆ ಮತ್ತು ಸಂಶೋಧನೆ ಕೇಂದ್ರದೊAದಿಗೆ ಶಾಲೆಗಳಲ್ಲಿ ಔಷಧಿ ವನ ಯೋಜನೆ ಜಾರಿಯ ಒಡಂಬಡಿಕೆ ಮಾಡಿಕೊಂಡದೆ. ಇದರಿಂದ ಮಕ್ಕಳಿಗೆ ಬಾಲ್ಯದಲ್ಲಿಯೇ ಗಿಡಮೂಲಿಕೆಗಳು ಮತ್ತು ಅವುಗಳ ಮಹತ್ವನ್ನು ಅರಿಯಲು ಅನುಕೂಲವಾಗಲಿದೆ ಎಂದು ತಿಳಿಸಿದರು.
ಸಹಪ್ರಾಧ್ಯಾಪಕಿ ಡಾ. ವಿದ್ಯಾಲಕ್ಷ್ಮಿ ಪೂಜಾರಿ ಅವರು ಮಕ್ಕಳಿಗೆ ಒಂದೊAದು ಸಸಿಗಳನ್ನು ನೀಡಿ ಅವುಗಳ ಪಾಲನೆ- ಪೋಷಣೆ ಬಗ್ಗೆ ಜಾಗೃತಿ ಮೂಡಿಸಿದರು.
ಈ ಸಂದರ್ಭದಲ್ಲಿ ಈ ಶಾಲೆಯ ಆವರಣದಲ್ಲಿ ತುಳಸಿ, ಆಡುಸೊಗೆ, ಹೆಬ್ಬೇವು, ಲೋಳಸರ, ಮಧುನಾಶಿನಿ, ಮದಯಂತಿಕಾ, ನುಗ್ಗೆ ಸೇರಿದಂತೆ ನಾನಾ ೨೫೦ ಸಸಿಗಳನ್ನು ಶಾಲಾ ಮಕ್ಕಳಿಂದ ನೆಡಿಸಲಾಯಿತು. ಅಲ್ಲದೇ, ವೈಜ್ಞಾನಿಕ ರೀತಿಯಲ್ಲಿ ಶಾಲಾ ಗಿಡಮೂಲಿಕೆ ತೋಟ ನಿರ್ಮಿಸಲಾಯಿತು. ಅಲ್ಲದೇ, ಪ್ರಕೃತಿಯಲ್ಲಿರುವ ಪ್ರತಿಯೊಂದು ಗಿಡದ ಜೌಷಧಿ ಗುಣಗಳನ್ನು ಮಕ್ಕಳಿಗೆ ತಿಳಿಸಿ ಪರಿಸರ ಪ್ರಕೃತಿ ಪ್ರೇಮ ಬೆಳೆಸಿ ಸದೃಡ ಆರೋಗ್ಯಕ್ಕೆ ಗಿಡಮೂಲಕೆಗಳನ್ನು ಬಳಸಲು ಪ್ರೇರೆಪಿಸಲಾಯಿತು.
ಈ ಸಂದರ್ಭದಲ್ಲಿ ಶಾಲೆಯ ಪ್ರಾಚಾರ್ಯ ಜಿ. ಜೆ. ಗುಪ್ತಾ, ವಿಜ್ಞಾನ ಶಿಕ್ಷಕ ಗಣೇಶ ಕಟ್ಟಿಮನಿ ಮತ್ತು ವಸತಿ ನಿಲಯದ ಮೇಲ್ವಿಚಾರಕ ಆನಂದ ಬಿಸನಾಳ, ಎನ್. ಎಸ್. ಎಸ್ ಅಧಿಕಾರಿ ಮತ್ತು ಶಿಬಿರಾರ್ಥಿಗಳು, ದ್ರವ್ಯಗುಣ ಸ್ನಾತಕೋತ್ತರ ವಿಭಾಗದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.