ಪ್ರತಿಭಾ ಪುರಸ್ಕಾರ ಪಡೆದ ಪ್ರಾರ್ಥನಾ ಅಕ್ಷಯ ಕುಲಕರ್ಣಿಯನ್ನು ಸನ್ಮಾನಿಸಿ ಗೌರವಿಸಿದ ಬಿಜೆಪಿ ಮುಖಂಡರು
ವಿಜಯಪುರ: ಹಿರಿಯ ಪತ್ರಕರ್ತ ಅಕ್ಷಯ ಕುಲಕರ್ಣಿ ಅವರು ಪುತ್ರಿ ಪ್ರಾರ್ಥನಾ ಅಕ್ಷಯ ಕುಲಕರ್ಣಿ ಎಸ್. ಎಸ್. ಎಲ್. ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿರುವ ಹಿನ್ನೆಲೆಯಲ್ಲಿ ಇತ್ತೀಚೆಗೆ ಉಡುಪಿಯಲ್ಲಿ ನಡೆದ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನಡೆದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ವಿಧಾನ ಸಭೆ ಸ್ಪೀಕರ್ ಯು. ಟಿ. ಖಾದರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳಕರ, ಕಾನಿಪ ರಾಜ್ಯಾಧ್ಯಕ್ಷ ಶಿವಾನಂದ ತಗಡೂರ ಮುಂತಾದವರು ಉಪಸ್ಥಿತರಿದ್ದು ಸಾಧನೆ ಮಾಡಿದ […]
200ಕ್ಕೂ ಹೆಚ್ಚಿನ ವಿದ್ಯಾರ್ಥಿಗಳಿಂದ ಗಾಂಧಿಭವನ ವೀಕ್ಷಣೆ- ರಾಷ್ಟ್ರಪಿತನ ಕುರಿತು ಅರಿತುಕೊಳ್ಳಲು ಉಪಯುಕ್ತವಾದ ಭವನ- ಸುರೇಶ ಮುಂಜೆ
ವಿಜಯಪುರ: ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹಾತ್ಮಗಾಂಧೀಜಿಯವರ ಚಳುವಳಿಗೆ ಸತ್ಯ ಮತ್ತು ಅಹಿಂಸಾ ಅಸ್ತ್ರಗಳಾಗಿದ್ದವು. ಇಂಥ ಸತ್ಯ, ಶಾಂತ, ತ್ಯಾಗಮೂರ್ತಿ ಮಹಾತ್ಮ ಗಾಂಧೀಜಿವರ ತತ್ವಾದರ್ಶಗಳನ್ನು ವಿದ್ಯಾರ್ಥಿ ದೆಸೆಯಿಂದಲೇ ಮೈಗೂಡಿಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ವಿಜಯಪುರ ತಹಶೀಲ್ದಾರ ಸುರೇಶ ಮುಂಜೆ ಕರೆ ನೀಡಿದರು. ನಗರದ ಇಟ್ಟಂಗಿಹಾಳದ ತುಂಗಳ ಶಾಲೆಯ 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ನಗರದ ಜಿ. ಪಂ. ಬಳಿ ಇರುವ ಗಾಂಧಿಭವನಕ್ಕೆ ಭೇಟಿ ನೀಡಿ, ವೀಕ್ಷಣೆ ನಡೆಸಿದ ಸಂದರ್ಭದಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಅವರು ಮಾತನಾಡಿದರು. ಜ್ಞಾನ, ಉದ್ಯೋಗ, ಶಿಕ್ಷಣ ಅನಿವಾರ್ಯವಾಗಬೇಕು. ಮಹಾನ್ […]
ಯಶಸ್ಸಿಗೆ ಕಠಿಣ ಪರಿಶ್ರಮ ಅವಶ್ಯ- ಮಹಾನಗರ ಪಾಲಿಕೆ ಉಪಆಯುಕ್ತ ಮಹಾವೀರ ಬೋರಣ್ಣನವರ
ವಿಜಯಪುರ: ಉದ್ದಿಮೆದಾರರು ಆತ್ಮವಿಶ್ವಾಸವನ್ನು ವೃದ್ಧಿಸಿಕೊಳ್ಳಬೇಕು. ಕೈಗೊಳ್ಳಬೇಕಾಗಿರುವ ಕಾರ್ಯ ಮೊಟಕುಗೊಳಿಸದೇ, ಹಿಡಿದ ಕಾರ್ಯ ಯಶಸ್ವಿಯಾಗುವತ್ತ ಕಠಿಣ ಪರಿಶ್ರಮ ರೂಢಿಸಿಕೊಳ್ಳಬೇಕು ಎಂದು ವಿಜಯಪುರ ಮಹಾನಗರ ಪಾಲಿಕೆಯ ಉಪಆಯುಕ್ತ ಮಹಾವೀರ ಬೋರಣ್ಣನವರ ಹೇಳಿದ್ದಾರೆ. ನಗರದ ಹೊರವಲಯದ ಭೂತನಾಳ ಕೆರೆಯ ಬಳಿ ಇರುವ ಮೀನುಗಾರಿಕೆ ಸಂಶೋಧನಾ ಮತ್ತು ಮಾಹಿತಿ ಕೇಂದ್ರದಲ್ಲಿ ಆಯೋಜಿಸಲಾಗಿದ್ದ ಸಿಹಿ ನೀರು ಅಲಂಕಾರಿಕ ಮೀನು ಸಾಕಾಣಿಕೆ ಕುರಿತ ಮೂರು ದಿವಸಗಳ ತರಬೇತಿ ಕಾರ್ಯಗಾರದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಗುರಿ ಸಾಧನೆ ಪಥದ ನಡುವೆ ಸಮಸ್ಯೆ ಉದ್ಭವಿಸಿದರೆ ಪರಿಹಾರ […]
ಸರಕಾರಿ ಶಾಲೆ ಅಡುಗೆ ಸಾಮಗ್ರಿ, ಆಡು ಕಳ್ಳರ ಬಂಧನ- ವಿಜಯಪುರ ಗ್ರಾಮೀಣ ಪೊಲೀಸರ ಯಶಸ್ವಿ ಕಾರ್ಯಾಚರಣೆ
ವಿಜಯಪುರ: ಸರಕಾರಿ ಶಾಲೆಯ ಅಡುಗೆ ಸಾಮಗ್ರಿಗಳು ಮತ್ತು ಆಡುಗಳನ್ನು ಕಳ್ಳತನ ಮಾಡಿದ್ದ ಐದು ಜನ ಆರೋಪಿಗಳನ್ನು ವಿಜಯಪುರ ಗ್ರಾಮೀಣ ಪೊಲೀಸರು ಬಂಧಿಸಿದ್ದಾರೆ. 27.02.2023 ರಂದು ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಹುಣಶ್ಯಾಳ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಅಡುಗೆ ಸಾಮಗ್ರಿಗಳನ್ನು ಕಳ್ಳತನ ಮಾಡಲಾಗಿತ್ತು. ಅಲ್ಲದೇ, 01.07.2023ರಂದು ಇದೇ ಪೊಲೀಸ್ ಠಾಣೆಯ ವ್ಯಾಪ್ತಿಯ ಖಂಡಸಾರಿ ತಾಂಡಾದ ಕ್ರಾಸ್ ಹತ್ತಿರ ಇರುವ ಕಾಳೆ ಇವರ ಹೊಲದಲ್ಲಿದ್ದ 14 ಆಡುಗಳನ್ನು ಕಳ್ಳತನ ಮಾಡಲಾಗಿತ್ತು. ಈ ಪ್ರಕರಣಗಳಗಳನ್ನು ಗಂಭೀರವಾಗಿ ಪರಿಗಣಿಸಿದ ಎಸ್ಪಿ […]
ಮಹಿಳಾ ವಿವಿಯಲ್ಲಿ ಹೆಸರಿನಲ್ಲಿ ಸುಳ್ಳು ನೇಮಕಾತಿ ಆದೇಶ ಪತ್ರ ವಿತರಣೆ ಆರೋಪ- ಎಚ್ಚರದಿಂದಿರಲು ಕುಲಸಚಿವರ ಸೂಚನೆ
ವಿಜಯಪುರ: ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದಲ್ಲಿ ನೌಕರಿ ಕೊಡಿಸುವುದಾಗಿ ವಿಶ್ವವಿದ್ಯಾನಿಲಯದ ಲಾಂಛನ ಮತ್ತು ಕವರಗಳನ್ನು ಬಳಸಿಕೊಂಡು ಅನಾಮಿಕ ವ್ಯಕ್ತಿಗಳು ಹಿಂದಿನ ಮತ್ತು ಪ್ರಸ್ತುತ ಕುಲಸಚಿವರು ಮತ್ತು ಸಹಾಯಕ ಕುಲಸಚಿವರ ಸಹಿಯೊಂದಿಗೆ ಸುಳ್ಳು ಪತ್ರಗಳನ್ನು ನೀಡುತ್ತಿದ್ದಾರೆ ಎಂಬುದು ಗಮನಕ್ಕೆ ಬಂದಿದ್ದು ಇಂಥ ವ್ಯಕ್ತಿಗಳ ಮೋಸದ ಜಾಲದ ಬಗೆಗೆ ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು ಎಂದು ಕುಲಸಚಿವ ಪ್ರೊ. ಬಿ. ಎಸ್. ನಾವಿ ಮನವಿ ಮಾಡಿದ್ದಾರೆ. ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು, ಇದುವರೆಗೆ ಮಹಿಳಾ ವಿಶ್ವವಿದ್ಯಾಲಯದಲ್ಲಿ ಬೋಧಕರ […]