ಸ್ಪರ್ಧಾತ್ಮಕ ಯುಗದಲ್ಲಿ ಕೌಶಲ್ಯಗಳು ಪ್ರಮುಖ ಪಾತ್ರ ವಹಿಸುತ್ತವೆ- ಸಿ. ಬಿ. ಕುಂಬಾರ

ವಿಜಯಪುರ: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಕೌಶಲ್ಯಗಳು ಪ್ರಮುಖ ಪಾತ್ರ ವಹಿಸುವುದರಿಂದ ಆಧುನಿಕತೆಗೆ ತಕ್ಕಂತೆ ಕಲಿಕಾ ಹಂತದಿಂದಲೇ ಕೌಶಲ್ಯಗಳನ್ನು ಬೆಳೆಸಿಕೊಳ್ಳಬೇಕು ಎಂದು ವಿಜಯಪುರ ಜಿಲ್ಲಾ ಕೌಶಲ್ಯ ಅಭಿವೃದ್ಧಿ ಅಧಿಕಾರಿ ಸಿ. ಬಿ. ಕುಂಬಾರ ಹೇಳಿದ್ದಾರೆ. ನಗರದ ಬಿ. ಎಲ್. ಡಿ. ಇ ಸಂಸ್ಥೆಯ ಎಸ್. ಬಿ. ಕಲಾ ಮತ್ತು ಕೆ. ಸಿ. ಪಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ರಾಜ್ಯ ಸರಕಾರದ ಕೌಶಲ್ಯ ಅಭಿವೃದ್ದಿ ನಿಗಮ, ಕೌಶಲ್ಯಾಭಿವೃದ್ದಿ,ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ, ಜಿಲ್ಲಾಡಳಿತ, ಜಿಲ್ಲಾ ಕೌಶಲ್ಯಾಭಿವೃದ್ದಿ ಸಹಯೋಗದಲ್ಲಿ ವಿಶ್ವ ಯುವ ಕೌಶಲ್ಯ […]

ವಿದ್ಯಾರ್ಥಿಗಳಿಗೆ ಹೊರೆಯಾಗದಂತೆ ತಜ್ಞರ ಜೊತೆ ಚರ್ಚಿಸಿ ಪುಸ್ತಕಗಳ ಹೊರೆ ಇಳಿಸಲಾಗುವುದು- ಶಿಕ್ಷಣ ಸಚಿವ ಮಧು ಬಂಗಾರಪ್ಪ

ಶಿವಮೊಗ್ಗ: ವಿದ್ಯಾರ್ಥಿಗಳಿಗೆ ಹೊರೆಯಾಗದಂತೆ ಶಿಕ್ಷಣ ತಜ್ಞರ ಜೊತೆ ಚರ್ಚಿಸಿ ಪುಸ್ತಕಗಳ ಹೊರೆ ಇಳಿಸಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ. ಶಿವಮೊಗ್ಗದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಹಲವಾರು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಅವರು ಹೇಳಿದರು. ವಿದ್ಯಾರ್ಥಿಗಳಿಗೆ ಹೊರೆಯಾಗದಂತೆ ಶಿಕ್ಷಣ ತಜ್ಞರ ಜೊತೆ ಚರ್ಚಿಸಿ ಪುಸ್ತಕಗಳ ಹೊರೆ ಇಳಿಸಲಾಗುವುದು.  ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸೂಚನೆ ಮೇರೆಗೆ ಪಠ್ಯಪುಸ್ತಕಗಳ ಪರಿಷ್ಕರಣೆ ಮಾಡಲಾಗಿದೆ.  ಪೂರಕ ಪುಸ್ತಕಗಳನ್ನು ಈಗಾಗಲೇ ವಿದ್ಯಾರ್ಥಿಗಳಿಗೆ ತಲುಪಿಸಲಾಗಿದೆ ಎಂದು ಅವರು […]

ಮರಾಠಿ ವಿದ್ಯಾಲಯದ 1973ನೇ ಬ್ಯಾಚ್ನ 10ನೇ ತರಗತಿ ವಿದ್ಯಾರ್ಥಿಗಳಿಂದ ಸುವರ್ಣ ಮಹೋತ್ಸವ ಆಚರಣೆ

ವಿಜಯಪುರ: ನಗರದ ಪ್ರಸಿದ್ಧ ಮರಾಠಿ ವಿದ್ಯಾಲಯದ 1973ನೇ ಬ್ಯಾಚ್ ನ 10ನೇ ತರಗತಿಯ ವಿದ್ಯಾರ್ಥಿಗಳು ಈ ವರ್ಷದ ಸುವರ್ಣ ಮಹೋತ್ಸವ ಮೂರು ದಿನಗಳ ಕಾಲ ನಡೆಯಿತು.  ನಗರದ ಶ್ರೀ ಮಹೇಶ್ವರಿ ಭವನದಲ್ಲಿ ಮೊದಲ ದಿನ ಶ್ರೀ ಗಣಪತಿ ಪೂಜೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು.  ಬಳೆಗಳು, ಮೆಹೆಂದಿ, ಸಂಗೀತ, ದೇವಿಯ ಕಂಸಾಳೆ, ಜೋಗುಳ, ಆರತಿಯೊಂದಿಗೆ ಸಂಪ್ರದಾಯಬದ್ಧವಾಗಿ ಕಾರ್ಯಕ್ರಮ ನಡೆಯಿತು. ಎರಡನೇ ದಿನ ಮಾರುತಿ ದೇವರಿಗೆ ಪೂಜೆ ಸಲ್ಲಿಸಿದ ನಂತರ ವಿದ್ಯಾರ್ಥಿಗಳು ಕುಂಭದೊಂದಿಗೆ ವಾರಿ ವೇಷಭೂಷಣದಲ್ಲಿ ತಾಳವಾದ್ಯಗಳ ನಾದದೊಂದಿಗೆ ತೋಟದ ಮನೆಗೆ […]

ವಸತಿ ನಿಲಯದ ಮೇಲ್ವಿಚಾರಕರು-ವಿದ್ಯಾರ್ಥಿಗಳಿಗೆ ಆರೋಗ್ಯ ಅರಿವು ಕಾರ್ಯಕ್ರಮ

ವಿಜಯಪುರ: ಅಫಜಲಪೂರ ಟಕ್ಕೆಯ ಸರಕಾರಿ ಮುಸ್ಲಿಂ  ವಸತಿ ಶಾಲೆಯಲ್ಲಿ ಆರೋಗ್ಯ ಇಲಾಖೆ ವತಿಯಿಂದ ಹಮ್ಮಿಕೊಂಡ ಆರೋಗ್ಯ ಅರಿವು ಕಾರ್ಯಕ್ರಮಕ್ಕೆ ತಾಲೂಕಾ ಆರೋಗ್ಯ ಅಧಿಕಾರಿ ಡಾ. ಪಿ. ಎ. ಹಿಟ್ನಳ್ಳಿ ಹಾಗೂ ಪ್ರಾಂಶುಪಾಲ ಸಿದ್ದರಾಮ ಎಂಟೆತ್ತು ಸಸಿಗೆ ನೀರುಣಿಸುವ ಮೂಲಕ ಚಾಲನೆ ನೀಡಿದರು. ಈ ಕಾರ್ಯಕ್ರಮದಲ್ಲಿ ಡಾ. ಪಿ. ಎ. ಹಿಟ್ನಳ್ಳಿ ಅವರು ಕ್ಷಯರೋಗದ ಕುರಿತು ಮಾಹಿತಿ ನೀಡಿ, ಕ್ಷಯರೋಗ ಮೈಕ್ರೋ ಬ್ಯಾಕ್ಟಿರಿಯಾದಿಂದ ಹರಡುವ ಒಂದು ಸಾಂಕ್ರಾಮಿಕ ರೋಗವಾಗಿದ್ದು, ಕ್ಷಯ ರೋಗ ಸಾಮಾನ್ಯ ಲಕ್ಷಣಗಳು ಎರಡು ವಾರ ಅಥವಾ […]

ಶಾಲಾ ಸಂಸತ್ ರಚನೆಯಿಂದ ಮಕ್ಕಳಲ್ಲಿ ಚುನಾವಣೆ ಬಗ್ಗೆ ಅರಿವು ಸಿಗುತ್ತದೆ- ಶ್ರೀದೇವಿ ಉಮೇಶ ಕಾರಜೋಳ

ವಿಜಯಪುರ: ಶಾಲಾ ಸಂಸತ್ ರಚನೆಯಿಂದ ವಿದ್ಯಾರ್ಥಿಗಳಿಗೆ ಚುನಾವಣೆ ಬಗ್ಗೆ ಅರಿವು ಸಿಗುತ್ತದೆ ಎಂದು ಶ್ರೀದೇವಿ ಉಮೇಶ ಕಾರಜೋಳ ಹೇಳಿದ್ದಾರೆ. ನಗರದ ಪದ್ಮಶ್ರೀ ಕಾಕಾ ಕಾರಖಾನೀಸ್ ಸ್ಮಾರಕ ಪ್ರೌಢಶಾಲೆಯ 2023 -24 ನೇ ಶೈಕ್ಷಣಿಕ ವರ್ಷದ ಶಾಲಾ ಸಂಸತ್ ಉದ್ಘಾಟನೆ ಮತ್ತು ಪ್ರತಿನಿಧಿಗಳಿಗೆ ಪ್ರಮಾಣ ವಚನ ಬೋಧನೆ ಸಮಾರಂಭದಲ್ಲಿ ಪಾಲ್ಗೋಂಡು ಅವರು ಮಾತನಾಡಿದರು. ಶಾಲಾ ಸಂಸತ್ತು ವಿದ್ಯಾರ್ಥಿಗಳಿಗೆ ನಾಯಕತ್ವ ಕೌಶಲ್ಯಗಳನ್ನು ಹೆಚ್ಚಿಸಿಕೊಳ್ಳಲು, ಆಡಳಿತದ ಬಗ್ಗೆ ಕಲಿಯಲು ಹಾಗೂ ಸರಕಾರ ತೆಗೆದುಕೊಳ್ಳುವ ಪ್ರಕ್ರಿಯೆಗಳ ಬಗ್ಗ ತಿಳಿದುಕೊಳ್ಳಲು ವೇದಿಕೆಯನ್ನು ಒದಗಿಸುತ್ತದೆ.  ಶಾಲಾ […]

ಜಿಪಿಟಿ ಶಿಕ್ಷಕರಿಗೆ ನ್ಯಾಯ ಒದಗಿಸಲು ಸಂಗಮೇಶ ಬಬಲೇಶ್ವರ ಆಗ್ರಹ

ವಿಜಯಪುರ: ಆರನೇ ತರಗತಿಯಿಂದ ಎಂಟನೇ ತರಗತಿವರೆಗ ಪಾಠ ಮಾಡುತ್ತಿರುವ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಕೌನ್ಸಲಿಂಗ್ ನಲ್ಲಿ ವರ್ಗಾವಣೆಗೆ ಅವಕಾಶ ನೀಡದೇ ತಾರತಮ್ಮ ಮಾಡುತ್ತಿರುವುದು ಖಂಡನೀಯ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಮುಖ್ಯ ವಕ್ತಾರ ಸಂಗಮೇಶ ಬಬಲೇಶ್ವರ ಬೇಸರ ವ್ಯಕ್ತಪಡಿಸಿದ್ದಾರೆ.  ಜಿಪಿಟಿ ಶಿಕ್ಷಕರು ತಮ್ಮ ಸಮಸ್ಯೆ ಬಗೆಹರಿಸುವಂತೆ ಆಗ್ರಹಿಸಿ ಸಂಗಮೇಶ ಬಬಲೇಶ್ವರ ಅವರ ನಿವಾಸಕ್ಕೆ ತೆರಳಿ ಮನವಿ ಮಾಡಿದರು.  ಈ ಸಂದರ್ಭದಲ್ಲಿ ಈ ಶಿಕ್ಷಕರ ಸಮಸ್ಯೆ ಬಗೆಹರಿಸುವಂತೆ ಡಿಡಿಪಿಐ ಎನ್. ಎಚ್. ನಾಗೂರ ಹಾಗೂ ವಾಯುವ್ಯ ಶಿಕ್ಷಕರ […]

ಪ್ಲಾಸ್ಟಿಕ್ ಸರ್ಜರಿ ಕ್ಷೇತ್ರ ವಿಶಾಲವಾಗಿದೆ- ಡಾ. ವಿಜಯಕುಮಾರ ಹುಡೆದ

ವಿಜಯಪುರ: ಪ್ಲಾಸ್ಟಿಕ್ ಸರ್ಜರಿ ಕ್ಷೇತ್ರ ತುಂಬಾ ವಿಶಾಲವಾಗಿದ್ದು, ಸೂಕ್ಷ್ಮಾತಿ ಸೂಕ್ಷ್ಮ ಶಸ್ತ್ರಚಿಕಿತ್ಸೆಗಳ ಮೂಲಕ ಗಾಯದ ಗುರುತುಗಳನ್ನು ಕಾಣದಂತೆ ಕಸಿ ಮಾಡಬಹುದಾಗಿದೆ ಎಂದು ಬಿ.ಎಲ್.ಡಿ.ಇ ಸಂಸ್ಥೆಯ ಶ್ರೀ ಬಿ. ಎಂ. ಪಾಟೀಲ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆಯ ಪ್ಲಾಸ್ಟಿಕ್ ಸರ್ಜರಿ ವಿಭಾಗದ ಮುಖ್ಯಸ್ಥ ಡಾ. ವಿಜಯಕುಮಾರ ಹುಡೆದ ಹೇಳಿದ್ದಾರೆ. ಆಸ್ಪತ್ರೆಯಲ್ಲಿ ರಾಷ್ಟ್ರೀಯ ಪ್ಲಾಸ್ಟಿಕ್ ಸರ್ಜರಿ ದಿನದ ಅಂಗವಾಗಿ ಆಯೋಜಿಸಲಾಗಿದ್ದ ಒಂದು ದಿನದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. ಪ್ಲಾಸ್ಟಿಕ್ ಸರ್ಜರಿ ಕೇವಲ ಸೌಂದರ್ಯ ವರ್ಧಕಕ್ಕೆ ಮಾತ್ರ ಸೀಮಿತವಾಗಿಲ್ಲ. ಸೌಂದರ್ಯ ವರ್ಧಕ ಪ್ಲಾಸ್ಚಿಕ್ […]

ಗಮನ ಸೆಳೆದ ಸೈನಿಕ್ ಶಾಲೆಯ ವಜ್ರಮಹೋತ್ಸವ ಕಾರ್ಯಕ್ರಮ

ವಿಜಯಪುರ: ಸೈನಿಕ ಶಾಲೆಯ ವಜ್ರಮಹೋತ್ಸವ ಅಂಗವಾಗಿ ಶುಕ್ರವಾರ ಸಂಜೆ ನಗರದ ಸೈನಿಕ ಶಾಲೆಯ ಆಡಿಟೋರಿಯಂನಲ್ಲಿ ಪ್ಲಾಯಿಂಗ್ ಲೆಫ್ಟಿನಂಟ್ ಎಲ್.ಎಸ್.ರೂಪಚಂದ್ರ ನೇತೃತ್ವದಲ್ಲಿ ನಡೆದ ವಾಯುದಳದ ಸಿಂಫೋನಿ ಕಾರ್ಯಕ್ರಮ ನೋಡುಗರ ಗಮನ ಸೆಳೆಯಿತು. ಸಂಗೀತ ಕಾರ್ಯಕ್ರಮದಲ್ಲಿ ದೇಶ ಭಕ್ತಿಗೀತೆ, ಚಲನಚಿತ್ರ ಗೀತೆಗಳು ಹಾಗೂ ಕನ್ನಡದ ಹೆಸರಾಂತ ಕಲಾವಿದರಾದ ಪುನೀತರಾಜ್‌ಕುಮಾರ ಅವರ ಬೊಂಬೆ ಹೇಳುತೈತಿ ಹಾಗೂ ಹುಟ್ಟಿದರೆ ಕನ್ನಡ ನಾಡಿನಲ್ಲಿ ಹುಟ್ಟಬೇಕು ಕನ್ನಡ ಗೀತೆಗಳು ವಿಜಯಪುರದ ಕಿಶೋರಕುಮಾರ ಭಜಂತ್ರಿ ಅವರು ಹಾಡಿದ ಹಾಡುಗಳು ಸಭಿಕರನ್ನು ರಂಜಿಸಿತು. ಕಾರ್ಯಕ್ರಮದಲ್ಲಿ ಸೈನಿಕ ಶಾಲೆ ಪ್ರಾಚಾರ್ಯರಾದ […]

ಶಿಕ್ಷಕ ವೃತ್ತಿ ಪವಿತ್ರವಾದದ್ದು- ನೂತನ ಡಿಡಿಪಿಐ ಎನ್. ಎಚ್. ನಾಗೂರ ಹೇಳಿಕೆ

ವಿಜಯಪುರ: ಎಲ್ಲ ವೃತ್ತಿಗಳಿಗಿಂತ ಶಿಕ್ಷಕ ವೃತ್ತಿ ಬಹಳಷ್ಟು ಪವಿತ್ರವಾದದ್ದು.  ಶಿಕ್ಷಕ ವೃತ್ತಿ ಪಡೆದುಕೊಂಡವರು ಪುಣ್ಯವಂತರು ಎಂದು ಡಿಡಿಪಿಐ ಎನ್. ಎಚ್. ನಾಗೂರ ಹೇಳಿದ್ದಾರೆ.  ಶಿಕ್ಷಕರ ಬಳಗ ಹಾಗೂ ನಾನಾ ಸಂಘಟನೆಗಳ ವತಿಯಿಂದ ನಿವೃತ್ತ ಶಿಕ್ಷಕ ಶಿವಾನಂದ ಗುಡ್ಡೋಡಗಿ ಅವರ ಅಭಿನಂದನೆ ಸಮಾರಂಭ ಉದ್ದೇಶಿಸಿ ಅವರು ಮಾತನಾಡಿದರು. ವಿಜಯಪುರ ಜಿಲ್ಲೆ ಶೈಕ್ಷಣಿಕ ಅಭಿವೃದ್ದಿ ಕಡೆಗೆ ಸಾಗುತ್ತಿದ್ದು, ತಮ್ಮೆಲ್ಲರ ಶ್ರಮದಿಂದ ಕೆಲವೇ ದಿನಗಳಲ್ಲಿ ಪ್ರಥಮ ಸ್ಥಾನಕ್ಕೆ ಕೊಂಡೊಯ್ಯುವ ಜವಾಬ್ದಾರಿ ನಮ್ಮೆಲ್ಲರ ಹೆಗಲ ಮೇಲಿದೆ ಎಂದು ಹೇಳಿದರು. ಅಮ್ಮನ ಮಡಿಲು ಚಾರಿಟೇಬಲ್ […]