ಶಾಲಾ ಸಂಸತ್ ರಚನೆಯಿಂದ ಮಕ್ಕಳಲ್ಲಿ ಚುನಾವಣೆ ಬಗ್ಗೆ ಅರಿವು ಸಿಗುತ್ತದೆ- ಶ್ರೀದೇವಿ ಉಮೇಶ ಕಾರಜೋಳ

ವಿಜಯಪುರ: ಶಾಲಾ ಸಂಸತ್ ರಚನೆಯಿಂದ ವಿದ್ಯಾರ್ಥಿಗಳಿಗೆ ಚುನಾವಣೆ ಬಗ್ಗೆ ಅರಿವು ಸಿಗುತ್ತದೆ ಎಂದು ಶ್ರೀದೇವಿ ಉಮೇಶ ಕಾರಜೋಳ ಹೇಳಿದ್ದಾರೆ.

ನಗರದ ಪದ್ಮಶ್ರೀ ಕಾಕಾ ಕಾರಖಾನೀಸ್ ಸ್ಮಾರಕ ಪ್ರೌಢಶಾಲೆಯ 2023 -24 ನೇ ಶೈಕ್ಷಣಿಕ ವರ್ಷದ ಶಾಲಾ ಸಂಸತ್ ಉದ್ಘಾಟನೆ ಮತ್ತು ಪ್ರತಿನಿಧಿಗಳಿಗೆ ಪ್ರಮಾಣ ವಚನ ಬೋಧನೆ ಸಮಾರಂಭದಲ್ಲಿ ಪಾಲ್ಗೋಂಡು ಅವರು ಮಾತನಾಡಿದರು.

ಶಾಲಾ ಸಂಸತ್ತು ವಿದ್ಯಾರ್ಥಿಗಳಿಗೆ ನಾಯಕತ್ವ ಕೌಶಲ್ಯಗಳನ್ನು ಹೆಚ್ಚಿಸಿಕೊಳ್ಳಲು, ಆಡಳಿತದ ಬಗ್ಗೆ ಕಲಿಯಲು ಹಾಗೂ ಸರಕಾರ ತೆಗೆದುಕೊಳ್ಳುವ ಪ್ರಕ್ರಿಯೆಗಳ ಬಗ್ಗ ತಿಳಿದುಕೊಳ್ಳಲು ವೇದಿಕೆಯನ್ನು ಒದಗಿಸುತ್ತದೆ.  ಶಾಲಾ ಸಂಸತ ಚುನಾವಣೆ ಮೂಲಕ ಶಾಲೆಗಳಲ್ಲಿ ವಿದ್ಯಾರ್ಥಿ ನಾಯಕರ ಆಯ್ಕೆ ಸಾಗಿದ್ದು ಮಕ್ಕಳಿಗೆ ಚಿಕ್ಕಂದಿನಿಂದಲೇ ಚುನಾವಣೆ ಮಜಲುಗಳನ್ನು ಅರಿಯಲು ನೆರವಾಗಲಿದೆ ಎಂದು ಅವರು ಹೇಳಿದರು.

ಆನಂದಿಬಾಯಿ ಮಾನೆ ಮಾತನಾಡಿ, ಮುಂದಿನ ದಿನಗಳಲ್ಲಿ ದೇಶಕಟ್ಟುವ ಉತ್ತಮ ರಾಜಕೀಯ ವ್ಯಕ್ತಿಗಳಾಗಿ ಂದು ವಿದ್ಯಾರ್ಥಿಗಳಿಗೆ ಶುಭ ಕೋರಿದರು.

ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಶಿಕ್ಷಕ ಎಸ್. ಬಿ. ಕುಂಬಾರ, ಶಿಕ್ಷಕರಾದ ಎಸ್. ಬಿ. ಕಡಬಿ, ಎಂ. ಟಿ. ಕೊಟ್ಟಲಗಿ, ಜಿ. ಪಿ. ಚಲವಾದಿ, ಆರ್. ಎಸ್. ವಾಳ್ವೆಕರ, ಎಸ್. ಎಸ್. ಶಿರಹಟ್ಟಿ, ವಿ. ಆರ್. ಅಕ್ಕಲಕೋಟ, ಎಸ್. ಬಿ. ಶಿಂತ್ರೆ ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌