ವಿಜಯಪುರ: ಎಲ್ಲ ವೃತ್ತಿಗಳಿಗಿಂತ ಶಿಕ್ಷಕ ವೃತ್ತಿ ಬಹಳಷ್ಟು ಪವಿತ್ರವಾದದ್ದು. ಶಿಕ್ಷಕ ವೃತ್ತಿ ಪಡೆದುಕೊಂಡವರು ಪುಣ್ಯವಂತರು ಎಂದು ಡಿಡಿಪಿಐ ಎನ್. ಎಚ್. ನಾಗೂರ ಹೇಳಿದ್ದಾರೆ.
ಶಿಕ್ಷಕರ ಬಳಗ ಹಾಗೂ ನಾನಾ ಸಂಘಟನೆಗಳ ವತಿಯಿಂದ ನಿವೃತ್ತ ಶಿಕ್ಷಕ ಶಿವಾನಂದ ಗುಡ್ಡೋಡಗಿ ಅವರ ಅಭಿನಂದನೆ ಸಮಾರಂಭ ಉದ್ದೇಶಿಸಿ ಅವರು ಮಾತನಾಡಿದರು.
ವಿಜಯಪುರ ಜಿಲ್ಲೆ ಶೈಕ್ಷಣಿಕ ಅಭಿವೃದ್ದಿ ಕಡೆಗೆ ಸಾಗುತ್ತಿದ್ದು, ತಮ್ಮೆಲ್ಲರ ಶ್ರಮದಿಂದ ಕೆಲವೇ ದಿನಗಳಲ್ಲಿ ಪ್ರಥಮ ಸ್ಥಾನಕ್ಕೆ ಕೊಂಡೊಯ್ಯುವ ಜವಾಬ್ದಾರಿ ನಮ್ಮೆಲ್ಲರ ಹೆಗಲ ಮೇಲಿದೆ ಎಂದು ಹೇಳಿದರು.
ಅಮ್ಮನ ಮಡಿಲು ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಮಾತನಾಡಿ, ಶೈಕ್ಷಣಿಕ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಿರಬೇಕು. ಅದರ ಅಳಿವು-ಉಳಿವು ಶಿಕ್ಷಕರ ಮೇಲೆ ನಿಂತಿದೆ. ನಿಜವಾಗಲೂ ಶಿವಾನಂದ ಗುಡ್ಡೋಡಗಿ ಅವರು ಎಸ್. ಎಸ್. ಎಲ್. ಸಿ ಮಕ್ಕಳಿಗೆ ಪಾಸಿಂಗ್ ಪ್ಯಾಕೇಜ್ ಮಾಡಿ ಮಕ್ಕಳು ತೇರ್ಗಡೆ ಹೊಂದಲು ಬಳಷ್ಟು ಸಹಾಯ ಮಾಡಿರುವುದು ಶ್ಲಾಘನೀಯ ಎಂದು ಹೇಳಿದರು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ನಿವೃತ್ತ ಶಿವಾನಂದ ಗುಡ್ಡೋಡಗಿ, ನನ್ನ ಸೇವಾವಧಿಯಲ್ಲಿ ಸಾಕಷ್ಟು ಜನ ಸಹಾಯ ಸಹಕಾರ ಮಾಡಿದ್ದು, ಅವರ ಋಣ ಎಂದೂ ಮರೆಯಲು ಸಾಧ್ಯವಿಲ್ಲ. ನನ್ನ ಸೇವಾವಧಿಯಲ್ಲಿ ಎಸ್.ಎಸ್.ಎಲ್.ಸಿ. ಸ್ಕೋರಿಂಗ್, ಪಾಸಿಂಗ್ ಸತತವಾಗಿ ಐದು ವರ್ಷ ತರುವಲ್ಲಿ ನಮ್ಮ ಜಿಲ್ಲೆಯ ಶಾಲೆಯ ಶಿಕ್ಷಕರಿಗೆ ಒಂದು ಮಾರ್ಗದರ್ಶನ ಕೈಪಿಡಿ ಮಾಡಲಾಗಿತ್ತು. ಜಿ ಶಂಕರ್ ಟ್ರಸ್ಟ್ ಮತ್ತು ಮಾಜಿ ಸಚಿವ ಗೋವಿಂದ ಕಾರಜೋಳ ಅವರ ಸಹಯೋಗದೊಂದಿಗೆ ಈ ಕೈಪಿಡಿ ಎಲ್ಲರಿಗೂ ಅನುಕೂಲವಾಗಿತ್ತು. ಮುಂದಿನ ಶೈಕ್ಷಣಿಕ ವರ್ಷಕ್ಕೆ ವಿದ್ಯಾರ್ಥಿಗಳಿಗೆ ಹೆಚ್ಚಿನ ಅಂಕಗಳನ್ನು ತೆಗೆದು ಪುಸ್ತಕ ರಚನೆ ಮಾಡಲಾಗಿತ್ತು ಎಂದು ಹೇಳಿದರು.
ನಿವೃತ್ತ ಅಪರ ಆಯುಕ್ತ ಎ. ಎನ್. ಪಾಟೀಲ ಮಾತನಾಡಿ, ಶಿವಾನಂದ ಗುಡ್ಡೋಡಗಿ ಅವರು ಮಾತಿಗಿಂತ ಕೃತಿ ಮೇಲು ಎಂಬಂತೆ ತಮ್ಮ ಸೇವಾವಧಿಯಲ್ಲಿ ಸಾಕಷ್ಟು ಸಾಧನೆ ಮಾಡಿದ್ದಾರೆ. ಅವರು ಸಮಾಜದಲ್ಲಿ ಇನ್ನಷ್ಟು ಕಾರ್ಯ ಮಾಡಬೇಕು. ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಗ್ರಾಮೀಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಆಂಜನೇಯ, ಇಂಡಿ ಬಿ ಇಓ ವಸಂತ ರಾಠೋಡ, ವಯಸ್ಕರ ಶಿಕ್ಷಣಾಧಿಕಾರಿ ವಿಜಯ ಆಲಗೂರ, ಪಮ್ಮಕ್ಕಾ ಗುಡ್ಡೋಡಗಿ, ರಾಜಶ್ರೀ ಗುಡ್ಡೋಡಗಿ ಎನ್.ಜಿ.ಓ ಅಧ್ಯಕ್ಷ ಸುರೇಶ ಶೇಡಶ್ಯಾಳ, ಶಿವರಾಜ ಬಿರಾದಾರ, ಸಿದ್ದು ಹಂಚಿನಾಳ, ಆರ್. ಎಸ್. ತುಂಗಳ, ಅಶೋಕ ಹಂಚಲಿ, ವಿ. ವಿ. ಒಣರೊಟ್ಟಿ, ವಿಜಯಕುಮಾರ ಹತ್ತಿರ, ಶಿವಾನಂದ ಮಂಗಾನವರ, ಬಿ. ಬಿ. ದೂರನಳ್ಳಿ, ಎಸ್. ಎಸ್. ಜೇವೂರ, ಎಚ್. ಕೆ. ಬೂದಿಹಾಳ, ಸಂತೋಷ ಕುಲಕರ್ಣಿ, ಎಲ್. ಬಿ. ಪಾಟೀಲ ಮುಂತಾದವರು ಉಪಸ್ಥಿತರಿದ್ದರು.
ಅಶೋಕ ಹಂಚಲಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಗದೀಶ ಬೋಳಸೂರ ನಿರೂಪಿಸಿದರು.