ವಿಜಯಪುರ: ಬಬಲೇಶ್ವರ ಪಟ್ಟಣದ ಶ್ರೀ ಶಾಂತವೀರ ಸರ್ಕಲ್ ಹತ್ತಿರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನೂತನ ಕಟ್ಟಡ ಉದ್ಘಾಟನೆ ಸಮಾರಂಭ ನೆರವೇರಿತು.
ಮನಗೂಳಿಯ ಶ್ರೀ ಅಭಿನವ ಸಂಗನಬಸವ ಶಿವಾಚಾರ್ಯ ಸ್ವಾಮೀಜಿ ಅವರು ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದರು.
ರೈತರು ಮತ್ತು ಕಾರ್ಮಿಕರಿಗೆ ಸಹಕಾರಿ ಬ್ಯಾಂಕುಗಳು ಅವಶ್ಯಕವಾಗಿದ್ದು, ಸರಕಾರದ ಸಾಲ ಯೋಜನೆಗಳನ್ನು ಸದುಪಯೋಗ ಪಡಿಸಿಕೊಂಡು, ಮರಳಿ ನೀಡುವ ಮೂಲಕ ಈ ಬ್ಯಾಂಕುಗಳ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಬೇಕು ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಸಹಕಾರಿ ಧುರೀಣ ಚನ್ನಪ್ಪ ಕೊಪ್ಪದ. ವಿ. ಎಸ್. ಪಾಟೀಲ, ಸಂಘದ ಅಧ್ಯಕ್ಷ ಬಸವರಾಜ ಶಿರಮಗೊಂಡ, ನಿರ್ದೇಶಕ ಭೀಮಸಿ ರೇವಣಪ್ಪ ಕೋಟ್ಯಾಳ ವರದಿ ವಾಚನ ಮಾಡಿದರು.
ಈ ವೇಳೆ ಸಿದ್ದಪ್ಪ ಕೋಟ್ಯಾಳ, ಸಂಗಪ್ಪ ತಮಗೊಂಡ, ಶಿವಲಿಂಗಪ್ಪ ಕೋಟ್ಯಾಳ, ಶಂಕ್ರಪ್ಪ ಶಿರಮಗೊಂಡ, ಬಸಪ್ಪ ಜಂಗಮಶೆಟ್ಟಿ, ದಯಾನಂದ ಅಲಗೊಂಡ, ಶ್ರೀಶೈಲ ಕೋಟ್ಯಾಳ, ಸಂಗಪ್ಪ ಕೋಟ್ಯಾಳ, ಎಂ. ವಿ. ಅಣ್ಣೆಪ್ಪನವರ, ಉಪಾಧ್ಯಕ್ಷ ಮಹದೇವ ಗೋಡಿಕಟ್ಟಿ, ಗುರಪ್ಪ ಕಲ್ಯಾಣಿ, ಹೊಳೆಪ್ಪ ಬೂದಿಹಾಳ, ಸಂಗಪ್ಪ ತಡ್ಲಗಿ, ಅವ್ವಣ್ಣ ಉಳ್ಳಾಗಡ್ಡಿ, ಲಕ್ಷ್ಮಣ ಲೋಕುರಿ, ಜಯಶ್ರೀ ಈಟಿ, ಶಾರದಾ ಸಾವಳಗಿ, ಸಿದ್ದಪ್ಪ ಸುರಪುರ, ಎಚ್. ವೈ. ಸಿಂಗಾರಡ್ಡಿ ಉಪಸ್ಥಿತರಿದ್ದರು.
ನವೀನ ಜಂಗಮಶೆಟ್ಟಿ ಸ್ವಾಗತಿಸಿದರು. ಸಂಗು ಬಿರಾದಾರ ನಿರೂಪಿಸಿದರು. ಶಂಕರ ಕೋಟ್ಯಾಳ ವಂದಿಸಿದರು.