ಶರಣರ ವಚನ ಸಾಹಿತ್ಯವನ್ನು ಜಗತ್ತಿಗೆ ಪರಿಚಯಿಸುವಲ್ಲಿ ವಚನಪಿತಾಮಹ ಡಾ. ಫ. ಗು. ಹಳಕಟ್ಟಿ ಅವರ ಕೊಡುಗೆ ಅನನ್ಯ: ಪ್ರಕಾಶ ಬಗಲಿ

ವಿಜಯಪುರ: ಶರಣ ಸಾಹಿತ್ಯವನ್ನು ಜಗತ್ತಿಗೆ  ಪರಿಚಯಿಸುವಲ್ಲಿ ವಚನಪಿತಾಮಹ ಡಾ. ಫ. ಗು. ಹಳಕಟ್ಟಿ ಅವರ ಕೊಡುಗೆ ಅನನ್ಯ ಎಂದು ನಗರದ ಪ್ರತಿಷ್ಠತಿ ಶ್ರೀ ಸಿದ್ಧೇಶ್ವರ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಪ್ರಕಾಶ ಎಸ್. ಬಗಲಿ ಹೇಳಿದ್ದಾರೆ.

ನಗರದ ಕಂದಗಲ್ ಹಣಮಂತರಾಯ ರಂಗಮಂದಿರದಲ್ಲಿ ಡಾ. ಫ. ಗು. ಹಳಕಟ್ಟೀಯವರ 143ನೇ ಜನ್ಮದಿನದ ಅಂಗವಾಗಿ ವಿಜಯಪುರ ಪ್ರಿಂಟಿಂಗ್ ಪ್ರೆಸ್ ಮತ್ತು ವರ್ಕರ್ಸ್ ಅಸೋಶಿಯೇಷನ್ ಆಯೋಜಿಸಿದ್ದ ಮುದ್ರಣ ಸಾಧಕರಿಗೆ ಮುದ್ರೋಧ್ಯಮಿ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಮುದ್ರಣ ಸಾಧಕರನ್ನು ಗುರುತಿಸಿ ಪ್ರಶಸ್ತಿ ನೀಡುವ ಮೂಲಕ ಅಸೋಸಿಯೇಶನ್‌ದವರು ಮಹತ್ವದ ಕೆಲಸ ಮಾಡಿದ್ದಾರೆ.  ವಚನಪಿತಮಾಹ ಡಾ. ಫ. ಗು. ಹಳಕಟ್ಟಿಯವರ ಪುಣ್ಯದಿಂದಲೆ ಶ್ರೀ ಸಿದ್ಧೇಶ್ವರ ಸಹಕಾರಿ ಬ್ಯಾಂಕ್ ಬೆಳೆಯಲು ಕಾರಣವಾಗಿದೆ.  ಹಳಕಟ್ಟಿಯವರು ಸೈಕಲ್ ನಲ್ಲಿ ತಿರುಗಾಡಿ ಬಿ. ಎಲ್. ಡಿ. ಶಿಕ್ಷಣ ಸಂಸ್ಥೆ ಸೇರಿದಂತೆ ಅನೇಕ ಸಂಸ್ಥೆಗಳನ್ನು ಪ್ರಾರಂಭಿಸಿ ಅಭಿವೃದ್ಧಿಯ ಹೊಸ ಶಖೆ ಪ್ರಾರಂಭಿಸಿದ್ದಾರೆ.  ಅಲ್ಲದೇ, 12ನೇ ಶತಮಾನದ ಶರಣರ ವಚನ ಸಾಹಿತ್ಯವನ್ನು ಸಂಗ್ರಹಿಸಿ ಮುದ್ರಿಸುವ ಮೂಲಕ ಶರಣ ಸಾಹಿತ್ಯ ಕ್ಷೇತ್ರಕ್ಕೆ ಅಪಾರವಾಗಿ ಶ್ರಮಿಸಿದ್ದಾರೆ ಎಂದು ಹೇಳಿದರು.

ರಾಜ್ಯ ಕಾರ್ಯನಿರತರ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಸಂಗಮೇಶ ಚೂರಿ ಮಾತನಾಡಿ, ವಚನಪಿತಾಮಹ ಡಾ. ಫ. ಗು. ಹಳಕಟ್ಟಿ ಅವರ ಜನ್ಮದಿನವನ್ನು ವಿಶೇಷವಾಗಿ ಆಚರಿಸುತ್ತಿವುದು ಅರ್ಥಪೂರ್ಣವಾಗಿದೆ.  ಪ್ರಿಟಿಂಗ್ ಪ್ರೆಸ್ ಕೆಲಸ ಶ್ರೇಷ್ಠ ಕಾಯಕವಾಗಿದೆ.  ಕಾಯಕ ಮಾಡಿದವರಿಗೆ ಮುದ್ರೋದ್ಯಮ ಪ್ರಶಸ್ತಿ ನೀಡಿರುವುದು ಇಡೀ ರಾಜ್ಯಕ್ಕೆ ಮಾದರಿಯಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ವಿಷ್ಣು ಎಂ. ಶಿಂಧೆ ವಿಶೇಷ ಉಪನ್ಯಾಸ ನೀಡಿ, ನನಗೂ ಕೂಡಾ ಮುದ್ರಣ ಮಾಧ್ಯಮದ ಅನುಭವ ಇದೆ.  ಇಂದು ನಾವು ಮುದ್ರಣ ಮಾಧ್ಯಮ ಅವಲಂಬಿಸಿದ್ದೇವೆ.  ನಮ್ಮ ಹಿರಿಯರು ರಾಜ್ಯರ ಕಾಲದಲ್ಲಿ ಕಲ್ಲಿನ ಮೇಲೆ ಶಾಸನಗಳನ್ನು ಕೆತ್ತುತಿದ್ದರು.  ನಂತರ ತಾಮ್ರದ ಪತ್ರ, ಬಳಿಕ ಕಾಗದ ಮೇಲೆ ಮುದ್ರಿಸುವುದು ಜಾರಿಗೆ ಬಂದಿದೆ.  ಮೊಬೈಲ್ ಬಂದ ಮೇಲೆ ಈಗ ಎಲ್ಲರೂ ಮುದ್ರಕರು ಮತ್ತು ಫೋಟೋಗ್ರಾಫರ್ ಆಗಿದ್ದಾರೆ.  ಇಂದು ಮುದ್ರಣ ಮಾಧ್ಯಮ ಬಹಳಷ್ಟು ವಿಶಾಲವಾಗಿ ಬೆಳೆದಿದೆ.  ಜೊತೆಗೆ ಮುದ್ರಕರೂ ಕೂಡ ಅಷ್ಟೇ ಸಮಸ್ಯೆ ಎದುರಿಸುತ್ತಿದ್ದಾರೆ.  ಹಳಕಟ್ಟಿಯವರು ಮುದ್ರಣ ಮಾಧ್ಯಮದಲ್ಲಿ ತೊಡಗಿಸಿಕೊಂಡಾಗ ಮೈಯೊಳಗಿನ ಅಂಗಿ ಹರಿದಿದ್ದರೂ ಅದರ ಮೇಲೆ ಕೋಟು ಧರಿಸಿದ್ದರಿಂದ ಹರಿದ ಅಂಗಿ ಸಮಾಜಕ್ಕೆ ಕಾಣುತ್ತಿರಲ್ಲಿಲ್ಲ.  ಇಂದಿನ ಮುದ್ರಾಕರ ಪರಿಸ್ಥಿತಿ ಅದೇ ರೀತಿಯಾಗಿದೆ.  ಇಂದು ಮುದ್ರಣ ಮಾಧ್ಯಮ ಹಲವು ಸಂಕಟ ಸವಾಲುಗಳನ್ನು ಎದುರಿಸುತ್ತಿದೆ ಎಂದು ಹೇಳಿದರು.

ಕಲಬುರ್ಗಿ ವಿಭಾಗ ಸಂಚಾಲಕ ರವಿ ಮುಕ್ಕಾ ಮಾತನಾಡಿರು.

ಈ ಸಂದರ್ಭದಲ್ಲಿ ಪತ್ರಕರ್ತ ಹಾಗೂ ಸಾಹಿತಿ ಕಲ್ಲಪ್ಪ ಶಿವಶರಣ ಅವರ ಸಂಪಾದಕತ್ವದ ಅಚ್ಚುಮೆಚ್ಚು ಪುಸ್ತಕದ ಮುಖಪುಟವನ್ನು ಬಿಡುಗಡೆ ಮಾಡಲಾಯಿತು.

ಈ ವೇಳೆ ವಿಜಯಪುರ ಪ್ರಿಂಟಿAಗ್ ಪ್ರೆಸ್ ಮತ್ತು ವರ್ಕರ್ಸ್ ಅಸೋಶಿಯೇಷನ್ ಅಧ್ಯಕ್ಷ ಚಿದಾನಂದ ವಾಲಿ, ವಿಜಯಪುರ ಪ್ರಿಂಟಿಂಗ್ ಪ್ರೆಸ್ ಮತ್ತು ವಕರ್ಸ್ ಅಸೋಸಿಯೇಶನ್ ಗೌರವಾದ್ಯಕ್ಷ ಚಂದ್ರಶೇಖರ ಸಿ. ಬುರಾಣಪೂರ, ಮಹಾನಗರ ಪಾಲಿಕೆ ಮಾಜಿ ಸದಸ್ಯ ಉಮೇಶ ವಂದಾಲ, ಹಿರಿಯ ಪತ್ರಕರ್ತ ಅಲ್ಲಮಪ್ರಭು ಗು. ಮಲ್ಲಿಕಾರ್ಜುನಮಠ, ಎಚ್. ಎಂ. ಬಾಗವಾನ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಟ್ರೆಡಲ್ ಮಶೀನ್ ನಲ್ಲಿ 30 ರಿಂದ 40 ವರ್ಷ ಮುದ್ರಕ, ಮಾಲಿಕರಾಗಿ ಸೇವೆ ಸಲ್ಲಿಸಿದ ಮಹಾಂತೇಶ ಪ್ರಭು, ಬಸವರಾಜ ಅಶೋಕ ಹೆಬ್ಬಳ್ಳಿ, ಮುದ್ದೇಬಿಹಾಳದ ಅಂಬಿಕಾ ಆಫಸೆಟ್, ಬಾಗೇವಾಡಿಯ ಚನ್ನಬಸವೇಶ್ವರ ಆಫ್ ಸೆಟ್ ಪ್ರಿಂಟರ್ಸ್ ನ ರಾಹುಲ ಠೋಣೆ ಸೇರಿದಂತೆ ನಾನಾ ಮುದ್ರಕ, ಮಾಲಿಕ ಸಾಧಕರಿಗೆ ಮದ್ರೋದ್ಯಮಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಸಂಘದ ಕಾರ್ಯದರ್ಶಿ ವೆಂಕಟೇಶ ಕಪಾಳೆ, ನಿರ್ದೇಶಕರಾದ ಮಹ್ಮದ ಹನೀಫ ಮುಲ್ಲಾ, ಮೃತ್ಯುಂಜಯ ನಿ. ಶಾಸ್ತ್ರಿ, ಜಗದೀಶ ಶಹಾಪುರ, ನಾಗರಾಜ ಬಿಸನಾಳ, ಬಸವರಾಜ ಹಾವಿನಾಳ, ದೀಪಕ ಜಾಧವ, ಉಮೇಶ ಶಿವಶರಣ, ನಬಿಲಾಲ ಮಕಾನದಾರ, ಮಂಜುನಾಥ ರೂಗಿ, ಸುರೇಶ ಗೊಳಸಂಗಿ, ಶ್ರೀಮಂತ ಬೂದಿಹಾಳ, ತೇಜಶ್ವಿನಿ ಕುಲಕರ್ಣಿ, ಲಾಯಪ್ಪ ಇಂಗಳೆ, ಕೃತಿಕಾ ವಾಲಿ, ಶಶಿಕಲಾ ವಾಲಿ, ಅಂಬಿಕಾ ಜಾಧವ, ನಾಗರಾಜ ಬಿದರಿ, ದೀಪಿಕಾ ಬಿದರಿ, ಸಂತೋಷ ಹುಣಶ್ಯಾಳ ಸೇರಿದಂತೆ ಮುದ್ರಣ ಮಾಲೀಕರು ಹಾಗೂ ಮುದ್ರಣ ಕಾರ್ಮಿಕರು ಉಪಸ್ಥಿತರಿದ್ದರು.

ಐಶ್ವರ್ಯ ಗಾಯಕವಾಡ ಭರತನಾಟ್ಯ ಮತ್ತು ನಿಜಗುಣಿ ಶಿವಶರಣ ಅವರ ಬಾನಿನಲ್ಲಿ ಮೂಡಿಬಂದ ಚೆಂದಾಮಾಮಾ ನೃತ್ಯ ಎಲ್ಲರನ್ನು ಮನಸೂರೆಗೊಳಿಸಿತು.

ಶ್ರೀಮಂತ ಬೂದಿಹಾಳ ನಿರೂಪಿಸಿದರು. ಉಮೇಶ ಕುಲಕರ್ಣಿ ವಂದಿಸಿದರು.

Leave a Reply

ಹೊಸ ಪೋಸ್ಟ್‌