ಕತ್ತೆಗಳ ಅದ್ದೂರಿ ಮದುವೆ- ನೂಲು ಸುತ್ತಿ, ಹಳದಿ ಹಚ್ಚಿ, ಹುಗ್ಗಿ ತಿಂದು ಕೃಪೆ ತೋರುವಂತೆ ಮೇಘರಾಜನ ಪ್ರಾರ್ಥಿಸಿದ ಗ್ರಾಮಸ್ಖರು
ವಿಜಯಪುರ: ಮಳೆಯಾಗದ ಹಿನ್ನೆಲೆಯಲ್ಲಿ ದೇವಸ್ಥಾನಗಳಲ್ಲಿ ಪೂಜೆ, ಜಲಾಭಿಷೇಕ, ಕತ್ತೆಗಳ ಮದುವೆ ಮಾಮೂಲು. ಆದರೆ, ಇದೇ ವರುಣನ ಕೃಪೆಗಾಗಿ ಬಸವನಾಡಿನಲ್ಲಿ ಗ್ರಾಮಸ್ಥರು ಅದ್ದೂರಿಯಾಗಿ ಗಾದರ್ಭಗಳ ಮದುವೆ ಗಮನ ಸೆಳೆದಿದೆ. ಮುಂಗಾರು ಹಂಗಾಮು ಆರಂಭವಾಗಿ ಒಂದೂವರೆ ತಿಂಗಳು ಕಳೆದರೂ ಬಸವ ನಾಡು ವಿಜಯಪುರ ಜಿಲ್ಲೆಯಲ್ಲಿ ವರುಣ ಇನ್ನೂ ಕೃಪೆ ತೋರಿಲ್ಲ. ಮೋಡ ಮುಸುಕಿದ ವಾತಾವರಣವಿದೆ ಆದರೂ, ನಾಲ್ಕಾರು ಹನಿ ಮಳೆ ಸುರಿದಿದ್ದು ಬಿಟ್ಟರೆ ಈ ಬಾರಿ ಮಳೆಯ ಕೊರತೆ ಪ್ರಮಾಣ ಹೆಚ್ಚಾಗಿದೆ. ಇದು ಭೂತಾಯಿಯನ್ನು ನಂಬಿ ಜೀವನ ಸಾಗಿಸುವ ರೈತರ […]
ದರಬಾರ ಕಾಲೇಜಿನಲ್ಲಿ ಕೌಶಲ್ಯ ಅಭಿವೃದ್ಧಿ ಕಾರ್ಯಾಗಾರ
ವಿಜಯಪುರ: ನಗರದ ಶ್ರೀಮತಿ ಕುಮುದಬೇನ ದರಬಾರ ಮಹಾವಿದ್ಯಾಲಯದಲ್ಲಿ ಅಂತಾರಾಷ್ಟ್ರೀಯ ಯುವ ಕೌಶಲ್ಯ ದಿನ ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಮಾತನಾಡಿದ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಅಧಿಕಾರಿ ಗುರುಪಾದಯ್ಯಾ ಹೀರೆಮಠ, ಉದ್ಯೋಗ ಪಡೆಯಲು ಅಗತ್ಯವಾಗಿರುವ ಕೌಶಲ್ಯಗಳ ಮಹತ್ವವನ್ನು ವಿವರಿಸಿದರು. ನಮ್ಮ ದೇಶದಲ್ಲಿ ಇರುವ ಸರಕಾರಿ ಉದ್ಯೋಗಗಳು ಮತ್ತು ಖಾಸಗಿ ವಲಯದಲ್ಲಿ ಉದ್ಯೋಗ ಅವಕಾಶಗಳ ಬಗ್ಗೆ ಹಾಗೂ ಅವುಗಳಿಗೆ ಬೇಕಾದ ಕೌಶಲ್ಯಗಳನ್ನು ವಿದ್ಯಾರ್ಥಿಗಳು ಹೇಗೆ ಅಳವಡಿಸಿಕೊಳ್ಳಬೇಕು ಎಂಬುದರ ಕುರಿತು ಅ;ರು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ನೂರಕ್ಕೂ ಅಧಿಕ ವಿದ್ಯಾರ್ಥಿಗಳು […]
ಕೇರಿಂಗ್ ಸೋಲ್ಸ್ ವತಿಯಿಂದ ಸ್ವಯಂ ಸೇವಕರಿಗೆ ಸನ್ಮಾನ
ವಿಜಯಪುರ: ಸಮಾಜಕ್ಕಾಗಿ ದುಡಿದ, ಸಮಾಜಕ್ಕೆ ಕೊಡುಗೆ ನೀಡುತ್ತಿರುವ ಶ್ರಮಜೀವಿಗಳಿಗೆ ಕೇರಿಂಗ್ ಸೋಲ್ಸ್ ಇಂಡಿಯಾ ವತಿಯಿಂದ ಸನ್ಮಾನ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಸಿಕ್ಯಾಬ್ ತಾಂತ್ರಿಕ ವಿದ್ಯಾಲಯದ ಕಂಪ್ಯೂಟರ್ ವಿಭಾಗದ ಮುಖಸ್ಥ ಡಾ. ಎಸ್. ಎ. ಖಾದ್ರಿ ಮತ್ತು ಸಿವಿಲ್ ವಿಭಾಗದ ಮುಖ್ಯಸ್ಥ ಡಾ. ಅಬ್ಬಾಸ ದುಂಡಸಿ ಮಾತನಾಡಿ, ಪ್ರತಿಯೊಬ್ಬರು ಸಮಾಜಕ್ಕೆ ಕೊಡುಗೆ ನೀಡಿದಾಗ ಜೀವನಕ್ಕೊಂದು ಅರ್ಥ ಬರುತ್ತದೆ. ಇಂಥ ಸಮಾಜ ಸೇವಕರಿಗೆ ಈ ಕೇರಿಂಗ್ ಸೋಲ್ಸ್ ಗುರುತಿಸಿ ಅವರನ್ನು ಸಹ ಸನ್ಮಾನಿಸುವುದು ಶ್ಲಾಘನೀಯವಾಗಿದೆ. ಸಮಾಜಕ್ಕೆ ದುಡಿಯುವವರು ಕುಟುಂಬ, ಮನೆ, […]
ಡಾ. ದರ್ಶನ ಮನೋಹರ ಬಿರಾದಾರ ರಾಷ್ಟ್ರೀಯ ಹೃದ್ರೋಗ ತಜ್ಞರ ಸಮಾವೇಶಕ್ಕೆ ಉತ್ತಮ ಉದಯೋನ್ಮುಖ ಹೃದ್ರೋಗ ತಜ್ಞರಾಗಿ ಆಯ್ಕೆ
ವಿಜಯಪುರ: ಹೈದರಾಬಾದಿನಲ್ಲಿ ಕಾರ್ಡಿಯಾಲಜಿ ಸೊಸೈಟಿ ಆಫ್ ಇಂಡಿಯಾ ಏರ್ಪಡಿಸಿದ ರಾಷ್ಟ್ರಮಟ್ಟದ ಹೃದಯ ರೋಗ ತಜ್ಞರ ಸಮಾವೇಶದಲ್ಲಿ ಉತ್ತಮ ಉದಯೋನ್ಮುಖ ಹೃದಯ ರೋಗ ತಜ್ಞ ಪ್ರಶಸ್ತಿಗೆ ಬಾಗಲಕೋಟೆ ಜಿಲ್ಲೆಯ ಮುಧೋಳ ನಗರದ ಹೃದರೋಗ ತಜ್ಞ ಡಾ. ದರ್ಶನ ಮನೋಹರ ಬಿರಾದಾರ ಆಯ್ಕೆಯಾಗಿದ್ದಾರೆ. ಪ್ರತಿವರ್ಷ ಯುವ ಹೃದಯರೋಗ ತಜ್ಞರನ್ನು ಕಾರ್ಡಿಯಾಲಜಿ ಸೊಸೈಟಿ ಆಫ್ ಇಂಡಿಯಾದಿಂದ ಉತ್ತಮ ಉದಯೋನ್ಮುಖ ತಜ್ಞರನ್ನು ಆಹ್ವಾನಿಸಿ, ಈ ಪ್ರಶಸ್ತಿ ನೀಡಲಾಗುತ್ತದೆ. ಈ ಪ್ರಶಸ್ತಿಗೆ ಕರ್ನಾಟಕದಿಂದ ಇಬ್ಬರು ಆಯ್ಕೆಯಾಗಿದ್ದಾರೆ. ಅದರಲ್ಲಿ ಡಾ. ದರ್ಶನ ಆಯ್ಕೆಯಾಗಿರುವುದು ಸಂತಸ ತಂದಿದೆ. […]