ವಿಜಯಪುರ: ಸಮಾಜಕ್ಕಾಗಿ ದುಡಿದ, ಸಮಾಜಕ್ಕೆ ಕೊಡುಗೆ ನೀಡುತ್ತಿರುವ ಶ್ರಮಜೀವಿಗಳಿಗೆ ಕೇರಿಂಗ್ ಸೋಲ್ಸ್ ಇಂಡಿಯಾ ವತಿಯಿಂದ ಸನ್ಮಾನ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಸಿಕ್ಯಾಬ್ ತಾಂತ್ರಿಕ ವಿದ್ಯಾಲಯದ ಕಂಪ್ಯೂಟರ್ ವಿಭಾಗದ ಮುಖಸ್ಥ ಡಾ. ಎಸ್. ಎ. ಖಾದ್ರಿ ಮತ್ತು ಸಿವಿಲ್ ವಿಭಾಗದ ಮುಖ್ಯಸ್ಥ ಡಾ. ಅಬ್ಬಾಸ ದುಂಡಸಿ ಮಾತನಾಡಿ, ಪ್ರತಿಯೊಬ್ಬರು ಸಮಾಜಕ್ಕೆ ಕೊಡುಗೆ ನೀಡಿದಾಗ ಜೀವನಕ್ಕೊಂದು ಅರ್ಥ ಬರುತ್ತದೆ. ಇಂಥ ಸಮಾಜ ಸೇವಕರಿಗೆ ಈ ಕೇರಿಂಗ್ ಸೋಲ್ಸ್ ಗುರುತಿಸಿ ಅವರನ್ನು ಸಹ ಸನ್ಮಾನಿಸುವುದು ಶ್ಲಾಘನೀಯವಾಗಿದೆ. ಸಮಾಜಕ್ಕೆ ದುಡಿಯುವವರು ಕುಟುಂಬ, ಮನೆ, ಮಠ ಬಿಟ್ಟು ಸಮಾಜಕ್ಕಾಗಿಯೇ ಮಿಡಿಯುತ್ತಿರುತ್ತಾರೆ. ಇವರು ಕೋವಿಡ್ ಸಂದರ್ಭದಲ್ಲಿ ತಮ್ಮ ಜೀವದ ಹಂಗನ್ನು ತೊರೆದು ನೋಂದ ಜೀವಿಗೆ ಬೆನ್ನೆಲೆಬಾಗಿ ನಿಂತಿರುವುದು ಪ್ರಶಂಸನಾರ್ಹವಾಗಿದೆ ಎಂದು ಹೇಳಿದರು.
ಸಮಾಜ ಸೇವಕ ನಿಯಾಜ ಬಾಗವಾನ, ಶಫಿವುಲ್ಲಾ ಸಂಗಾಪೂರ, ಗೌಸ್ ಮಲ್ನಾಡ, ಸಮೀರ ಶಿಪಾಯಿ, ಅಹಿತ್ಯೇಶಾಮ, ಉಮೇರ ಸೌದಾಗಾರ, ಶೋಯೇಬ ಜತ್, ಅಬ್ಬಾಸ ಕಲಾದಗಿ, ಬಿಲಾಲ ಯಾದಗೀರ, ಉಮರಫಾರುಕು ಬಾಗನವಾನ, ಮಹ್ಮದ ಆಸೀಫ್ ಹುಂಡೆಕಾರ, ಜುನೇದ ಇನಾಮದಾರ, ಅದ್ಬುಲ ಕರೀಂ, ನಿಯಾಜ ಹೆರಕಲ್, ಮುಂಬಸೀರ ಮಹಾಬರಿ, ಮಹ್ಮದ ಆಸೀಮ, ಕೀಜರ್‍ಅಹ್ಮದ ರೋಜಿನದಾರ ಮುಂತಾದವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಸಂಸ್ಥೆಯ ಉಪಾಧ್ಯಕ್ಷ ಮೊಹ್ಮದ ಹುಸೇನ ದೊಡಮನಿ, ಮೋಸೀನ ಮನಿಯಾರ ಸದಸ್ಯರಾದ ವಿನಾಯಕ ಕುಂಟೆ, ಬಂದೇನವಾಜ ಲೋಣಿ, ಅಸ್ಲಂ ಕರ್ಜಗಿ, ನ್ಯಾಮತ್ತುಲ್ಲಾ ಪಟೇಲ, ಕಾರ್ಯಕ್ರಮದ ಉಸ್ತುವಾರಿ ಮತ್ತು ಸಂಸ್ಥೆಯ ಅಧ್ಯಕ್ಷ ಆಸೀಫ್ ಇಕ್ಬಾಲ ದೊಡಮನಿ ಮುಂತಾದವರು ಉಪಸ್ಥಿತರಿದ್ದರು.