ಯತ್ನಾಳ‌ ಅಸ್ವಸ್ಥ- ಸಿಎಂ, ಸ್ಪೀಕರ, ಬೊಮ್ಮಾಯಿ, ಬಿ ಎಸ್ ವೈ ಆಸ್ತತ್ರೆಗೆ ಭೇಟಿ- ಆರಾಮವಾಗಿರುವೆ ಎಂದ ಶಾಸಕ

ಬೆಂಗಳೂರು: ಅಧಿವೇಶನ‌ ಸಂದರ್ಭದಲ್ಲಿ ಉಂಟಾದ ಗದ್ದಲದಲ್ಲಿ ಅಸ್ವಸ್ಥರಾದ ವಿಜಯಪುರ ನಗರ ಶಾಸಕ‌ ಬಸನಗೌಡ ಪಾಟೀಲ ಯತ್ನಾಳ ಬೆಂಗಳೂರಿನ ಪೋರ್ಟೀಸ್ ಆಸ್ಪತ್ರೆಗೆ ದಾಖಲಾಗಿದ್ದು, ಇದೀಗ ಚೇತರಿಸಿಕೊಳ್ಳುತ್ತಿದ್ದಾರೆ.

ಈ ಮಧ್ಯೆ, ಮುಖ್ಯಮಂತ್ರಿ ಎಸ್. ಸಿದ್ಧರಾಮಯ್ಯ, ಸ್ಪೀಕರ್ ಯು. ಟಿ. ಖಾದರ, ಮಾಜಿ ಸಿಎಂ ಗಳಾದ ಬಿ. ಎಸ್. ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಮುಖಂಡರಾದ ಸಿ. ಟಿ. ರವಿ ಸೇರಿದಂತೆ ಅನೇಕ ನಾಯಕರು ಆಸ್ಪತ್ರೆಗೆ ಭೇಟಿ ನೀಡಿ ಯತ್ನಾಳ ಅವರ ಆರೋಗ್ಯ ವಿಚಾರಿಸಿದ್ದಾರೆ.

ಯತ್ನಾಳ ಭೇಟಿ ಮಾಡಿ‌ ಆರೋಗ್ಯ ವಿಚಾರಿಸಿದ ಮಾಜಿ ಸಿಎಂ ಬಿ. ಎಸ್. ಯಡಿಯೂರಪ್ಪ

ಮಧ್ಯಾಹ್ನ ವಿಧಾನ ಸಭೆ ಅಧಿವೇಶನದಲ್ಲಿ ಗದ್ದಲ ಉಂಟಾಗಿತ್ತು.  ಈ ಸಂದರ್ಭದಲ್ಲಿ ಸ್ಪೀಕರ್ ಸೂಚನೆ ಹಿನ್ನೆಲೆ ಮಾರ್ಷಲ್ ಗಳು‌ ಶಾಸಕರನ್ನು ಹೊರಗೆ ಎತ್ತಿಕೊಂಡು ಹೋಗುವಾಗ ಗದ್ದಲ ಉಂಟಾಯಿತು.  ನೂಕು ನುಗ್ಗಲು‌ ಉಂಟಾದಾಗ ಯತ್ನಾಳ ಕುಸಿದು ಅಸ್ವಸ್ಥರಾದರು.  ಆಗ ಕೂಡಲೇ ಆ್ನಂಬುಲನ್ಸ್ ಮೂಲಕ ಶಾಸಕರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು.

ಕಳೆದ ಎರಡು ದಿನಗಳಿಂದ ಪ್ರವಾಸ ಕೈಗೊಂಡಿದ್ದ ಯತ್ನಾಳ ವಿಶ್ರಾಂತಿ ತೆಗೆದುಕೊಂಡಿರಲಿಲ್ಲ.  ಅಲ್ಲದೇ, ಬೆಳಿಗ್ಗೆ ಹಾಗೂ ಮಧ್ಯಾಗ್ನ ಸರಿಯಾಗಿ ಆಹಾರ ಸೇವಿಸಿರಲಿಲ್ಲ‌.  ಅಲ್ಲದೇ, ಅಧಿವೇಶನದಲ್ಲಿ‌ ಪ್ರತಿಭಟನೆ ವೇಳೆ ಬಹಳ ಹೊತ್ತು ನಿಂತುಕೊಂಡೆ ಇದ್ದರು.  ಈ ಹಿನ್ನೆಲೆಯಲ್ಲಿ ಅವರು ಬಳಲಿ ಅಸ್ವಸ್ಥರಾದರು ಎನ್ನಲಾಗಿದೆ.

ಆರೋಗ್ಯದಿಂದ ಇದ್ದೇನೆ ಎಂದ ಶಾಸಕ

ಈ ಮಧ್ಯೆ, ತಾವು ಈಗ ಆರೋಗ್ಯದಿಂದ ಇರುವುದಾಗಿ ಯತ್ನಾಳ‌ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

 

 

Leave a Reply

ಹೊಸ ಪೋಸ್ಟ್‌