ಬ್ಯಾಡ್ಮಿಂಟನ್ ಆಡುವಾಗ ಅಸ್ವಸ್ಥರಾಗಿದ್ದ ಲೋಕಾಯುಕ್ತ ಡಿವೈಎಸ್ಪಿ ಅರುಣ ನಾಯಕ ನಿಧನ

ವಿಜಯಪುರ: ಬ್ಯಾಡ್ಮಿಂಟನ್ ಆಡುವಾಗ ಅಸ್ವಸ್ಥರಾಗಿದ್ದ ವಿಜಯಪುರ ಲೋಕಾಯುಕ್ತ ಎಸ್ಪಿ ಅರುಣ ನಾಯಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ.

ನಗರದ ಜಿಲ್ಲಾ ಕ್ರೀಡಾಂಗಣದ ಬಳಿ‌‌ ಇರುವ ಒಳಾಂಗಣ ಕ್ರೀಡಾಂಗಣದಲ್ಲಿ ಅರುಣ ನಾಯಕ ಅವರು ರಾತ್ರಿ 8.30ರ ಸುಮಾರಿಗೆ ಇತರ ಆಟಗಾರರೊಂದಿಗೆ ಆಟವಾಡುತ್ತಿದ್ದರು.  ಸುಮಾರು‌ ಆರು ಗೇಮ್ ಆಟವಾಡಿದ ಮೇಲೆ ಸುಸ್ತಾದವರಂತೆ ಕಂಡು ಬಂದ ಅವರು ಪಕ್ಕದ ಬೆಂಚ್ ಮೇಲೆ ಹೋಗಿ ಕುಳಿತರು.  ಅಷ್ಟರಲ್ಲಿ ಉಸಿರಾಟವೂ ಹೆಚ್ಚಾಗಿದ್ದ ಶಬ್ದ ಬಂದ ಹಿನ್ನೆಲೆಯಲ್ಲಿ ಅವರ ಜೊತೆ ಆಟವಾಡುತ್ತಿದ್ದ ಸಗರ ಅಬೂಬಕರ, ಅಜೀಂ, ಯುನೂಸ್ ಮುಂತಾದವರು ಅರುಣ ನಾಯಕ‌ ಅವರನ್ನು ಕೂಡಲೇ ಕಾರಿನಲ್ಲಿ ಕ್ರೀಡಾಂಗಣದಿಂದ ಸ್ವಲ್ಪವೇ ದೂರದಲ್ಲಿರುವ ಡಾ. ಶಂಕರಗೌಡರ ಅವರ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.  ಅಲ್ಲಿ ವೈದ್ಯರು ಸಾಕಷ್ಟು ಪ್ರಯತ್ನ ಮಾಡಿದತೂ ಫಲಿಸದೇ ಲೋಕಾಯುಕ್ತ ಡಿವೈಎಸ್ಪಿ ಅರುಣ ನಾಯಕ ಕೊನೆಯುಸಿರೆಳೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇದಕ್ಕೂ ಮೊದಲು ಅರುಣ ನಾಯಕ ಅವರು ಯುವ ಉದ್ಯಮಿ ಅರುಣ ಮಾಚಪ್ಪನವರ ಸೇರಿದಂತೆ ಇತರರೊಂದಿಗೆ ಮೂರ್ನಾಲ್ಕು ಗೇಮ್ ಆಟವಾಡಿದ್ದರು.  ಅರುಣ ಮಾಚಪ್ಪನವರ ಅವರು ಅತಿಥಿಗಳ‌ ಆಗಮನದ ಹಿನ್ನೆಲೆಯಲ್ಲಿ ಮನೆಗೆ ತೆರಳಿದ್ದರು.

ಇದಾದ ನಂತರವೂ ಆಟ ಮುಂದುವರೆಸಿದ್ದ ಅರುಣ ನಾಯಕ ಕುಡಿಯಲು ಬೋರ್ನವಿಟಾ ತರಿಸಿದ್ದರು.  ಅಲ್ಲದೇ ಜಿಮ್ ತರಬೇತುದಾರ ಶಿವಾ ಅಮರಪ್ಪಗೋಳ ಅವರಿಗೆ ತಮ್ಮ ಜೊತೆ ಬೋರ್ನವಿಟಾ ಕುಡಿಯಲು ಕರೆದಾಗ ಅವರು ಬೇಡ ಸರ್ ಎಂದು ಅಲ್ಲಿಂದ ತೆರಳಿದ ಕೆಲವೇ ನಿಮಿಷಗಳಲ್ಲಿ ಅರುಣ ನಾಯಕ ಅವರಿಗೆ ಆರೋಗ್ಯ ಸಮಸ್ಯೆ ಎದರಾಗಿದೆ ಎಂದು ಶಿವಾ ಅಮರಪ್ಪಗೋಳ ಮಾಹಿತಿ ನೀಡಿದ್ದಾರೆ.

ಬಲ್ಲ ಮೂಲಗಳ ಪ್ರಕಾರ ಲೋಕಾಯುಕ್ತ ಡಿವೈಎಸ್ಪಿ ಅರುಣ ನಾಯ ಅವರಿಗೆ ತೀವ್ರ ಹೃದಯಾಘಾತವಾಗಿದೆ.  ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾರೆ.

ಅಂಕೋಲಾಕ್ಕೆ ಪಾರ್ಥಿವ ಶರೀರ ರವಾನೆ

ಈ ವಿಷಯ ತಿಳಿದ ವಿಜಯಪುರ ಜಿಲ್ಲೆ ಹಿರಿಯ ಪೊಲೀಸ್ ಮತ್ತೀತರ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.  ಅರುಣ ನಾಯಕ ಅವರು ಪತ್ನಿ ಮತ್ತು ಓರ್ವ ಪುತ್ರನನ್ನು ಅಗಲಿದ್ದಾರೆ.  ಇವರ ಮಗ ತಾಯಿಯೊಂದಿಗೆ ಬೆಂಗಳೂರಿನಲ್ಲಿ ವಾಸಿಸುತ್ತಿದ್ದಾರೆ.  ಸಕಲ ವೈದ್ಯಕೀಯ ಕ್ರಿಯೆಗಳ ಬಳಿಕ‌ ಅವರ ಸ್ವಗ್ರಾಮ ಉತ್ತರ ಕರ್ನಡ ಜಿಲ್ಲೆಯ ಅಂಕೋಲಾಕ್ಲೆ ಪಾರ್ಥಿವ ಶರೀರವನ್ನು ರವಾನೆ ಮಾಡಲಾಗಿದೆ.

Leave a Reply

ಹೊಸ ಪೋಸ್ಟ್‌