ಗ್ರಾಮಗಳ ಅಭಿವೃದ್ಧಿಯಿಂದ ದೇಶದ ಏಳಿಗೆ ಸಾಧ್ಯ- ಡಾ. ಆರ್. ಬಿ. ಕೊಟ್ನಾಳ

ವಿಜಯಪುರ: ಗ್ರಾಮಗಳ ಅಭಿವೃದ್ಧಿಯಿಂದ ದೇಶ ಏಳಿಗೆ ಸಾಧ್ಯ ಎಂದು ಬಿ.ಎಲ್.ಡಿ.ಇ ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿ ಡಾ. ಆರ್. ಬಿ. ಕೊಟ್ನಾಳ ಹೇಳಿದ್ದಾರೆ.

ಕನ್ನಾಳ ಗ್ರಾಮದಲ್ಲಿ  ಬಿ. ಎಲ್. ಡಿ. ಇ ಸಂಸ್ಥೆಯ ಎಸ್.ಬಿ ಕಲಾ ಮತ್ತು ಕೆ.ಸಿ.ಪಿ ವಿಜ್ಞಾನ ಮಹಾವಿದ್ಯಾಲಯ ಹಾಗೂ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಎನ್. ಎಸ್. ಎಸ್ ವಿಶೇಷ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಚವಾಗಿಟ್ಟುಕೊಳ್ಳಲು ನಾವೆಲ್ಲರೂ ಶ್ರಮಿಸಬೇಕು.  ಭಾರತ ಹಳ್ಳಿಗಳಿಂದ ಕೂಡಿರುವ ದೇಶವಾಗಿದ್ದು, ಹಳ್ಳಿಗಳು ಅಭಿವೃದ್ಧಿಯಾದರೆ ದೇಶ ಅಭಿವೃದ್ದಿಯಾದಂತೆ.  ಇದರಿಂದ  ಮಹಾತ್ಮ ಗಾಂಧೀಜಿಯವರ ಗ್ರಾಮಸ್ವರಾಜ್ಯದ ಪರಿಕಲ್ಪನೆ ಸಾಕಾರವಾಗಲಿದೆ.  ವಿದ್ಯಾರ್ಥಿಗಳು ಇಂಥ ಕ್ಯಾಂಪ್‌ ಗಳಲ್ಲಿ ಪಾಲ್ಗೋಳ್ಳುವ ಮೂಲಕ ಕೇವಲ ಸ್ವಚ್ಛತೆ ಮಾತ್ರವಲ್ಲ, ಶಿಸ್ತು, ವ್ಯಕ್ತಿತ್ವ ವಿಕಸನ, ಜೀವನದ ಮೌಲ್ಯಗಳನ್ನು ಅರ್ಥೈಸಿಕೊಳ್ಳಲು ಸಾಧ್ವಯಾಗಲಿದೆ ಎಂದು ಹೇಳಿದರು.

ಕನ್ನಾಳ ಗ್ರಾಮದಲ್ಲಿ ನಡೆದ ಎಸ್.ಎಸ್.ಎಸ್ ವಿಶೇಷ ಶಿಬಿರವನ್ನು ಡಾ. ಆರ್. ಬಿ.ಕೊಟ್ನಾಳ ಉದ್ಘಾಟಿಸಿ ಮಾತನಾಡಿದರು

ಸುಕ್ಷೇತ್ರ ಕನ್ನಾಳದ ಶ್ರೀ ಭೀಮಾಶಂಕರ ಶಿವಯೋಗಿಗಳು ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಶೈಕ್ಷಣಿಕ ಹೊರತಾಗಿ ನಾನಾ ಪಠ್ಯೇತರ ಚಟುವಟಿಕೆಗಳಲ್ಲಿ ಪಾಲಗೊಳ್ಳಬೇಕು.  ಸಮಯ ಮತ್ತು ಶಿಸ್ತಿಗೆ ಮಹತ್ವ ನೀಡಬೇಕು.  ಕಲಿತ ವಿದ್ಯೆಯನ್ನು ಸದುಪಯೋಗ ಪಡಿಸಿಕೊಂಡು ಉತ್ತಮ ಪ್ರಜೆಗಳಾಗಬೇಕು ಎಂದು ಹೇಳಿದರು.

ಎನ್. ಎಸ್. ಎಸ್. ಜಿಲ್ಲಾ ನೂಡಲ್ ಅಧಿಕಾರಿ ಡಾ. ಪ್ರಕಾಶ ರಾಠೋಡ ಮಾತನಾಡಿ, ಎನ್. ಎಸ್. ಎಸ್  ಧ್ಯೇಯೋಗಳನ್ನು ವಿವರಿಸಿದರು.

ಈ ಸಂದರ್ಭದಲ್ಲಿ ಪ್ರಾಚಾರ್ಯೆ ಡಾ. ಆರ್. ಎಂ. ಮಿರ್ದೆ, ಎನ್. ಎಸ್. ಎಸ್ ಅಧಿಕಾರಿಪ್ರೊ. ಕೃಷ್ಣಾ ಮಂಡ್ಲಾ, ಡಾ. ತರನ್ನುಮ್ ಜಬೀನ ಖಾನ್, ಗ್ರಾಮದ ಹಿರಿಯರಾದ ಚನಗೌಡ ಬಿ. ಪಾಟೀಲ, ಮುಖ್ಯ ಶಿಕ್ಷಕಿ ಎನ್. ಆರ್. ಹೊನ್ನುಟಗಿ., ಪ್ರೊ. ಕಿರಣಕುಮಾರ ಹರಿದಾಸ, ಪ್ರೊ. ಜಿ. ಎಂ. ಗೇಂಡ್ ಮಹಾವಿದ್ಯಾಲಯದ ಬೊಧಕ, ಬೋಧಕರ ಹೊರತಾದ ಸಿಬ್ಬಂದಿ, ಶಿಬಿರಾರ್ಥಿಗಳು ಮತ್ತೀತರರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌