ಬಿ.ಎಲ್.ಡಿ.ಇ ಡೀಮ್ಡ್ ವಿವಿ ರಜಿಸ್ಟ್ರಾರ್ ಡಾ. ರಾಘವೇಂದ್ರ ಕುಲಕರ್ಣಿ ನೇತೃತ್ವದ ವಿಜ್ಞಾನಿಗಳ ಸಂಶೋಧನೆಗೆ ಭಾರತ ಸರಕಾರದಿಂದ ಪೇಟೆಂಟ್ ಘೋಷಣೆ

ವಿಜಯಪುರ: ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ರಜಿಸ್ಟ್ರಾರ್ ಡಾ. ರಾಘವೇಂದ್ರ ಕುಲಕರ್ಣಿ ಮತ್ತು ಔಷಧ ವಿಜ್ಞಾನಿಗಳು ಕೈಗೊಂಡ ಸಂಶೋಧನೆಗೆ ಭಾರತ ಸರಕಾರ ಪೇಟೆಂಟ್ ನೀಡಿದೆ.

ಫಾರ್ಮಾಸ್ಯೂಟಿಕಲ್ ಪಾರ್ಮುಲೇಶನ್ಸ್ ಆಫ್ ಎಲೆಕ್ಟ್ರೊ- ರಿಸ್ಪಾನ್ಸಿವ್ ಸ್ಮಾರ್ಟ್ ಹೈಡ್ರೊಜೆಲ್ ಫಾರ್ ಟ್ರಾನ್ಸಡರ್ಮಲ್ ಡ್ರಗ್ ಡೆಲಿವರಿ(Pharmaceutical Formulations of Electro-Responsive Smart Hydrogel For Transdermal Drug Delivery) ಆವಿಷ್ಕಾರ ಮಾಡಿದ್ದು, ಈ ಸಂಶೋಧನೆಗೆ ಭಾರತ ಸರಕಾರದ ಪೇಟೆಂಟ್ ಪ್ರಮಾಣ ಪತ್ರ ಲಭ್ಯವಾಗಿದೆ.

ಭಾರತ ಸರಕಾರ ನೀಡಿರುವ ಪೇಟೆಂಟ್ ಪತ್ರ

ಬಿ.ಎಲ್.ಡಿ.ಇ ಸಂಸ್ಥೆ ಮತ್ತು ರಾಜ್ಯಕ್ಕೆ ಕೀರ್ತಿ ತಂದಿರುವ ಕೆಲಸ ಡಾ. ಆರ್. ವಿ. ಕುಲಕರ್ಣಿ ಹಾಗೂ ಬಿ.ಎಲ್.ಡಿ.ಇ ಸಂಸ್ಥೆಯ ಶ್ರೀ ಸಂಗನಬಸವ ಮಹಾಸ್ವಾಮೀಜಿ‌ ಫಾರ್ಮಸಿ ಕಾಲೇಜಿನ ವಿಜ್ಞಾನಿಗಳಾದ ಸುಧಾ ಬಿ. ಪಾಟೀಲ, ಡಾ. ಕೃಷ್ಣಾಚಾರ್ಯ ಜಿ. ಅಕಮಂಚಿ, ಡಾ. ಕುಶಾಲ ಕೆ. ದಾಸ ಅವರ ತಂಡಕ್ಕೆ ಅವರಿಗೆ ಸಂಸ್ಥೆಯ ಅಧ್ಯಕ್ಷ ಎಂ. ಬಿ. ಪಾಟೀಲ, ಅಭಿನಂದನೆ ಸಲ್ಲಿಸಿದ್ದಾರೆ. ಅಲ್ಲದೇ, ಈ ವಿಜ್ಞಾನಿಗಳ ತಂಡದ ಸಂಶೋಧನೆ ಹಾಗೂ ಆವಿಷ್ಕಾರಗಳು ನಿರಂತರವಾಗಿರಲಿ ಎಂದು ಹಾರೈಸಿದ್ದಾರೆ.

One Response

Leave a Reply

ಹೊಸ ಪೋಸ್ಟ್‌