ವಿಜಯಪುರ: ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರಗಳು ವಿದ್ಯಾರ್ಥಿಗಳಲ್ಲಿ ಶಿಸ್ತು, ಸಂಯಮ ಕಲಿಸುವದರೊಂದಿಗೆ ಸೇವಾ ಮನೋಭಾವ, ಸಹಬಾಳ್ವೆಯ ಬದುಕನ್ನು ಬೆಳೆಸುತ್ತವೆ ಎಂದು ಸಿಕ್ಯಾಬ್ ಎ. ಆರ್. ಎಸ್. ಇನಾಮದಾರ ಪದವಿ ಮಹಿಳಾ ಕಾಲೇಜಿನ ಗವರ್ನಿಂಗ್ ಕೌನ್ಸಿಲ್ ಚೇರಮನ್ ರಿಯಾಜ್ ಫಾರೂಖಿ ಹೇಳಿದರು.
ನಗರದ ಸಿಕ್ಯಾಬ್ ಪದವಿ ಮಹಿಳಾ ಮಹಾವಿದ್ಯಾಲಯ ಹಾಗೂ ಸ್ನಾತಕೋತ್ತರ ಕೇಂದ್ರದ ಎನ್. ಎಸ್. ಎಸ್. ಘಟಕ ಸುಹಾಗ ಕಾಲನಿಯಲ್ಲಿ ಆಯೋಜಿಸಿದ್ದ ವಿಶೇಷ ಶಿಬಿರ ಉದ್ಘಾಟನೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಕಾರ್ಯಕ್ರಮದ ಉದ್ಘಾಟಿಸಿದ ವಿಜಯಪುರ ಮಹಾನಗರ ಪಾಲಿಕೆಯ ಸದಸ್ಯ ಅಪ್ಪು ಪೂಜಾರಿ ಮಾತನಾಡಿ ಎನ್. ಎಸ್. ಎಸ್. ಶಿಬಿರಗಳು ನಾನು ನನಗಾಗಿ ಮಾತ್ರವಲ್ಲ, ನಾನು ಎಲ್ಲರಿಗಾಗಿ ಎಂಬ ಮನೋಭಾವ ಬೆಳೆಸಿ ಪರೋಪಕಾರ ಗುಣವನ್ನು ರೂಡಿಸಿಕೊಳ್ಳುವುದನ್ನು ಕಲಿಸುತ್ತವೆ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಸುಹಾಗ ಕಾಲನಿಯ ಮಕ್ಕಾ ಮಸೀದಿಯ ಅಧ್ಯಕ್ಷ ಮಕ್ತುಮಸಾಬ್ ಸೌದಾಗರ, ಉಪಪ್ರಾಚಾರ್ಯ ಪ್ರೊ. ಝಡ್. ಟಿ. ಖಾಜಿ, ಕಾಲೇಜಿನ ಉಪನ್ಯಾಸಕರು, ಸುಹಾಗ ಕಾಲನಿಯ ಸಾರ್ಜಜನಿಕರು ಉಪಸ್ಥಿತರಿದ್ದರು.
ವಿದ್ಯಾರ್ಥಿನಿಯರಾದ ಭಾಗ್ಯಾ ವಗ್ಗರ, ಮಿನಾಜ್ ಸಾಲೋಟಗಿ, ಐಶ್ವರ್ಯ ತೇಲಿ, ಪಲ್ಲವಿ ಹಿರೇಮಠ, ಕೀರ್ತಿ ಪೂಜಾರಿ ಎನ್.ಎಸ್.ಎಸ್. ಗೀತೆ ಹಾಡಿದರು. ಪ್ರಾಚಾರ್ಯ ಪ್ರೊ. ಎಂ. ಟಿ. ಕೊಟ್ನಿಸ್ ಸ್ವಾಗತಿಸಿದರು, ಡಾ. ಎಚ್. ಕೆ. ಯಡಹಳ್ಳಿ ಸನ್ಮಾನ ಕಾರ್ಯಕ್ರಮ ನಡೆಸಿಕೊಟ್ಟರು. ಎನ್. ಎಸ್. ಎಸ್. ಅಧಿಕಾರಿ ಡಾ. ಮುಸ್ತಾಕ ಇನಾಮದಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಮಲ್ಲಿಕಾರ್ಜುನ ಮೇತ್ರಿ ನಿರೂಪಿಸಿದರು. ಎನ್. ಎಸ್. ಎಸ್. ಅಧಿಕಾರಿ ಡಾ. ಸಮಿಯುದ್ದೀನ ವಂದಿಸಿದರು.