ತರಕಾರಿ ಬೆಲೆ ಗಗನಕ್ಕೆ: ಸಹಪಾಠಿಗಳಿಗೆ ಬೀಜ ನೀಡಿ ವಿನೂತನವಾಗಿ ಜನ್ಮದಿನ ಆಚರಿಸಿಕೊಂಡ ಬಾಲಕ

ವಿಜಯಪುರ: ಇತ್ತೀಚೆಗೆ ತರಕಾರಿ ಬೆಲೆ ಗಗನಮುಖಿಯಾಗಿದೆ.  ಅದರಲ್ಲೂ ಕೆಂಪು ಬಂಗಾರ ಎಂದೇ ಈಗ ಕರೆಯಲಾಗುತ್ತಿರುವ ಟೊಮೆಟೊ ಬೆಲೆಯಂತೂ ಬಡವರಷ್ಟೇ ಯಾಕೆ, ಮಧ್ಯಮ ವರ್ಗದವರಿಗೂ ಕೈಗೆಟುಕದಂತಾಗಿದೆ.  ಮಕ್ಕಳಲ್ಲಿ ವಿದ್ಯಾರ್ಥಿ ದಿಸೆಯಿಂದಲೇ ಸಾಮಾನ್ಯ ಜ್ಞಾನ ಒದಗಿಸುವ ನಿಟ್ಟನಲ್ಲಿ ಮತ್ತು ಹಣದ ಮಹತ್ವದ ಕುರಿತು ಅರಿವು ಮೂಡಿಸುವ ನಿಟ್ಟಿನಲ್ಲಿ ನಗರದ ಪ್ರೇರಣಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಅರವಿಂದ ಪಾಟೀಲ ವಿನೂತನ ಜ್ಞಾನಹಂಚಿಕೆ ಮಾಡುತ್ತಲೇ ಇರುತ್ತಾರೆ. ಈಗ ಗಗನಕ್ಕೇರಿರುವ ತರಕಾರಿ ಬೆಲೆಯ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸಲು ಮತ್ತು ಅದಕ್ಕೆ ಪರಿಹಾರವಾಗಿ […]

ರಾಜನಾಳ ತಾಂಡಾದಲ್ಲಿ ಶಾಲೆಯಲ್ಲಿ ಪಾಠದ ಬದಲು ಮೈದಾನದಲ್ಲಿ ಆಟವಾಡುತ್ತಿರುವ ಮಕ್ಕಳು- ಯಾಕೆ ಗೊತ್ತಾ

ವಿಜಯಪುರ: ಎಸ್. ಡಿ. ಎಂ. ಸಿ ಅಂದರೆ ಶಾಲಾ ಅಭಿವೃದ್ಧಿ ನಿರ್ವಹಣೆ ಸಮಿತಿ ಮಕ್ಕಳ ವಿದ್ಯಾಭ್ಯಾಸದ ಗುಣಮಟ್ಟದ ಶಿಕ್ಷಣದ ಪರಿಶೀಲನೆ ಜೊತೆಗೆ ಪಠ್ಯೇತರ ಚಟುವಟಿಕೆಗಳಿಗೂ ಪ್ರೋತ್ಸಾಹ ನೀಡುವುದು ಸಾಮಾನ್ಯ. ಆದರೆ, ಇಂಥ ಎಸ್. ಡಿ. ಎಂ. ಸಿ ಅಧ್ಯಕ್ಷರು ಮಕ್ಕಳಿಗೆ ಪಾಠ ಮಾಡಿಸುವ ಬದಲು ಆಟಕ್ಕೆ ಬಿಟ್ಟರೆ ಹೇಗಿರಬೇಡ? ಆಟವಾಡುವುದೆಂದರೆ ಮಕ್ಕಳಿಗೆ ಸಿಗುವ ಮಜವೇ ಬೇರೆ.  ಆದರೆ, ಪಾಠ ಬೇಡ ಎಂದು ಆಟಕ್ಕೆ ಕಳುಹಿಸಿದರೆ ಪೋಷಕರೂ ತಕರಾರು ಮಾಡುವುದುಂಟು.  ಆದರೆ, ಇಲ್ಲಿ ಯಾರೂ ಈ ಬಗ್ಗೆ ತಕರಾರು […]