ದರ್ಗಾ ಎಂ. ಎಂ. ತೆಲಗಿ ಸರಕಾರಿ ಶಾಲೆಯ ಎಸ್. ಡಿ. ಎಂ. ಸಿ. ಅಧ್ಯಕ್ಷರಾಗಿ ಸುನೀಲ ಕೃಷ್ಣಪ್ಪ ಬೋರಗಿ, ಮಲ್ಲಿಕಾರ್ಜುನ ಗಂಗನಗೌಡ ಬಿರಾದಾರ ಆಯ್ಕೆ
ವಿಜಯಪುರ: ನಗರದ ದರ್ಗಾದಲ್ಲಿರುವ ಎಂ. ಎಂ. ತೆಲಗಿ ಸರಕಾರಿ ಕನ್ನಡ ಹೆಣ್ಣು ಮಕ್ಕಳ ಶಾಲೆ ಸಂಖ. 12ರ ನೂತನ ಎಸ್.ಡಿ.ಎಂ.ಸಿ(ಶಾಲಾ ಅಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿ) ರಚನೆ ಮಾಡಲಾಗಿದ್ದು, ನೂತನ ಅಧ್ಯಕ್ಷರಾಗಿ ಸುನೀಲ ಕೃಷ್ಣಪ್ಪ ಭೋರಗಿ ಮತ್ತು ಉಪಾಧ್ಯಕ್ಷರಾಗಿ ಮಲ್ಲಿಕಾರ್ಜುನ ಗಂಗನಗೌಡ ಬಿರಾದಾರ ಅವರನ್ನು ಆಯ್ಕೆ ಮಾಡಲಾಗಿದೆ. ಇನ್ನಿತರ 16 ಜನ ಸದಸ್ಯರನ್ನು ಈ ಸಮಿತಿ ಹೊಂದಿದ್ದು, ಇದರಲ್ಲಿ ತಲಾ ಎಂಟು ಜನ ಪುರುಷ ಮತ್ತು ಮಹಿಳಾ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ಈ ಸಮಿತಿ ಮೊದಲ ಸಭೆ […]
ರಾಜ್ಯ ಸರಕಾರದಿಂದ ಸರ್ವಾಧಿಕಾರಿ ಧೋರಣೆ ಆರೋಪ- ಗುಮ್ಮಟ ನಗರಿಯಲ್ಲಿ ಬಿಜೆಪಿಯಿಂದ ಹಲಗೆ ಬಾರಿಸಿ ಪ್ರತಿಭಟನೆ
ವಿಜಯಪುರ: ಕಾಂಗ್ರೆಸ್ ಸರಕಾರ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು. ವಿಧಾನಸಭೆ ಅಧಿವೇಶನದಲ್ಲಿ ಮಾರ್ಷಲ್ ಗಳು ದೌರ್ಜನ್ಯ ಎಸಗಿದ್ದಾರೆ. ಅಲ್ಲದೇ, ಕಾಂಗ್ರೆಸ್ ಸರಕಾರದ ಸಂವಿಧಾನ ವಿರೋಧಿ ಧೋರಣೆ ಅನುಸರಿಸುವ ಮೂಲಕ 10 ಶಾಸಕರನ್ನು ಅಮಾನತು ಮಾಡಿದೆ. ಸಭಾಧ್ಯಕ್ಷರ ಈ ನಡೆ ಅಸಂವಿಧಾನಿಕವಾಗಿದೆ. ಅಲ್ಲದೇ, ಹಿರಿಯ ಶಾಸಕರೆಂಬ ಕಾಳಜಿಯೂ ಇಲ್ಲದೆ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರನ್ನು ಎಳೆದಾಡಿ ಅಪಮಾನ ಮಾಡಲಾಗಿದೆ ಎಂದು ಆರೋಪಿಸಿ ಬಿಜೆಪಿ ಪ್ರತಿಭಟನೆ ನಡೆಸಿತು. […]
ನನ್ನ ವಿರುದ್ಧ ಬೇನಾಮಿ ಮೊಬೈಲ್ ನಂಬರ ಬಳಸಿ ಅಪಪ್ರಚಾರ- ಇದಾವುದೂ ಪರಿಣಾಮ ಬೀರಲ್ಲ- ರಮೇಶ ಜಿಗಜಿಣಗಿ
ವಿಜಯಪುರ: ಕೈಲಾಗದವರು ಮೈ ಪರಚಿಕೊಂಡರು ಎಂಬಂತೆ ಕೆಲವು ದುಷ್ಠರು ನನ್ನ ವಿರುದ್ಧ ಅನಾಮಿಕ ಮೊಬೈಲ್ ನಂಬರ್ ಗಳನ್ನು ಬಳಸಿ ಅಪಪ್ರಚಾರ ಮಾಡುತ್ತಿದ್ದು, ಅವರ ವಿರುದ್ಧ ದೂರು ನೀಡಲು ಕ್ರಮ ಕೈಗೊಂಡಿರುವುದಾಗಿ ಸಂಸದ ರಮೇಶ ಜಿಗಜಿಣಗಿ ತಿಳಿಸಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಕೆಲವು ಮೊಬೈಲ್ ನಂಬರುಗಳಿಂದ ಜಿಲ್ಲೆಯಲ್ಲಿ ಪಂಚಾಯಿತಿ ಸದಸ್ಯರು ಮತ್ತು ಸ್ಥಳೀಯ ಜನಪ್ರತಿನಿಧಿಗಳಿಗೆ ಕರೆ ಮಾಡುತ್ತಿದ್ದಾರೆ. ಅಲ್ಲದೇ, ನನ್ನ ಬಗ್ಗೆ ರಾಜಕೀಯ ಷಡ್ಯಂತ್ರ ರೂಪಿಸುತ್ತಿದ್ದಾರೆ. ನೇರವಾಗಿ ನನ್ನನ್ನು ಎದುರಿಸಲು ಹಿಂಜರಿಯುತ್ತಿರುವ ದುರುಳರು ನಡೆಸುತ್ತಿರುವ […]
ಅಗರಖೇಡದಲ್ಲಿ 49 ಮಿಮಿ, ಇಂಡಿಯಲ್ಲಿ 35 ಮಿಮಿ ಮಳೆ- ಬಸವನಾಡಿನಲ್ಲಿ ಕಳೆದ 24 ಗಂಟೆಗಳಲ್ಲಿ ಸುರಿದ ಮಳೆ, ಆಸ್ತಿಹಾನಿ ಎಷ್ಟು ಗೊತ್ತಾ?
ವಿಜಯಪುರ: ಬಸವನಾಡು ವಿಜಯಪುರ ಜಿಲ್ಲೆಯಲ್ಲಿ ಕಳೆದ 24 ಗಂಟೆಗಳಲ್ಲಿ ಅಲ್ಲಲ್ಲಿ ಉತ್ತಮ ಮಳೆಯಾಗಿದ್ದು, ಮೂರು ಮನೆಗಳು ಹಾನಿಗೀಡಾಗಿವೆ. ವಿಜಯಪುರ ಜಿಲ್ಲೆಯ ನಾನಾ ಕಡೆ ಸುರಿದ ಮಳೆಯ ವಿವರ ಇಲ್ಲಿದೆ. ವಿಜಯಪುರ ತಾಲೂಕು ವಿಜಯಪುರ ನಗರ- 16.6 ಮಿಮಿ ನಾಗಠಾಣ- 0.16 ಮಿಮಿ ಭೂತ್ನಾಳ- 1.2 ಮಿಮಿ ಹಿಟ್ನಳ್ಳಿ- 5.0 ಮಿಮಿ ಕುಮಟಗಿ- 0.4 ಮಿಮಿ ಬಬಲೇಶ್ವರ ತಾಲೂಕು ಮಮದಾಪುರ- 6.0 ಮಿಮಿ ಬಬಲೇಶ್ವರ- 3.8 ಮಿಮಿ ತಿಕೋಟಾ ತಾಲೂಕು ತಿಕೋಟಾ- 4.2 ಮಿಮಿ ಕನ್ನೂರ- 00 ಮಿಮಿ […]
ಡಾ. ದೀಪಕಕುಮಾರ ಆರ್. ಚವ್ಹಾಣ ಸಂಶೋಧನೆಗೆ ಭಾರತ ಸರಕಾರದಿಂದ 2ನೇ ಬಾರಿ ಮಾನ್ಯತೆ- ಬಿ.ಎಲ್.ಡಿ.ಇ ಡೀಮ್ಡ್ ವಿವಿಗೆ ಮತ್ತೋಂದು ಗರಿ
ವಿಜಯಪುರ: ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಸರ್ಜರಿ ವಿಭಾಗದ ಸಹಪ್ರಾಧ್ಯಾಪಕ ಮತ್ತು ಐಟಿ ವಿಭಾಗದ ಮುಖ್ಯಸ್ಥ ಡಾ. ದೀಪಕಕುಮಾರ ಆರ್. ಚವ್ಹಾಣ ಅವರ ಹೊಸ ಅನ್ವೇಷಣೆಗೆ ಭಾರತ ಸರಕಾರ ಸರ್ಟಿಫಿಕೇಟ್ ಆಪ್ ರೆಜಿಸ್ಟ್ರೇಷನ್ ಆಫ್ ಡಿಸೈನ್ ನೀಡಿದೆ. ಈ ಮೂಲಕ ಡಾ. ದೀಪಕಕುಮಾರ ಚವ್ಹಾಣ ಎರಡನೇ ಬಾರಿಗೆ ಭಾರತ ಸರಕಾರದ ಪೇಟೆಂಟ್ ಪಡೆದ ಹೆಮ್ಮೆಗೆ ಪಾತ್ರರಾಗಿದ್ದಾರೆ. ಅವರು ಮಂಡಿಸಿದ ಕಾರ್ಡಲೆಸ್ ಮೊಬೈಲ್ ಕ್ರಿಟಿಕಲ್ ಕೇರ್ ಮಾನಿಟರಿಂಗ್ ಇಂಟರಆಕ್ಟಿವ್ ಡಿವೈಸ್(Cordless mobile critical care monitoring interactive device) ಸಂಶೋಧನೆಗೆ […]