ವಿಜಯಪುರ: ನಗರದ ದರ್ಗಾದಲ್ಲಿರುವ ಎಂ. ಎಂ. ತೆಲಗಿ ಸರಕಾರಿ ಕನ್ನಡ ಹೆಣ್ಣು ಮಕ್ಕಳ ಶಾಲೆ ಸಂಖ. 12ರ ನೂತನ ಎಸ್.ಡಿ.ಎಂ.ಸಿ(ಶಾಲಾ ಅಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿ) ರಚನೆ ಮಾಡಲಾಗಿದ್ದು, ನೂತನ ಅಧ್ಯಕ್ಷರಾಗಿ ಸುನೀಲ ಕೃಷ್ಣಪ್ಪ ಭೋರಗಿ ಮತ್ತು ಉಪಾಧ್ಯಕ್ಷರಾಗಿ ಮಲ್ಲಿಕಾರ್ಜುನ ಗಂಗನಗೌಡ ಬಿರಾದಾರ ಅವರನ್ನು ಆಯ್ಕೆ ಮಾಡಲಾಗಿದೆ.
ಇನ್ನಿತರ 16 ಜನ ಸದಸ್ಯರನ್ನು ಈ ಸಮಿತಿ ಹೊಂದಿದ್ದು, ಇದರಲ್ಲಿ ತಲಾ ಎಂಟು ಜನ ಪುರುಷ ಮತ್ತು ಮಹಿಳಾ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ಈ ಸಮಿತಿ ಮೊದಲ ಸಭೆ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಭೀಮ ಸರಕಾರ ಜಿಲ್ಲಾ ಸಂಚಾಲಕ ಪರುಶುರಾಮ ಮುತ್ತಪ್ಪ ಚಲವಾದಿ, ಶಾಲಾ ಅಭಿವೃದ್ಧಿಗಾಗಿ ಎಲ್ಲರೂ ಶ್ರಮಿಸಬೇಕು. ಶಾಲೆಗೆ ಮಕ್ಕಳ ಹಾಜರಾತಿ ಕಡಿಮೆಯಾಗಬಾರದು. ಶಾಲಾ ಮಕ್ಕಳ ಸಂಖ್ಯೆ ಹೆಚ್ಚಿಸಬೇಕು. ಶಾಲೆಗೆ ಬೇಕಾದ ಅಗತ್ಯಗಳನ್ನು ಪೂರೈಸಿಕೊಳ್ಳಬೇಕು. ಶಾಲೆಯಲ್ಲಿ ಸ್ವಚ್ಛತೆ ಕಾಪಾಡುವುದು ಮತ್ತು ಸುರಕ್ಷತೆ ಒದಗಿಸುವವದು ಎಲ್ಲ ಪದಾಧಿಕಾರಿಗಳ ಜವಾಬ್ದಾರಿಯಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸೋಮು ರಣದೇವಿ, ಭೀಮ ಸರಕಾರ ಜಿಲ್ಲಾ ಉಪಾಧ್ಯಕ್ಷ ಅಜಯ ಭೋರಗಿ, ಜಿಲ್ಲಾ ಕಾರ್ಯದರ್ಶಿ ಷಣ್ಮುಖ ಢವಳೇಶ್ವರ, ಜಿಲ್ಲಾ ಖಜಾಂಚಿ, ಸುಖದೇವ ಅರ್ಜುನ ಚಲವಾದಿ, ನಗರಾಧ್ಯಕ್ಷ ಶಿವುಕುಮಾರ ಮೊರೆ, ಅನೀಲ ಕೃಷ್ಣಪ್ಪ ಬೋರಗಿ, ಡಿ. ವಿ. ಕುಲಕರ್ಣಿ ಮತ್ತು ಎಂ. ಡಿ. ಪೂಜಾರಿ, ಪಿ. ಎಸ್. ಬೀಳಗಿಕರ, ದರ್ಗಾ ಗ್ರಾಮದ ಹಿರಿಯರು ಮತ್ತು ಯುವಕರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಎಸ್. ಡಿ. ಎಂ. ಸಿ. ನೂತನ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು.
ಸಮಿತಿ ಕಾರ್ಯದರ್ಶಿಗಳು ಮತ್ತು ಮುಖ್ಯ ಶಿಕ್ಷಕಿ ಎಂ. ಎಂ. ತೆಲಗಿ ಸ್ವಾಗತಿಸಿದರು. ಬಿ. ಎಸ್. ಶಿವೂರು ವಂದಿಸಿದರು.