ಡಾ. ದೀಪಕಕುಮಾರ ಆರ್. ಚವ್ಹಾಣ ಸಂಶೋಧನೆಗೆ ಭಾರತ ಸರಕಾರದಿಂದ 2ನೇ ಬಾರಿ ಮಾನ್ಯತೆ- ಬಿ.ಎಲ್.ಡಿ.ಇ ಡೀಮ್ಡ್ ವಿವಿಗೆ ಮತ್ತೋಂದು ಗರಿ

ವಿಜಯಪುರ: ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಸರ್ಜರಿ ವಿಭಾಗದ ಸಹಪ್ರಾಧ್ಯಾಪಕ ಮತ್ತು ಐಟಿ ವಿಭಾಗದ ಮುಖ್ಯಸ್ಥ ಡಾ. ದೀಪಕಕುಮಾರ ಆರ್. ಚವ್ಹಾಣ ಅವರ ಹೊಸ ಅನ್ವೇಷಣೆಗೆ ಭಾರತ ಸರಕಾರ ಸರ್ಟಿಫಿಕೇಟ್ ಆಪ್ ರೆಜಿಸ್ಟ್ರೇಷನ್ ಆಫ್ ಡಿಸೈನ್ ನೀಡಿದೆ.  ಈ ಮೂಲಕ ಡಾ. ದೀಪಕಕುಮಾರ ಚವ್ಹಾಣ ಎರಡನೇ ಬಾರಿಗೆ ಭಾರತ ಸರಕಾರದ ಪೇಟೆಂಟ್ ಪಡೆದ ಹೆಮ್ಮೆಗೆ ಪಾತ್ರರಾಗಿದ್ದಾರೆ.

ಅವರು ಮಂಡಿಸಿದ ಕಾರ್ಡಲೆಸ್ ಮೊಬೈಲ್ ಕ್ರಿಟಿಕಲ್ ಕೇರ್ ಮಾನಿಟರಿಂಗ್ ಇಂಟರಆಕ್ಟಿವ್ ಡಿವೈಸ್(Cordless mobile critical care monitoring interactive device) ಸಂಶೋಧನೆಗೆ ಸರ್ಟಿಫಿಕೇಟ್ ಆಪ್ ರೆಜಿಸ್ಟ್ರೇಷನ್ ಆಫ್ ಡಿಸೈನ್ ಲಭಿಸಿದೆ.

 

ಡಾ. ದೀಪಕಕುಮಾರ ಆರ್. ಚವ್ಹಾಣ

ಈ ಮೊದಲು ಡಾ. ದೀಪಕಕುಮಾರ ಚವ್ಹಾಣ ಮತ್ತು ಡಾ. ಅನೀಲ ಕುಮಾರ ರೆಡ್ಡಿ ಅವರು ಕಳೆದ ಬಾರಿ ಸಂಶೋಧಿಸಿದ ಡಿಜಿಟಲ್ ಎನಾಟೊಮೇಝ್ ಲರ್ನಿಂಗ್ ಟೇಬಲ್(Digital Learning Table) ಗೂ ಭಾರತ ಸರಕಾರ ಸರ್ಟಿಫಿಕೇಟ್ ಆಪ್ ರೆಜಿಸ್ಟ್ರೇಷನ್ ಆಫ್ ಡಿಸೈನ್

ಘೋಷಣೆ ಮಾಡಿತ್ತು.  ಈಗ ಅವರಿಗೆ ಸತತ ಎರಡನೇ ಬಾರಿಗೆ ಪೇಟೆಂಟ್ ಸಿಕ್ಕಿರುವುದು ಗಮನಾರ್ಹವಾಗಿದೆ.

ಡಾ. ದೀಪಕಕುಮಾರ ಆರ್. ಚವ್ಹಾಣ ಅವರಿಗೆ ಸಿಕ್ಕಿರುವ 2ನೇ ಪೇಟೆಂಟ್
ಡಾ. ದೀಪಕಕುಮಾರ ಆರ್. ಚವ್ಹಾಣ ಅವರಿಗೆ ಸಿಕ್ಕಿರುವ 1ನೇ ಪೇಟೆಂಟ್

ಡಾ. ದೀಪಕಕುಮಾರ ಆರ್. ಚವ್ಹಾಣ ಅವರಿಗೆ ಸರ್ಟಿಫಿಕೇಟ್ ಆಪ್ ರೆಜಿಸ್ಟ್ರೇಷನ್ ಆಫ್ ಡಿಸೈನ್ ಲಭಿಸಿರುವುದಕ್ಕೆ ಸಂಸ್ಥೆಯ ಅಧ್ಯಕ್ಷ ಮತ್ತು ಸಚಿವ ಎಂ. ಬಿ. ಪಾಟೀಲ ಸಂತಸ ವ್ಯಕ್ತಪಡಿಸಿದ್ದು, ಅಭಿನಂದನೆ ಸಲ್ಲಿಸಿದ್ದಾರೆ.  ಅಲ್ಲದೇ, ಸಂಶೋಧನೆಗಳು ನಿರಂತರವಾಗಿರಲಿ ಎಂದು ಶುಭ ಕೋರಿದ್ದಾರೆ.

ಇದನ್ನೂ ಓದಿ:

ಬಿ.ಎಲ್.ಡಿ.ಇ ಡೀಮ್ಡ್ ವಿವಿ ರಜಿಸ್ಟ್ರಾರ್ ಡಾ. ರಾಘವೇಂದ್ರ ಕುಲಕರ್ಣಿ ನೇತೃತ್ವದ ವಿಜ್ಞಾನಿಗಳ ಸಂಶೋಧನೆಗೆ ಭಾರತ ಸರಕಾರದಿಂದ ಪೇಟೆಂಟ್ ಘೋಷಣೆ

ಡಾ. ರಾಘವೇಂದ್ರ ಕುಲಕರ್ಣಿ ಅವರಿಗೂ ಪೇಟೆಂಟ್ ಸಿಕ್ಕಿತ್ತು

ಒಂದೆರಡು ದಿನಗಳ ಹಿಂದೆ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ರಜಿಸ್ಟ್ರಾರ್ ಡಾ. ರಾಘವೇಂದ್ರ ಕುಲಕರ್ಣಿ ಮತ್ತು ಅವರ ತಂಡಕ್ಕೆ ಭಾರತ ಸರಕಾರದಿಂದ ಪೇಟೆಂಟ್ ಮಾನ್ಯತೆ ಸಿಕ್ಕಿತ್ತು.  ಇದೀಗ ಇದೇ ವಿಶ್ವವಿದ್ಯಾಲಯದ ಮತ್ತೋರ್ವ ವೈದ್ಯರಿಗೆ ಸರ್ಟಿಫಿಕೇಟ್ ಆಪ್ ರೆಜಿಸ್ಟ್ರೇಷನ್ ಆಫ್ ಡಿಸೈನ್ ಸಿಕ್ಕಿರುವುದು ವಿವಿಯ ಇಮ್ಮಡಿ ಸಂತೋಷಕ್ಕೆ ಕಾರಣವಾಗಿದೆ.

Leave a Reply

ಹೊಸ ಪೋಸ್ಟ್‌