ಜು. 29, 30 ರಂದು 10ನೇ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನ- ಡಾ. ಅರ್ಜುನ ಗೊಳಸಂಗಿ

ವಿಜಯಪುರ: ಪ್ರಬುದ್ಧ ಭಾರತದ ಆಶಯದೊಂದಿಗೆ ವಿಜಯಪುರ ನಗರದ ಕಂದಗಲ ಹನುಮಂತರಾಯ ರಂಗಮAದಿರದಲ್ಲಿ ಜುಲೈ 29 ಮತ್ತು 30 ರಂದು 10ನೇ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನ ನಡೆಯಲಿದೆ ಎಂದು ದಲಿತ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಡಾ. ಅರ್ಜುನ ಗೊಳಸಂಗಿಯವರು ಹೇಳಿದರು. ಅವರು ನಗರದ ಕರ್ನಾಟಕ ರಾಜ್ಯ ಸರಕಾರಿ ನೌಕರರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಸಮ್ಮೇಳನದ ಆಮಂತ್ರಣ ಪತ್ರಿಕೆ ಹಾಗೂ ಬೆಳ್ಳಿ ಸಂಭ್ರಮದ ವಿಶೇಷವಾಗಿ ಮೂಡಿ ಬರುತ್ತಿರುವ ಪ್ರೊ. ಎಚ್. ಟಿ. ಪೋತೆ ಅವರ ಜನಪ್ರಿಯ ನಾಟಕ ರಮಾಯಿ […]

ಅನುದಾನಿತ-ಅನುದಾನ ರಹಿತ ಕಾಲೇಜ್ ಪ್ರಾಚಾರ್ಯರ ಸಭೆ: ಶಿಕ್ಷಕ ಮಿತ್ರ ತಂತ್ರಾಂಶದ ಸದುಪಯೋಗ ಪಡೆದುಕೊಳ್ಳಲು ಡಾ. ಹೊಸಮನಿ ಕರೆ

ವಿಜಯಪುರ: ಪ್ರಥಮ ಮತ್ತು ದ್ವೀತಿಯ ಪಿಯುಸಿಯಲ್ಲಿ ಪ್ರಾಯೋಗಿಕ ಪರೀಕ್ಷೆ ಹೊಂದಿಲ್ಲದ ವಿಷಯಗಳಲ್ಲಿ 20 ಆಂತರಿಕ ಅಂಕಗಳ ಪರೀಕ್ಷೆ ಹಾಗೂ ಇಎಲ್‍ಸಿ ಚಟುವಟಿಕೆಗಳನ್ನು ಅನುಷ್ಠಾನಗೊಳಿಸಲು ಶಿಕ್ಷಕ ಮಿತ್ರ ತಂತ್ರಾಂಶವನ್ನು ಅಭಿವೃದ್ದಿಪಡಿಸಲಾಗಿದ್ದು, ಇದರ ಸದುಪಯೋಗ ಪಡೆದುಕೊಳ್ಳುವಂತೆ ಪದವಿಪೂರ್ವ ಹಾಗೂ ವೃತ್ತಿ ಶಿಕ್ಷಣ ಇಲಾಖೆ ಉಪನಿರ್ದೇಶಕ ಡಾ. ಚಂದ್ರಶೇಖರ ಕೆ. ಹೊಸಮನಿ ಕರೆ ನೀಡಿದ್ದಾರೆ.  ನಗರದ ಬಾಗಲಕೊಟೆ ರಸ್ತೆಯ ಪಿಡಿಜೆ ಪದವಿ ಪೂರ್ವ ಕಾಲೇಜ್‍ನಲ್ಲಿ ನಡೆದ ಬಬಲೇಶ್ವರ ಹಾಗೂ ತಿಕೋಟಾ ತಾಲೂಕಿನ ಅನುದಾನಿತ ಹಾಗೂ ಅನುದಾನ ರಹಿತ ಪದವಿ ಪೂರ್ವ ಕಾಲೇಜುಗಳ […]

ಲಾಲ್ ಬಹಾದ್ದೂರ್ ಶಾಸ್ತ್ರಿ ಸಾಗರದ ಬಳಿ ಕಣಕಪ್ಲಿಗಳ ಕಲರವ- ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿವೆ ಪಕ್ಷಿಗಳು

ವಿಜಯಪುರ: ಒಂದು ಕಾಲದಲ್ಲಿ ಬರದ ನಾಡು ಎಂದು ಅಪಖ್ಯಾತಿ ಪಡೆದಿದ್ದ ಬಸವನಾಡು ಈಗ ಹಸಿರು ನಾಡಾಗುವತ್ತ ಸಾಗುತ್ತಿದೆ.  ಆಲಮಟ್ಟಿ ಜಲಾಷಯ ನಿರ್ಮಾಣ ಮತ್ತು ಈ ಜಲಾಷಯದಿಂದ ಜಿಲ್ಲೆಯಲ್ಲಿ ಕೈಗೊಳ್ಳಲಾಗಿರುವ ನೀರಾವರಿ ಯೋಜನೆಗಳು ಭೂತಾಯಿಗೆ ನೀರುಣಿಸುತ್ತಿದ್ದು, ವಾತಾವರಣ ಹಸಿರಿನತ್ತ ಸಾಗುವಂತೆಯೂ ಮಾಡಿದೆ. ಇದಕ್ಕೆ ಮತ್ತೋಂದು ಉದಾಹರಣೆ ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಆಲಮಟ್ಟಿ ಪ್ರವಾಸಿಗರನ್ನು ಸೆಳೆಯುತ್ತಿರುವ ಮಾನವ ನಿರ್ಮಿತ ಅರಣ್ಯ ಪ್ರದೇಶ.  ಇಲ್ಲಿನ ಹೆಲಿಪ್ಯಾಡ್ ಪಕ್ಕದಲ್ಲಿದ್ದ ಖಾಲಿ ಜಮೀನಿನಲ್ಲಿ ಈಗ ಹುಲುಸಾಗಿ ಅರಣ್ಯ ಪ್ರದೇಶ ಬೆಳೆದಿದೆ.  ನೋಡಲು ಇದು […]