ಫ್ಲೋರ್‌ ಕ್ಲೀನರ್‌ ಕುಡಿದು ಅನ್ನನಾಳವನ್ನೇ ಕಳೆದುಕೊಂಡಿದ್ದ 6 ವರ್ಷದ ಮಗುವಿಗೆ ಯಶಸ್ವಿಯಾಗಿ ಅನ್ನನಾಳ ಮರುನಿರ್ಮಾಣ ಮಾಡಿದ ವೈದ್ಯರು

ಬೆಂಗಳೂರು: ಆಕಸ್ಮಿಕವಾಗಿ ಫ್ಲೋರ್‌ ಕ್ಲೀನರ್‌ ಲಿಕ್ವಿಡ್‌ ಕುಡಿದು ಅನ್ನನಾಳವೇ ಸಂಪೂರ್ಣವಾಗಿ ಸುಟ್ಟುಹೋಗಿದ್ದ ೬ ವರ್ಷದ ಬಾಲಕಿಗೆ ಫೋರ್ಟಿಸ್‌ ಆಸ್ಪತ್ರೆ ವೈದ್ಯರು ಯಶಸ್ವಿಯಾಗಿ ಸಂಕೀರ್ಣ ಶಸ್ತ್ರಚಿಕಿತ್ಸೆ ಮೂಲಕ ಅನ್ನನಾಳವನ್ನು ಪುನರ್‌ ನಿರ್ಮಾಣ ಮಾಡಿದ್ದಾರೆ. ಫೋರ್ಟಿಸ್‌ ಆಸ್ಪತ್ರೆಯ ಚೀಫ್ ಸರ್ಜಿಕಲ್ ಗ್ಯಾಸ್ಟ್ರೋಎಂಟರಾಲಜಿಸ್ಟ್ ಡಾ. ಮನೀಶ್ ಜೋಶಿ ಅವರ ತಂಡ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ಈ ಕುರಿತು ಮಾತನಾಡಿದ ಅವರು, 6 ವರ್ಷದ ಪುಟ್ಟ ಬಾಲಕಿಯು ಮನೆಯಲ್ಲಿ ಆಟವಾಡುವ ಸಂದರ್ಭದಲ್ಲಿ ಅಲ್ಲಿಯೇ ಇದ್ದ ಫ್ಲೋರ್‌ ಕ್ಲೀನರ್‌ನಲ್ಲಿ ಆಕಸ್ಮಿಕವಾಗಿ ಸೇವಿಸಿದೆ. ಇದರಿಂದ ಮಗುವಿನ […]

ಕಾಲುವೆಗಳಿಗೆ ನೀರು- ನೀರಾವರಿ ಸಲಹಾ ಸಮಿತಿ ರಚಿಸಿ- ಸಮಿತಿ ಸಭೆ ಕರೆಯಿರಿ- ಶಾಸಕ ಯಶವಂತರಾಯಗೌಡ ಪಾಟೀಲರಿಂದ ಡಿಕೆಶಿಗೆ ಪತ್ರ

ವಿಜಯಪುರ: ಮುಂಗಾರು ಬಹಳ ತಡವಾಗಿರುವುದರಿಂದ ಬಸವನಾಡು ವಿಜಯಪುರ ಜಿಲ್ಲೆಯಲ್ಲಿ ಕುಡಿಯುವ ನೀರಿಗೂ ತೊಂದರೆಯಾಗಿದ್ದು, ರೈತರ ಜಮೀನಿಗೂ ನೀರು ಸಿಗದಂತಾಗಿದೆ.  ಈ ಹಿನ್ನೆಲೆಯಲ್ಲಿ ಇಂಡಿ ಕಾಂಗ್ರೆಸ್ ಶಾಸಕ ಯಶವಂತರಾಯಗೌಡ ವಿ. ಪಾಟೀಲ ಡಿಸಿಎಂ ಮತ್ತು ಜಲಸಂಪನ್ಮೂಲ ಸಚಿವ ಡಿ. ಕೆ. ಶಿವಕುಮಾರ ಅವರಿಗೆ ಕೃಷ್ಣಾ ಮೇಲ್ದಂಡೆ ಯೋಜನೆ ನೀರಾವರಿ ಸಲಹಾ ಸಮಿತಿ(ICC) ರಚಿಸುವಂತೆ ಮತ್ತು ನೀರಾವರಿ ಸಲಹಾ ಸಮಿತಿ ಸಭೆ ಕರೆಯುವಂತೆ ಪತ್ರ ಬರೆದಿದ್ದಾರೆ. ಶಾಸಕರು ಬರೆದಿರುವ ಪತ್ರದ ಪ್ರತಿ ಬಸವನಾಡು ವೆಬ್ ಗೆ ಲಭ್ಯವಾಗಿದೆ. ಕೃಷ್ಣಾ ಮೇಲ್ದಂಡೆ […]

ಸರಕಾರ ಬೀಳಿಸುವುದು ಹಗಲು ಕನಸು- ಬೆಂಗಳೂರು ಗ್ರಾಮೀಣ ಭಾಗಕ್ಕೆ ಮುಂಬೈ, ಕೊಲ್ಕೊತ್ತಾ ಮಾದರಿಯಲ್ಲಿ ರೇಲ್ವೆ ಸೇವೆಗೆ ಯೋಜನೆ- ಎಂ ಬಿ ಪಾಟೀಲ

ವಿಜಯಪುರ: ಸರಕಾರ ಪತನ ಹಗಲು ಕನಸು.  ನಾವೆಲ್ಲ 136 ಜನ ಒಗ್ಗಟ್ಟಿನಿಂದ ಇದ್ದೇವೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಹೇಳಿದ್ದಾರೆ. ವಿಜಯಪುರ ಜಿಲ್ಲೆಯ ಕನ್ನೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಜ್ಯ ಸರಕಾರ ಕೆಡವಲು ಸಿಂಗಾಪುರದಲ್ಲಿ ಷಡ್ಯಂತ್ರ ನಡೆಯುತ್ತಿದೆ ಎಂದು ಡಿಸಿಎಂ ಡಿ. ಕೆ. ಶಿವಕುಮಾರ ನೀಡಿರುವ ಹೇಳಿಕೆಯ ಕುರಿತು ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದರು. ನಾವು 136 ಶಾಸಕರು […]

ಬಸವನಾಡಿನಲ್ಲಿ ಲಘು ಭೂಕಂಪನ- ಎಲ್ಲಿ? ಎಷ್ಟು ತೀವ್ರತೆ ಗೊತ್ತಾ?

ವಿಜಯಪುರ: ಬಸವನಾಡು ವಿಜಯಪುರ ಜಿಲ್ಲೆಯಲ್ಲಿ ಬೆಳಿಗ್ಗೆ ಲಘು ಭೂಕಂಪನ ಉಂಟಾಗಿದೆ. ಬಸವನ ಬಾಗೇವಾಡಿ ತಾಲೂಕಿನ ಮನಗೂಳಿ ಸುತ್ತಮುತ್ತ ಬೆಳಿಗ್ಗೆ 9.55ರ ಸುಮಾರಿಗೆ ಭೂಮಿ ಕಂಪಿಸಿದ ಅನುಭವವಾಗಿದ್ದು, ಮನೆಯಲ್ಲಿದ್ದ ಜನ ಹೊರಗಡೆ ಓಡಿ ಬಂದಿದ್ದಾರೆ.  ಮನಗೂಳಿ ಪಟ್ಟಣದ ಆಗ್ನೆಯ ಭಾಗದಲ್ಲಿ 2.90 ಕಿ. ಮೀ. ದೂರದಲ್ಲಿ ಭೂಕಂಪನದ ಕೇಂದ್ರಬಿಂದು ಪತ್ತೆಯಾಗಿದೆ. ಭೂಮಿಯ ಕೆಳಗಡೆ ಸುಮಾರು 5 ಕಿ. ಮೀ. ಆಳದಲ್ಲಿ ಈ ಭೂಕಂಪನ ಉಂಟಾಗಿದ್ದು, ರಿಕ್ಚರ್ ಮಾಪಕದಲ್ಲಿ 2.4 ತೀವ್ರತೆ ದಾಖಲಾಗಿದೆ ಎಂದು ಜಿಲ್ಲಾಧಿಕಾರಿ ಟಿ. ಭೂಬಾಲನ ಮಾಹಿತಿ […]

ಬೆಂಗಳೂರಿನಿಂದ ಕಾಶಿ ವಿಶ್ವನಾಥ ಸನ್ನಿಧಿಗೆ 50 ಜನರ ಪಾದಯಾತ್ರೆ- ಬಸವನಾಡಿನಲ್ಲಿ ಭಕ್ತರಿಗೆ ಬಸವ ನಾಡಿನಲ್ಲಿ ಆತಿಥ್ಯ ನೀಡಿದ ಶಿವಭಕ್ತರು

ವಿಜಯಪುರ: ಲೋಕಕಲ್ಯಾಣಕ್ಕಾಗಿ ಬೆಂಗಳೂರಿನ ಯಲಹಂಕ ಉಪನಗರದ ಗುರುಗಳಾದ ಶ್ರೀ ಡಿ. ಚಿಕ್ಕೀರಪ್ಪನವರ ನೇತೃತ್ವದಲ್ಲಿ 50 ಜನ ಪಾದಯಾತ್ರೆ ನಡೆಸುತ್ತಿದ್ದು, ಈ ತಂಡ ಬಸವನಾಡು ವಿಜಯಪುರಕ್ಕೆ ಆಗಮಿಸಿದೆ.  ಯಲಹಂಕದ ಶ್ರೀ ಶಿರಡಿ ಸಾಯಿಬಾಬಾ ಮಂದಿರದಿಂದ ಪರಮ ಪವಿತ್ರ ಕಾಶಿ ಕ್ಷೇತ್ರಕ್ಕೆ ಜುಲೈ 8 ಶನಿವಾರದಿಂದ ಪಾದಯಾತ್ರೆ ಆರಂಭವಾಗಿದ್ದು, ಕಾಶಿ ವಿಶ್ವನಾಥ ಮಂದಿರಕ್ಕೆ ಸುಮಾರು 80 ದಿನಗಳ ಪಾದಯಾತ್ರೆ ಕೈಗೊಂಡಿದ್ದಾರೆ.  ಡಿ. ಚಿಕ್ಕಿರಪ್ಪ ಅವರ ನೇತೃತ್ವದಲ್ಲಿ ಸರಿ ಸುಮಾರು 50 ಕ್ಕೂ ಹೆಚ್ಚು ಪಾದಯಾತ್ರೆಯನ್ನು ನಡೆಸುತ್ತಿದ್ದು, ವಿಜಯಪುರಕ್ಕೆ ಆಗಮಿಸಿದಾಗ ಅವರಿಗೆ […]