ಬಸವನಾಡಿನಲ್ಲಿ ಲಘು ಭೂಕಂಪನ- ಎಲ್ಲಿ? ಎಷ್ಟು ತೀವ್ರತೆ ಗೊತ್ತಾ?

ವಿಜಯಪುರ: ಬಸವನಾಡು ವಿಜಯಪುರ ಜಿಲ್ಲೆಯಲ್ಲಿ ಬೆಳಿಗ್ಗೆ ಲಘು ಭೂಕಂಪನ ಉಂಟಾಗಿದೆ.

ಬಸವನ ಬಾಗೇವಾಡಿ ತಾಲೂಕಿನ ಮನಗೂಳಿ ಸುತ್ತಮುತ್ತ ಬೆಳಿಗ್ಗೆ 9.55ರ ಸುಮಾರಿಗೆ ಭೂಮಿ ಕಂಪಿಸಿದ ಅನುಭವವಾಗಿದ್ದು, ಮನೆಯಲ್ಲಿದ್ದ ಜನ ಹೊರಗಡೆ ಓಡಿ ಬಂದಿದ್ದಾರೆ.  ಮನಗೂಳಿ ಪಟ್ಟಣದ ಆಗ್ನೆಯ ಭಾಗದಲ್ಲಿ 2.90 ಕಿ. ಮೀ. ದೂರದಲ್ಲಿ ಭೂಕಂಪನದ ಕೇಂದ್ರಬಿಂದು ಪತ್ತೆಯಾಗಿದೆ.

ಭೂಮಿಯ ಕೆಳಗಡೆ ಸುಮಾರು 5 ಕಿ. ಮೀ. ಆಳದಲ್ಲಿ ಈ ಭೂಕಂಪನ ಉಂಟಾಗಿದ್ದು, ರಿಕ್ಚರ್ ಮಾಪಕದಲ್ಲಿ 2.4 ತೀವ್ರತೆ ದಾಖಲಾಗಿದೆ ಎಂದು ಜಿಲ್ಲಾಧಿಕಾರಿ ಟಿ. ಭೂಬಾಲನ ಮಾಹಿತಿ ನೀಡಿದ್ದಾರೆ.

 

Leave a Reply

ಹೊಸ ಪೋಸ್ಟ್‌