ಆಲಮೇಲ ತಾಲೂಕಿನ ನಾನಾ ಕಾಮಗಾರಿಗಳ ಪರಿಶೀಲನೆ ನಡೆಸಿದ ಸಿಇಓ ರಾಹುಲ ಶಿಂಧೆ

ವಿಜಯಪುರ: ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ರಾಹುಲ್ ಶಿಂಧೆ ಅವರು ಆಲಮೇಲ ತಾಲೂಕಿನಾದ್ಯಂತ ನಾನಾ ಸ್ಥಳಗಳಿಗೆ ಭೇಟಿ ಅಭಿವೃದ್ಧಿ ಕಾಮಗಾರಿಗಳ ನೀಡಿ ಪರಿಶೀಲನೆ ನಡೆಸಿದರು.

ಆಲಮೇಲ ತಾಲೂಕಿನ ಕೊರಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮದರಿ ಗ್ರಾಮದಲ್ಲಿ ನಿರ್ಮಾಣವಾದ ಅಂಗವಾಡಿ ಕೇಂದ್ರಕ್ಕೆ ಭೇಟಿ ನೀಡಿ, ಪಿಓಪಿ ಸೇರಿದಂತೆ ಬಾಕಿಯಿರುವ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸಬೇಕು ಹಾಗೂ ಅಂಗನವಾಡಿ ಮುಂದೆ ಖಾಲಿಯಿರುವ ಸ್ಥಳದಲ್ಲಿ ಆಟದ ಮೈದಾನ, ಜಾರು ಬಂಡೆಯಂತಹ ಮಕ್ಕಳಿಗೆ ಅನುಕೂಲಕರವಾದ ಆಟಿಗೆಗಳನ್ನು ಅಳವಡಿಸಿ,ಸಸಿಗಳನ್ನು ನೆಟ್ಟು ಮಕ್ಕಳ ಸ್ನೇಹಿ ಅಂಗನವಾಡಿಯನ್ನಾಗಿಸಲು ಕ್ರಮ ಕೈಗೊಳ್ಳುವಂತೆ ಸ್ಥಳದಲ್ಲಿದ್ದ ಪಿ ಆರ್‍ ಇ ಡಿ ಅಭಿಯಂತರ ಜಿ. ವೈ. ಮುರಾಳ ಅವರಿಗೆ ಸೂಚನೆ ನೀಡಿದರು.

ವಿಜಯಪುರ ಜಿ. ಪಂ. ಸಿಇಓ ರಾಹುಲ‌ ಶಿಂಧೆ ಆಲಮೇ‌ಲ ತಾಲೂಕಿನ ನಾಬಾ ಗ್ರಾಮಗಳಿಗೆ ಭೇಟಿ ನೀಡಿ ಅಭಿವೃದ್ಧಿ ಕಾಮಗಾರಿ ಪರಿಶೀಲನೆ ನಡೆಸಿದರು

ಗ್ರಾಮದಲ್ಲಿರುವ ಅರೋಗ್ಯ ಉಪ ಕೇಂದ್ರಕ್ಕೆ ಭೇಟಿ ನೀಡಿ, ಸಿಬ್ಬಂದಿಗಳ ಹಾಜರಾತಿಯನ್ನು ಪರಿಶೀಲನೆ ನಡೆಸಿದರು. ಸಿಬ್ಬಂದಿಗಳು ಸರಿಯಾಗಿ ಕರ್ತವ್ಯಕ್ಕೆ ಹಾಜರಾಗುವಂತೆ ಸೂಕ್ತ ಕ್ರಮ ಕೈಗೊಳ್ಳಲು ತಾಲೂಕು ಆರೋಗ್ಯ ಅಧಿಕಾರಿಗಳಿಗೆ ಸೂಚನೆ ನೀಡಿದರು. ನೂತನವಾಗಿ ನಿರ್ಮಿಸಲಾದ ಸಿಂದಗಿ- ಗಣಿಹಾರ ಡಾಂಬರ್ ರಸ್ತೆಯ ಅಳತೆ ಮತ್ತು ಗುಣಮಟ್ಟ ಪರಿಶೀಲಿನೆ ನಡೆಸಿ, ಗ್ರಾಮೀಣ ಭಾಗದಲ್ಲಿ ಜನರಿಗೆ ಅನುಕೂಲವಾಗುವಂತೆ ಉತ್ತಮ ಗುಣ್ಣಮಟ್ಟದ ರಸ್ತೆಗಳನ್ನು ನಿರ್ಮಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಆಲಮೇಲ ಪಟ್ಟಣದಲ್ಲಿರುವ ಸಮುದಾಯ ಅರೋಗ್ಯ ಕೇಂದ್ರ, ರಕ್ತ ತಪಾಸಣಾ ಕೇಂದ್ರ, ಆರ್‍ ಎನ್‍ ಟಿ ಸಿ ಪಿ, ನೇತ್ರ ಪರೀಕ್ಷೆ ಕೇಂದ್ರಗಳಿಗೆ ಭೇಟಿ ನೀಡಿ, ಆರೋಗ್ಯ ಕೇಂದ್ರದಲ್ಲಿ ದೊರೆಯುವ ನಾನಾ ಸೌಲಭ್ಯಗಳ ಕುರಿತು ವೈಧ್ಯರಿಂದ ಮಾಹಿತಿ ಪಡೆದರು. ನಂತರ ಸಿಬ್ಬಂದಿಗಳ ಹಾಜರಾತಿ ಪರಿಶೀಲಿಸಿ ಮಂಜೂರಾದ ಹುದ್ದೆಗಳ ಎದುರಾಗಿ ಖಾಲಿಯಿರುವ ಹುದ್ದೆಗಳ ಮಾಹಿತಿ ಪಡೆದ ರಾಹುಲ ಶಿಂಧೆ, ಆಸ್ಪತ್ರೆಗೆ ಬರುವವರೊಂದಿಗೆ ಸೌಜನ್ಯಯುತವಾಗಿ ವರ್ತಿಸುವಂತೆ ಸೂಚನೆ ನೀಡಿದರು. ನಂತರ ಸೊನ್ನ ಬ್ಯಾರೆಜ್ ಗೆ ಭೇಟಿ ನೀಡಿ,ನೀರಿನ ಸಂಗ್ರಹ ಮಟ್ಟ ಪರಿಶೀಲನೆ ನಡೆಸಿದರು.

ಈ ಸಂದರ್ಭದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಈರಣ್ಣ ಆಶಾಪುರ, ಕಾರ್ಯ ನಿರ್ವಹಣಾಧಿಕಾರಿ ಬಾಬು ರಾಠೋಡ, ಗ್ರಾಮೀಣ ಕುಡಿಯುವ ನೀರು ಇಲಾಖೆಯ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರ ಎಸ್. ಆರ್.‌ ಸ್ವಾಮಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಬಸವರಾಜ ಜಿಗಳೂರ, ಜಿಲ್ಲಾ ಪಂಚಾಯಿತಿಯ ಅರುಣಕುಮಾರ ದಳವಾಯಿ, ಪೃಥ್ವಿರಾಜ್ ಪಾಟೀಲ, ತಾಲೂಕು ಪಂಚಾಯಿತಿಯ ಸಹಾಯಕ ನಿರ್ದೇಶಕ ನಿತ್ಯಾನಂದ ಯಲಗೋಡ, ಪಿಡಿಓಗಳು, ನರೇಗಾ ತಾಂತ್ರಿಕ ಮತ್ತು ತಾಂತ್ರಿಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌