ರಾಷ್ಟ್ರೀಯ ಶಿಕ್ಷಣ ನೀತಿಗೆ 3ನೇ ವರ್ಷದ ಸಂಭ್ರಮ: ಎನ್ಇಪಿ ಪರಿಣಾಮಕಾರಿಯಾಗಿ ಅನುಷ್ಠಾನವಾಗಿದೆ- ಗುಲ್ನಾದ್ ಕೌರ್
ವಿಜಯಪುರ: ಕೇಂದ್ರ ಸರಕಾರದ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಕಳೆದ ಮೂರು ವರ್ಷಗಳಲ್ಲಿ ಪರಿಣಾಮಕಾರಿ ಅನುಷ್ಠಾನ ಮಾಡಲಾಗಿದೆ ಎಂದು ವಿಜಯಪುರ ಕೇಂದ್ರೀಯ ವಿದ್ಯಾಲಯದ ಕಾರ್ಯ ನಿರ್ವಾಹಕ ಪ್ರಾಂಶುಪಾಲ ಗುಲ್ನಾಜ್ ಕೌರ್ ಹೇಳಿದ್ದಾರೆ. ನಗರದ ಅಫಜಲಪೂರ ಟಕ್ಕೆಯಲ್ಲಿರುವ ಕೇಂದ್ರೀಯ ವಿದ್ಯಾಲಯದ ಸಭಾಂಗಣದಲ್ಲಿ ಕೇಂದ್ರ ಸರಕಾರ 2020 ರಲ್ಲಿ ಜಾರಿಗೊಳಿಸಿದ ಎನ್‌ಇಪಿ 3ನೇ ವರ್ಷಾಚರಣೆ ಅಂಗವಾಗಿ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಮೂರು ವರ್ಷಗಳ ಹಿಂದೆ ಕೇಂದ್ರ ಸರಕಾರ ಪರಿಚಯಿಸಿದ ರಾಷ್ಟ್ರೀಯ ಶಿಕ್ಷಣ ನೀತಿಯು ನಮ್ಮ ರಾಷ್ಟ್ರದ ಪರಿಣಾಮಕಾರಿಯಾದ ಶೈಕ್ಷಣಿಕ ಗುರಿ […]
ಮತದಾನದ ಹಕ್ಕು ನಮ್ಮನ್ನು ಉಳಿಸುತ್ತದೆ- ನಿಮ್ಮ ರಕ್ಷಣೆ ಮಾಡುವವರಿಗೆ ಮತಹಾಕಿ- ಎಚ್. ಟಿ. ಪೋತೆ
ವಿಜಯಪುರ: ಮತದಾನದ ಹಕ್ಕು ನಮ್ಮನ್ನು ಉಳಿಸುತ್ತದೆ. ನಿಮ್ಮ ರಕ್ಷಣೆ ಮಾಡುವವರಿಗೆ ಮತಹಾಕಿ ಎಂದು 10ನೇ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನಾಧ್ಯಕ್ಷ ಎಚ್. ಟಿ. ಪೋತೆ ಹೇಳಿದರು. ನಗರದಲ್ಲಿ ಗದುಗಿನ ದಲಿತ ಸಾಹಿತ್ಯ ಪರಿಷತ್ತಿನ ಬೆಳ್ಳಿ ಹಬ್ಬದ ಸಂಭ್ರಮ ಮತ್ತು 10ನೇ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು ನಿಮ್ಮನ್ನು ರಕ್ಷಿಸುವ ವ್ಯಕ್ತಿಗೆ ಮತ ನೀಡಬೇಕು. ನಮ್ಮ ಹಕ್ಕನ್ನು ರಕ್ಷಣೆ ಮಾಡುವ, ದೇಶ, ಮಹಿಳೆ, ಪ್ರತಿಯೊಬ್ಬರನ್ನು ರಕ್ಷಣೆ ಮಾಡುವವರು, ನಿಮ್ಮ ಹಕ್ಕನ್ನು […]
ಬಣಜಿಗ ಸಮುದಾಯ ರಾಜ್ಯ ಮಟ್ಟದ ವಧು-ವರರ ಸಮಾವೇಶ, ನಾನಾ ಸಾಧಕರಿಗೆ ಸನ್ಮಾನ ಕಾರ್ಯಕ್ರಮ
ವಿಜಯಪುರ: ನಗರದ ಆಶ್ರಮ ರಸ್ತೆಯಲ್ಲಿರುವ ಸಾಯಿ ವಿಹಾರದ ಸಭಾಭವನದಲ್ಲಿ ಬಣಜಿಗ ಮುದಾಯದ ರಾಜ್ಯ ಮಟ್ಟದ ವಧು-ವರ ಸಮಾವೇಶ ಮತ್ತು ನಾನಾ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ಮಾತನಾಡಿ, ಈ ಮುಂಚೆ ಸಮಾಜದ ಹಿರಿಯರು ಬಿಡುವ ಮಾಡಿಕೊಂಡು ಒಬ್ಬರಿಗೊಬ್ಬರು ಚರ್ಚಿಸಿ ಶುಭ ಕಾರ್ಯಗಳನ್ನು ಮಾಡುತ್ತಿದ್ದರು. ಈಗ ವಧು- ವರರ ಕಾರ್ಯಕ್ರಮ ಮಾಡುವ ಮೂಲಕ ಸಂಬಂಧ ಗಟ್ಟಿಗೊಳಿಸಲು ಸಹಕಾರಿಯಾಗುತ್ತಿದೆ ಎಂದು ಹೇಳಿದರು. ಬುರುಣಾಪುರದ ಯೋಗೇಶ್ವರಿ ಮಾತಾಜಿ, ವಧು- ವರರ […]
ಸಿಎಂ ಸಿದ್ಧರಾಮಯ್ಯಗೆ ಕ್ಯಾರಿಕೇಚರ್ ಕಾಣಿಕೆ ನೀಡಿದ ವಸವನಾಎಇನ ವ್ಯಂಗ್ಯಚಿತ್ರಕಾರ ಶರಣು ಚಟ್ಟಿ
ಬೆಂಗಳೂರು: ನಗರದ ಪ್ರೇಸ್ ಕ್ಲಬ್ ನಲ್ಲಿ ನಡೆದ ಪತ್ರಕರ್ತರ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಬಸವನಾಡು ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಗೋಲಗೇರಿಯ ವ್ಯಂಗ್ಯ ಚಿತ್ರಕಾರ ಶರಣು ಚೆಟ್ಟಿ ಕ್ಯಾರಿಯೇಚರ್ ಕಾಣಿಕೆ ನೀಡಿದ್ದಾರೆ. ಗೊಲಗೇರಿಯಸರಕಾರಿ ಕನ್ನಡ ಹೆಣ್ಣು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ, ಸಾಹಿತಿ ವ್ಯಂಗ್ಯಚಿತ್ರಕಾರ ಶರಣು ಚಟ್ಟಿ ಅವರಯ ತಾವು ರಚಿಸಿರುವ ಮುಖ್ಯಮಂತ್ರಿಗಳ ವ್ಯಂಗ್ಯಭಾವಚಿತ್ರ ಮತ್ತು ತುಂಟ ಮಕ್ಕಳು ಪುಸ್ತಕವನ್ನು ಕಾಣಿಕೆಯಾಗಿ ನೀಡಿದರು. ಅವರ ಕಲಾಕೃತಿ ವೀಕ್ಷಿಸಿದ ಮುಖ್ಯಮಂತ್ರಿಗಳು ಶರಣು ಚಟ್ಟಿ ಅವರ […]