ಸಿಎಂ ಸಿದ್ಧರಾಮಯ್ಯಗೆ ಕ್ಯಾರಿಕೇಚರ್ ಕಾಣಿಕೆ ನೀಡಿದ ವಸವನಾಎಇನ ವ್ಯಂಗ್ಯಚಿತ್ರಕಾರ ಶರಣು ಚಟ್ಟಿ

ಬೆಂಗಳೂರು: ನಗರದ ಪ್ರೇಸ್ ಕ್ಲಬ್ ನಲ್ಲಿ ನಡೆದ ಪತ್ರಕರ್ತರ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಬಸವನಾಡು ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಗೋಲಗೇರಿಯ ವ್ಯಂಗ್ಯ ಚಿತ್ರಕಾರ ಶರಣು ಚೆಟ್ಟಿ ಕ್ಯಾರಿಯೇಚರ್ ಕಾಣಿಕೆ ನೀಡಿದ್ದಾರೆ.

ಗೊಲಗೇರಿಯಸರಕಾರಿ ಕನ್ನಡ ಹೆಣ್ಣು‌ ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ, ಸಾಹಿತಿ ವ್ಯಂಗ್ಯಚಿತ್ರಕಾರ ಶರಣು ಚಟ್ಟಿ ಅವರಯ ತಾವು ರಚಿಸಿರುವ ಮುಖ್ಯಮಂತ್ರಿಗಳ ವ್ಯಂಗ್ಯಭಾವಚಿತ್ರ ಮತ್ತು ತುಂಟ ಮಕ್ಕಳು ಪುಸ್ತಕವನ್ನು ಕಾಣಿಕೆಯಾಗಿ ನೀಡಿದರು.

ಸಿಎಂಗೆ ಶರಣು ಚಟ್ಟಿ ವ್ಯಂಗ್ಯಚಿತ್ರವನ್ನು ಕಾಣಿಕೆಯಾಗಿ ನೀಡಿದರು

ಅವರ ಕಲಾಕೃತಿ ವೀಕ್ಷಿಸಿದ ಮುಖ್ಯಮಂತ್ರಿಗಳು ಶರಣು ಚಟ್ಟಿ ಅವರ ವ್ಯಂಗ್ಯಚಿತ್ರಕಲೆ ಹಾಗೂ ಮಕ್ಕಳ ಸಾಹಿತ್ಯದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ. ವಿ. ಪ್ರಭಾಕರ, ಜೇವರ್ಗಿ ಶಾಸಕ ಅಜಯಕುಮಾರ ಸಿಂಗ್, ಸುವರ್ಣ ನ್ಯೂಸ್ ಮತ್ತು ಕನ್ನಡಪ್ರಭ ಪತ್ರಿಕೆಯ ಸಂಪಾದಕ ರವಿ ಹೆಗಡೆ, ವಾರ್ತಾ ಇಲಾಖೆಯ ಆಯುಕ್ತ ಡಾ. ಹೇಮಂತ ನಿಂಬಾಳ್ಕರ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರ, ಪ್ರೆಸ್ ಕ್ಲಬ್ ಅಧ್ಯಕ್ಷ ಆರ್. ಶ್ರೀಧರ, ಸಿಂದಗಿ ಪುರಸಭೆ ಸದಸ್ಯ ಬಸವರಾಜ ಸಜ್ಜನ, ಜಲಮಂಡಳಿಯ ಪ್ರಭುಗೌಡ ಬಿರಾದಾರ, ಶಾಂತಿನಿಕೇತನ ಶಾಲೆಯ ಸಂಸ್ಥಾಪಕ ಅಧ್ಯಕ್ಷ ನಿಂಗಣ್ಣ ಕಾರಗೊಂಡ, ಅರಣ್ಯಾಧಿಕಾರಿ ನಿಂಗಪ್ಪ ಕರ್ನಾಳ, ಗ್ರಾಮ ಆಡಳಿತಾಧಿಕಾರಿ ವಿನೋದ ಕರ್ನಾಳ, ಆರಕ್ಷಕ ದೇವಿಂದ್ರ ಬಿರಾದಾರ ಮುಂತಾದವರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌