ಮತದಾನದ ಹಕ್ಕು ನಮ್ಮನ್ನು ಉಳಿಸುತ್ತದೆ- ನಿಮ್ಮ ರಕ್ಷಣೆ ಮಾಡುವವರಿಗೆ ಮತಹಾಕಿ- ಎಚ್. ಟಿ. ಪೋತೆ

ವಿಜಯಪುರ: ಮತದಾನದ ಹಕ್ಕು ನಮ್ಮನ್ನು ಉಳಿಸುತ್ತದೆ.  ನಿಮ್ಮ ರಕ್ಷಣೆ ಮಾಡುವವರಿಗೆ ಮತಹಾಕಿ ಎಂದು 10ನೇ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನಾಧ್ಯಕ್ಷ ಎಚ್. ಟಿ. ಪೋತೆ ಹೇಳಿದರು. 

ನಗರದಲ್ಲಿ ಗದುಗಿನ ದಲಿತ ಸಾಹಿತ್ಯ ಪರಿಷತ್ತಿನ ಬೆಳ್ಳಿ ಹಬ್ಬದ ಸಂಭ್ರಮ ಮತ್ತು 10ನೇ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು

ನಿಮ್ಮನ್ನು ರಕ್ಷಿಸುವ ವ್ಯಕ್ತಿಗೆ ಮತ ನೀಡಬೇಕು.  ನಮ್ಮ ಹಕ್ಕನ್ನು ರಕ್ಷಣೆ ಮಾಡುವ, ದೇಶ, ಮಹಿಳೆ, ಪ್ರತಿಯೊಬ್ಬರನ್ನು ರಕ್ಷಣೆ ಮಾಡುವವರು, ನಿಮ್ಮ ಹಕ್ಕನ್ನು ನ್ಯಾಯಯುತವಾಗಿ ಬಳಸಿಕೊಳ್ಳಬೇಕು.  ಮಾರಿ ಕೊಳ್ಳಬೇಡಿ.  ಕ್ರಿಯಾಶೀಲ ನಿರ್ದೇಶಕ ಸುನೀಲಕುಮಾರ ಸುಧಾಕರ ಅವರಿಂದ ಅಂಬೇಡ್ಕರ ಅವರ ಪಾತ್ರವನ್ನು ಮಾಡಿಸಿ ನನಗೆ ನನ್ನ ಜೀವನವನ್ನು ಸಾರ್ಥಕ ಮಾಡಿದ್ದಾರೆ ಎಂದು ಅವರು ನೀಡಿದರು.

ಪರಿಷತ್ತಿನ ಅಧ್ಯಕ್ಷ ಡಾ. ಅರ್ಜುನ ಗೊಳಸಂಗಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭದಲ್ಲಿ ನಾಡಿನ ನಾನಾ ಕ್ಷೇತ್ರದ ಸಾಧಕರಾದ ಇಮಾಮ್ ಬಿ. ನಧಾಪ, ಸುನೀಲ ಭಾಸ್ಸ್ಕರ, ಡಾ. ಸಂಗಪ್ಪ ಹೊಸಮನಿ, ಆಳಂದ ಅಪ್ಪಾಸಾಹೇಬ ಹೋಳಿನ್, ಡಾ. ಜಗನ್ನಾಥ ಸಿಂಧೆ, ಡಾ. ತ್ರೀವೇಣಿ ಬನಸೋಡೆ, ಸುರೇಶ ಘೋಣಸಗಿ, ಸೋಮಶೇಕರ ಬುಳ್ಳಾ, ಬೀದರ, ಡಾ. ವಿಶ್ವನಾಥ ಜಾಲವಾದಿ, ಶೋಭಾ ನಾಯಕ, ಡಾ. ಶ್ರೀಧರ, ಗೌಡಪ್ಪ ಗೂಡೂರು, ತಿಪ್ಪೇಸ್ವಾಮಿ, ಡಾ. ಸೀತಿಮಾ ವಜ್ಜಲ, ಅರ್ಜುನ ನಿಡಗುಂದಿ, ಸಿದ್ದಣ್ಣ ಉತ್ನಾಳ, ಬಾಬು ತಡಲಗಿ, ವಿನೋದ ರಾಠೋಡ, ಸುನೀಲಕುಮಾರ ಸುಧಾಕರ, ಅಜಯಕುಮಾರ ಡಿ., ಶಿವಾನಂದ ಕಟ್ಟಿಮನಿ ರಾಜು ಗೊರೂರು, ಎನ್. ಸಿ. ಕಟ್ಟಿಮನಿ, ಡಾ. ರಂಗಸ್ವಾಮಿ ಕಾಳಿಹುಂಡಿ, ಕೆ. ಜಿ. ಲಮಾಣಿ, ಎಸ್. ಪಿ. ಸುಳ್ಳದ, ಡಾ. ಶರಣಪ್ಪ ಮಾಳಗಿ, ಡಾ. ಹನಮಂತ ಜಂಗೆ, ಶ್ರೀರಾಮುಲು, ಡಾ. ಪರಶುರಾಮ ಪಿ, ಹನುಮಂತ ಭಜಂತ್ರಿ, ಚಿದಾನಂದ ಕುಡ್ಡಣ, ಸುಮಾ ತಡವಾಲ, ರಾಚಪ್ಪಾಜಿ, ಕರಿದಾಸರಹಳ್ಳಿ ನರಸಪ್ಪ ಬರದೂರ, ಲಿಂಗರಾಜ ಗಂಗಾವತಿ, ಬಸವರಾಜ ಕೊನೇಕ ಡಾ. ಕಲ್ಲಪ್ಪ, ಡಾ. ಅಂಬಾದಾಸ ಕಾಂಬಳೆ, ಡಾ. ಸಂತೋಷ ಕಂಬಾರ, ಶ್ರೀಮತಿ ಚೇತನ ಎಂ. ಎಸ್., ಡಾ. ಜಯಶೀಲ ಎಸ್‌., ಡಾ. ಪದ್ಮಮ್ಮ, ರಮೇಶ ಬಗಲಿ ಹುಬ್ಬಳ್ಳಿ, ಶಿವರಾಜ ಮೇತ್ರೆ , ಡಾ. ಜಕ್ಕವ್ವ ವಠಾರ, ಅನ್ನಪೂರ್ಣ ಬೆಳೆನವರ, ಶಿವಶಂಕರ ಹಡಪದ ಈಶ್ವರ ಇಂಗನ್, ಚಕ್ರವರ್ತಿ  ಕೆ. ಧಾಮಣ್ಣವರ, ಶಶಿಕುಮಾರ ಕಾಂಬಳೆ, ಬಿ. ಶ್ರೀನಿವಾಸ ಹಾವೇರಿ, ಡಾ. ಚಂದ್ರಕಿರಣ ಚಿಕ್ಕಮಗಳೂರು, ಸಂಜಯಗಾಂಧಿ ಸಂಜೀವಣ್ಣವರ ಹಾವೇರಿ, ಅಜೀತ್ ಎನ್‌. ಬೀದರ, ಬಸಣ್ಣ ಸಿಂಧೆ, ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಬೌದ್ಧ ಮಹಾ ವಿವಾರದ ವರಜ್ಯೋತಿ ಭಂತೇಜಿ ನೇತೃತ್ವ ವಹಿಸಿದ್ದರು.  ಈ ಕಾರ್ಯಕ್ರಮದಲ್ಲಿ ಸಕ್ಪಾಲ್ ಹೂವಣ್ಣ,ಸಿದ್ದು ರಾಯಣ್ಣವರ, ಅಶೋಕ ಚಲವಾದಿ ಬಿ ಎಚ್ ನಾಡಗೇರಿ, ಯಮುನಪ್ಪ ಗುಣಕಿ ದಸಾಪ ರಾಜ್ಯ ಘಟಕದ ಪದಾಧಿಕಾರಿಗಳಾದ ಎಚ್ ಬಿ ಕೋಲ್ಕಾರ, ಸುಭಾಷ ಹೋದ್ಲೂರ, ಡಾ ವೈ ಎಂ ಭಜಂತ್ರಿ, ಸಂಯೋಜಕ ಬಸವರಾಜ ಜಾಲವಾದಿ, ಪ್ರಧಾನ ಸಂಯೋಜಕ ಶ್ರೀನಾಥ ಪೂಜಾರಿ, ಸಹ ಸಂಯೋಜಕ ಉಮೇಶ ಶಿವಶರಣ,ತಾಲೂಕು ಅಧ್ಯಕ್ಷೆ ಪೂರ್ಣಿಮಾ ದಾಮಣ್ಣವರ, ನಾನಾ ವಿಭಾಗೀಯ ಸಂಚಾಲಕರಾದ ಡಾ ಸುಜಾತಾ ಚಲವಾದಿ, ಡಾ ಗಾಂಧೀಜಿ ಮೊಳಕೇರಿ, ಡಾ ಚಂದ್ರಗುಪ್ತ, ಗಣಪತಿ ಚಲವಾದಿ ಮುಂತಾದವರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌