ವಿಜಯಪುರ: ವಿಜಯಪುರ ಉಪವಿಭಾಗದ ನೂತನ ಡಿವೈಎಸ್ಪಿಯಾಗಿ ಬಸವರಾಜ ಯಲಿಗಾರ ಅವರನ್ನು ಸರಕಾರ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.
ಬಸವರಾಜ ಯಲಿಗಾರ ಈಗ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಉಪವಿಭಾಗದ ಡಿವೈಎಸ್ಪಿಯಾಗಿ ಕೆಲಸ ಮಾಡುತ್ತಿದ್ದು, ಈಗ ಅವರನ್ನು ವಿಜಯಪುರ ಉಪವಿಭಾಗಕ್ಕೆ ವರ್ಗಾವಣೆ ಮಾಡಲಾಗಿದೆ.
ಈ ಮುಂಚೆ ಕೂಡ ಬಸವರಾಜ ಯಲಿಗಾರ ವಿಜಯಪುರ ಜಿಲ್ಲೆಯಲ್ಲಿ ಪಿ.ಎಸ್.ಐ, ಸಿಪಿಐ ಆಗಿ ಕೆಲಸ ಮಾಡಿದ್ದಾರೆ. ಮೂಲತಃ ಧಾರವಾಡ ಜಿಲ್ಲೆಯವರಾಗಿರುವ ಬಸವರಾಜ ಯಲಿಗಾರ ವಿಜಯಪುರ ಜಿಲ್ಲೆಯ ಅಳಿಯರಾಗಿರುವುದೂ ಗಮನಾರ್ಹವಾಗಿದೆ.
ವಿಜಯಪುರ ಉಪವಿಭಾಗದ ಹಾಲಿ ಡಿವೈಎಸ್ಪಿ ಸಿದ್ಧೇಶ್ವರ ಅವರ ಜಾಗಕ್ಕೆ ಬಸವರಾಜ ಯಲಿಗಾರ ಅವರನ್ನು ಸರಕಾರ ವರ್ಗಾವಣೆ ಮಾಡಿದ್ದು, ಸಿದ್ಧೇಶ್ವರ ಅವರಿಗೆ ಯಾವುದೇ ಸ್ಥಾನವನ್ನು ತೋರಿಸಿಲ್ಲ.
ಬಸವರಾಜ ಯಲಿಗಾರ ಬಹುಷಃ ಗುರುವಾರ ಅಥವಾ ಶುಕ್ರವಾರ ಅಧಿಕಾರ ಸ್ವೀಕರಿಸುವ ನಿರೀಕ್ಷೆಯಿದೆ.