ರಾಜ್ಯ ಮಟ್ಟದ ಅಬ್ಯಾಕಸ್, ವೇದಿಕ ಗಣಿತ ಸ್ಪರ್ಥೆಯಲ್ಲಿ ಬಸವನಾಡಿನ ವಿದ್ಯಾರ್ಥಿಗಳ ಸಾಧನೆ
ವಿಜಯಪುರ: ಮಹಾರಾಷ್ಟ್ರದ ಸೋಲಾಪೂರದ ಶ್ರದ್ಧಾ ಸಂಸ್ಥೆಯ ವತಿಯಿಂದ ಆಯೋಜಿಸಲಾಗಿದ್ದ ರಾಜ್ಯ ಮಟ್ಟದ ಅಬ್ಯಾಕಸ್ ಮತ್ತು ವೇದಿಕ್ ಗಣಿತ ಸ್ಪರ್ಧೆಯಲ್ಲಿ ವಿಜಯಪುರ ನಗರದ ಕನಕದಾಸ ಬಡಾವಣೆಯಲ್ಲಿರುವ ಸಿದ್ಧೇಶ್ವರ ಕೋಚಿಂಗ್ ಕ್ಲಾಸ್ ನ ವಿದ್ಯಾರ್ಥಿನಿ ಸ್ಪಂದನಾ ಬಸನಗೌಡ ಬಿರಾದಾರ ರಾಜ್ಯಕ್ಕೆ ಪ್ರಥಮ ಸ್ಥಾನವನ್ನು ಪಡೆದು ಗಮನ ಸೆಳೆದಿದ್ದಾರೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿಯನ್ನು ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷ ಸುರೇಶ ಜತ್ತಿ, ದೇವರು ಪ್ರತಿಯೊಬ್ಬ ಮಗುವಿನಲ್ಲಿ ವಿಶೇಷ ಸಾಮರ್ಥ್ಯ ಕೊಟ್ಟಿರುತ್ತಾನೆ. ಅದನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸವನ್ನು ಶಿಕ್ಷಕರು […]
ಭೂತನಾಳ ಕೆರೆಗೆ ಕೃಷ್ಣಾ ನೀರು- ಕುಡಿಯುವ ನೀರಿನ ಬಗ್ಗೆ ಆತಂಕ ಬೇಡ- ಶಾಸಕ ಬಸನಗೌಡ ಪಾಟೀಲ ಯತ್ನಾಳ
ವಿಜಯಪುರ:ನಗರದ ಹೊರ ವಲಯದಲ್ಲಿರುವ ಭೂತನಾಳ ಕೆರೆಗೆ ಕೃಷ್ಣಾ ನದಿಯಿಂದ ನೀರು ತುಂಬಿಸಲಾಗುತ್ತಿದ್ದು, ಶೀಘ್ರದಲ್ಲಿ ಕೆರೆ ಸಂಪೂರ್ಣವಾಗಿ ಭರ್ತಿಯಾಗಲಿದೆ. ಇದರಿಂದ ವಿಜಯಪುರ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಯಲಿದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ತಿಳಿಸಿದ್ದಾರೆ. ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು, ಮಹಾನಗರ ಪಾಲಿಕೆ ವ್ಯಾಪ್ತಿಗೆ ಒಳಪಟ್ಟಿರುವ ಐತಿಹಾಸಿಕ ಭೂತನಾಳ ಕೆರೆಯಿಂದ ವಿಜಯಪುರ ನಗರದ ಉತ್ತರ ಮತ್ತು ಪಶ್ಚಿಮ ಭಾಗದ 10 ವಾರ್ಡುಗಳಿಗೆ ಕುಡಿಯುವ ನೀರು ಸರಬರಾಜು ಮಾಡಲಾಗುತ್ತದೆ. ಈ ವರ್ಷ ಹೆಚ್ಚಿನ ಪ್ರಮಾಣದಲ್ಲಿ […]
ದೇಹದಲ್ಲಿ ಎರಡು ಅಂಡವಾಯು ಹೊಂದಿದ್ದ 76 ವರ್ಷದ ಮಹಿಳೆಗೆ ದೇಶದಲ್ಲೇ ಮೊದಲ ಬಾರಿಗೆ ಯಶಸ್ವಿ ಶಸ್ತ್ರಚಿಕಿತ್ಸೆ
ಬೆಂಗಳೂರು: 76 ವರ್ಷದ ಮಹಿಳೆಯ ಮೂತ್ರಕೋಶ, ಯೋನಿ ಹಾಗೂ ಗುದದ್ವಾರದಲ್ಲಿ ಬೆಳೆದುಕೊಂಡಿದಿದ್ದ ಎರಡು ರೀತಿಯ ಪ್ಯಾರಾಸ್ಟೊಮಲ್ ಮತ್ತು ಪೆರಿನಿಯಲ್ ಹರ್ನಿಯಾವನ್ನು ಲ್ಯಾಪರೋಸ್ಕೋಪಿಕ್ ಮೂಲಕ ಯಶಸ್ವಿಯಾಗಿ ಸಂಕೀರ್ಣ ಶಸ್ತ್ರಚಿಕಿತ್ಸೆಯನ್ನು ಫೋರ್ಟಿಸ್ ಆಸ್ಪತ್ರೆ ವೈದ್ಯರು ನಡೆಸಿದ್ದು, ಎರಡು ಹರ್ನಿಯಾಗೆ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದ್ದು ದೇಶದಲ್ಲೇ ಮೊದಲು. ಈ ಕುರಿತು ಮಾತನಾಡಿದ ಮಿನಿಮಲ್ ಆಕ್ಸೆಸ್ ಮತ್ತು ಬಾರಿಯಾಟ್ರಿಕ್ ಸರ್ಜರಿ ಹೆಚ್ಚುವರಿ ನಿರ್ದೇಶಕ ಡಾ. ಗಣೇಶ್ ಶೆಣೈ, 76 ವರ್ಷದ ಮಹಿಳೆಯಲ್ಲಿ ಆರು ವರ್ಷಗಳ ಹಿಂದೆಯೇ ಪ್ಯಾರಾಸ್ಟೊಮಲ್ ಮತ್ತು ಪೆರಿನಿಯಲ್ ಹರ್ನಿಯಾ (ಅಂಡವಾಯು)ವು […]
ಅಂಗದಾನದ ಮಹತ್ವದ ಕುರಿತು ಜನಜಾಗೃತಿ ಮೂಡಿಸಲು ಸಾಮಾಜಿಕ ಚಳವಳಿ ಅಗತ್ಯ- ಡಾ. ಎಸ್. ಬಿ. ಪಾಟೀಲ
ವಿಜಯಪುರ: ಅಂಗಾಂಗ ದಾನದ ಮಹತ್ವದ ಕುರಿತು ಜನಜಾಗೃತಿಗೆ ಸಾಮಾಜಿಕ ಚಳವಳಿ ಅಗತ್ಯವಾಗಿದೆ ಎಂದು ಬಿ. ಎಲ್. ಡಿ. ಇ ಡೀಮ್ಡ್ ವಿಶ್ವವಿದ್ಯಾಲಯದ ಶ್ರೀ ಬಿ. ಎಂ. ಪಾಟೀಲ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆಯ ಯುರಾಲಜಿ ವಿಭಾಗದ ಮುಖ್ಯಸ್ಥ ಡಾ. ಎಸ್. ಬಿ. ಪಾಟೀಲ ಹೇಳಿದ್ದಾರೆ. ನಗರದಲ್ಲಿರುವ ವಿವಿಯಲ್ಲಿ ಕುಲಪತಿ ಡಾ. ಆರ್. ಎಸ್. ಮುಧೋಳ, ಪ್ರಾಚಾರ್ಯ ಡಾ. ಅರವಿಂದ ಪಾಟೀಲ ಜೊತೆ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ದೇಶದಲ್ಲಿ ಪ್ರತಿ ವರ್ಷ ಜುಲೈ ತಿಂಗಳನ್ನು ಅಂಗದಾನ ಮಹೋತ್ಸವ […]