ಅಕ್ಕಮಹಾದೇವಿ ಮಹಿಳಾ ವಿವಿ ನೂತನ ರಜಿಸ್ಟ್ರಾರ್ ಆಗಿ ಶಂಕರಗೌಡ ಎಸ್. ಸೋಮನಾಳ ಅಧಿಕಾರ ಸ್ವೀಕಾರ
ವಿಜಯಪುರ: ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ನೂತನ ಕುಲಸಚಿವರಾಗಿ ಶಂಕರಗೌಡ ಎಸ್. ಸೋಮನಾಳ ಅಧಿಕಾರ ಸ್ವೀಕರಿಸಿದ್ದಾರೆ. ಹಾಲಿ ಕುಲಸಚಿವರಾಗಿದ್ದ ಪ್ರೊ. ಬಿ. ಎಸ್. ನಾವಿ ಅವರು ನೂತನ ಕುಲಸಚಿವರಾಗಿ ನೇಮಕವಾಗಿರುವ ಶಂಕರಗೌಡ ಎಸ್. ಸೋಮನಾಳ ಅವರಿಗೆ ಅಧಿಕಾರ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಕುಲಪತಿ ಪ್ರೊ. ಬಿ. ಕೆ. ತುಳಸಿಮಾಲ, ಉಪಕುಲಸಚಿವ ಡಾ. ಯು. ಕೆ. ಕುಲಕರ್ಣಿ, ಡಾ. ದೀಪಕ ಶಿಂದೆ, ಸಹಾಯಕ ಕುಲಸಚಿವ ಡಾ. ಪ್ರಕಾಶ ಬಡಿಗೇರ, ಡಾ. ಜಾಯ್ ಹೊಸಕೇರಿ, ಡಾ. ಸವಿತಾ ಹುಲಮನಿ […]
ರೂ. 10 ಸೇರಿದಂತೆ ಎಲ್ಲಾ ನಾಣ್ಯಗಳನ್ನು ಕಾನೂನು ಬದ್ಧವಾಗಿ ಸ್ವೀಕರಿಸಿ: ಡಿಸಿ ಟಿ. ಭೂಬಾಲನ್ ಸೂಚನೆ
ವಿಜಯಪುರ: ಭಾರತೀಯ ರಿಸರ್ವ್ ಬ್ಯಾಂಕಿನಿಂದ ಚಲಾವಣೆಯಾಗಿರುವ ಎಲ್ಲಾ ನಾಣ್ಯಗಳನ್ನು ಕಾನೂನು ಬದ್ಧವಾಗಿ ಸ್ವೀಕರಿಸಬೇಕು. ರೂ. 10 ನಾಣ್ಯಗಳನ್ನು ಸ್ವೀಕರಿಸದಿರುವುದು ನಾಣ್ಯ ಕಾಯ್ದೆ 2011ರ ಸೆಕ್ಷನ್ 6(1)ರ ಉಲ್ಲಂಘನೆಯಾಗುವುದರಿಂದ ಎಲ್ಲ ನಾಣ್ಯಗಳನ್ನು ಕಾನೂನಾತ್ಮಕವಾಗಿ ಸ್ವೀಕರಿಸಬೇಕು ಎಂದು ಜಿಲ್ಲಾಧಿಕಾರಿ ಟಿ. ಭೂಬಾಲನ್ ಸೂಚನೆ ನೀಡಿದ್ದಾರೆ. ಭಾರತೀಯ ರಿಸರ್ವ್ ಬ್ಯಾಂಕ್ ಕಾಲಕಾಲಕ್ಕೆ ವಿಶಿಷ್ಟ ಲಕ್ಷಣಗಳುಳ್ಳ ನಾಣ್ಯಗಳನ್ನು ಬಿಡುಗಡೆ ಮಾಡುತ್ತದೆ. ನಾಣ್ಯಗಳ ಅಸಲಿತನ ಬಗ್ಗೆ ಶಂಕೆ ವ್ಯಕ್ತಪಡಿಸಿ, ವ್ಯಾಪಾರಸ್ಥರು, ಅಂಗಡಿಯವರು ಮತ್ತು ಸಾರ್ವಜನಿಕರ ಮನಸ್ಸಿನಲ್ಲಿ ಶಂಕೆ ಬಿತ್ತಿರುತ್ತಾರೆ. ಇದರಿಂದ ದೇಶದ ಕೆಲವು ನಿರ್ದಿಷ್ಟ ಭಾಗಗಳಲ್ಲಿ […]
ವೃದ್ಧ ದಂಪತಿಯ ಮನವಿಗೆ ಒಂದೇ ಗಂಟೆಯಲ್ಲಿ ಸ್ಪಂದನೆ- ಡಿಸಿ ಟಿ. ಭೂಬಾಲನ ಮಾಡಿದ ಕೆಲಸ ಇತರರಿಗೆ ಮಾದರಿ
ವಿಜಯಪುರ: ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರ ಮುಂದೆ ಅಳಲು ತೋಡಿಕೊಂಡು ಬಂದ ಬಡ ವೃದ್ಧ ದಂಪತಿಗಳಿಗೆ ಒಂದು ಗಂಟೆಯೊಳಗೆ ವೃದ್ಧಾಪ್ಯ ವೇತನ ಮಂಜೂರು ಮಾಡುವ ಮೂಲಕ ಇತರ ಅಧಿಕಾರಿಗಳಿಗೆ ಮಾದರಿಯಾಗಿದ್ದಾರೆ. ವಿಜಯಪುರ ನಗರದ ಗ್ಯಾಂಗಬಾವಡಿಯ ನಿವಾಸಿಗಳಾದ ಸೂರ್ಯಕಾಂತ ರಾಮದುರ್ಗಕರ ಮತ್ತು ಸುರೇಖಾ ರಾಮದುರ್ಗ ಕಡು ಬಡವ ವೃದ್ಧ ದಂಪತಿಯಾಗಿದ್ದು, ನಗರದ ಜಿಲ್ಲಾಧಿಕಾರಿಗಳ ಕಚೇರಿಗೆ ಆಗಮಿಸಿದ್ದರು. ತಮ್ಮ ಜೀವನೋಪಾಯಕ್ಕೆ ಆಸರೆ ಒದಗಿಸಲು ಮನವಿ ಮಾಡಿಕೊಂಡಿದ್ದರು. ಜಿಲ್ಲಾಧಿಕಾರಿಗಳು ಅವರ ದೂರನ್ನು ಶಾಂತಚಿತ್ತದಿಂದ ಅಲಿಸಿ, ಸ್ಥಳದಲ್ಲಿಯೇ ವೃದ್ದ ದಂಪತಿಗಳಿಗೆ ಪಿಂಚಣಿ ಮಂಜೂರು ಮಾಡಿ ಕೊಡುವ […]
ದೇಶದಲ್ಲಿಯೇ ಮೊದಲು- ಸುಮಾರು 600 ಜನ ವೈದ್ಯರು, ವೈದ್ಯಕೀಯ ವಿದ್ಯಾರ್ಥಿಗಳಿಗೆ ಮನೆಮನೆಗೆ ತೆರಳಿ ಜನಜಾಗೃತಿ- ಅಂಗದಾನದ ಮಹತ್ವ ತಿಳಿಸಿಡುವ ವಿನೂತನ ಪ್ರಯತ್ನ
ವಿಜಯಪುರ: ದೇಶದಲ್ಲಿಯೇ ಇದೇ ಮೊದಲ ಬಾರಿಗೆ ವಿನೂತನ ಕಾರ್ಯಕ್ರಮವೊಂದನ್ನು ಯಶಸ್ವಿಯಾಗಿ ಕೈಗೊಳ್ಳುವ ಮೂಲಕ ಬಸವನಾಡಿನ ಪ್ರತಿಷ್ಠಿತ ಬಿ.ಎಲ್.ಡಿ.ಈ ಡೀಮ್ಡ್ ವಿಶ್ವವಿದ್ಯಾಲಯದ ಸುಮಾರು 600 ಜನ ವೈದ್ಯರು ಮತ್ತು ವೈದ್ಯಕೀಯ ವಿದ್ಯಾರ್ಥಿಗಳು ಜನಮೆಚ್ಚುವ ಕೆಲಸ ಮಾಡಿದ್ದಾರೆ. ಆಗಷ್ಟು 3 ರಾಷ್ಟ್ರೀಯ ಅಂಗದಾನ ದಿನಾಚರಣೆ ನಡೆಯುತ್ತದೆ. ಈ ಕಾರ್ಯಕ್ರಮದ ಮಹತ್ವನ್ನು 25 ಸಾವಿರ ಮನೆಮನೆಗಳಿಗೆ ತೆರಳಿ ಜನಜಾಗೃತಿ ಮಾಡುವ ಮೂಲಕ ಈ ವೈದ್ಯರು ಮತ್ತು ವಿದ್ಯಾರ್ಥಿಗಳು ರಾಷ್ಟ್ರೀಯ ಅಂಗದಾನ ದಿನವನ್ನು ಅರ್ಥಪೂರ್ಣವಾಗಿ ಆಚರಿಸಿ ಗಮನ ಸೆಳೆದಿದ್ದಾರೆ. ಬಿ.ಎಲ್.ಡಿ.ಇ ಡೀಮ್ಡ್ ವಿವಿ […]