ಅಕ್ಕಮಹಾದೇವಿ ಮಹಿಳಾ ವಿವಿ ನೂತನ ರಜಿಸ್ಟ್ರಾರ್ ಆಗಿ ಶಂಕರಗೌಡ ಎಸ್. ಸೋಮನಾಳ ಅಧಿಕಾರ ಸ್ವೀಕಾರ

ವಿಜಯಪುರ: ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ನೂತನ ಕುಲಸಚಿವರಾಗಿ ಶಂಕರಗೌಡ ಎಸ್. ಸೋಮನಾಳ ಅಧಿಕಾರ ಸ್ವೀಕರಿಸಿದ್ದಾರೆ.

ಹಾಲಿ ಕುಲಸಚಿವರಾಗಿದ್ದ ಪ್ರೊ. ಬಿ. ಎಸ್. ನಾವಿ ಅವರು ನೂತನ ಕುಲಸಚಿವರಾಗಿ ನೇಮಕವಾಗಿರುವ ಶಂಕರಗೌಡ ಎಸ್. ಸೋಮನಾಳ ಅವರಿಗೆ ಅಧಿಕಾರ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಕುಲಪತಿ ಪ್ರೊ. ಬಿ. ಕೆ. ತುಳಸಿಮಾಲ, ಉಪಕುಲಸಚಿವ ಡಾ. ಯು. ಕೆ. ಕುಲಕರ್ಣಿ, ಡಾ. ದೀಪಕ ಶಿಂದೆ, ಸಹಾಯಕ ಕುಲಸಚಿವ ಡಾ. ಪ್ರಕಾಶ ಬಡಿಗೇರ, ಡಾ. ಜಾಯ್ ಹೊಸಕೇರಿ, ಡಾ. ಸವಿತಾ ಹುಲಮನಿ ಮುಂತಾದವರು ಉಪಸ್ಥಿತರಿದ್ದರು.

ಮಹಿಳಾ ವಿವಿ ಕುಲಸಚಿವರಾಗುವುದಕ್ಕೂ ಮುಂಚೆ ಶಂಕರಗೌಡ ಎಸ್. ಸೋಮನಾಳ ಅವರು ವಿಜಯಪುರ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾಗಿ ಸೇವೆ ಸಲ್ಲಿಸುತ್ತಿದ್ದರು.

Leave a Reply

ಹೊಸ ಪೋಸ್ಟ್‌