ಬಸವನಾಡಿನ ಪಿಡಿಜೆ ಬ ಶಾಲೆಯ ನೂತನ ಸಂಸತ್ತು ರಚನೆ- ಪ್ರಮಾಣ ವಚನ ಸ್ವೀಕರಿಸಿದ ಶಾಲೆಯ ಮಂತ್ರಿಮಂಡಳದ ಹೊಸ ಪದಾಧಿಕಾರಿಗಳು

ವಿಜಯಪುರ: ಬಸವನಾಡಿನ ಪ್ರತಿಷ್ಠಿತ ಪಿ.ಡಿ.ಜೆ ಬ ಶಾಲೆಯ ನೂತನ ಸಂಸತ್ತಿನ ಹೊಸ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ನಡೆಯಿತು. ಶಾಲೆಯ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಲೆ ಹೊಸ ಮಂತ್ರಿಮಂಡಳದ ಪ್ರವೀಣ ಹಡಪದ, ಪ್ರಧಾನ ಮಂತ್ರಿಯಾಗಿ ಕುಬೇರ ಹೊನ್ನಕಸ್ತೂರಿ, ಉಪಪ್ರಧಾನ ಮಂತ್ರಿ ಆದರ್ಶ ಅಂಗಡಿ, ವಿರೋಧ ಪಕ್ಷದ ನಾಯಕ ಇಮ್ರಾನ್ ನದಾಫ ಮತ್ತು ಸದಸ್ಯರಾಗಿ 44 ಜನ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರು ಪ್ರಮಾಣ ವಚನ ಸ್ವೀಕರಿಸಿದರು. ಇದೇ ಸಂದರ್ಭದಲ್ಲಿ ಈ ಶೈಕ್ಷಣಿಕ ವರ್ಷ ಶಾಲೆಯಲ್ಲಿ ಪ್ರವೇಶ ಪಡೆದ ವಿದ್ಯಾರ್ಥಿ ಮತ್ತು […]

ಡೇ ನಲ್ಮ: ಸಾಲ ಮಂಜೂರಾತಿಗೆ ಕ್ರಮ ವಹಿಸಲು ಜಿಲ್ಲಾಧಿಕಾರಿ ಟಿ. ಭೂಬಾಲನ್ ಅಧಿಕಾರಿಗಳಿಗೆ ಸೂಚನೆ

ವಿಜಯಪುರ: ಡೇ ನಲ್ಮ ಅಭಿಯಾನದ ಪಿಎಂ ಸ್ವ-ನಿಧಿ ಅಡಿ ಬಾಕಿ ಇರುವ ಅರ್ಜಿಗಳ ಸಾಲ ಮಂಜೂರಾತಿಗೆ ಶೀಘ್ರ ಕ್ರಮ ವಹಿಸುವಂತೆ ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳಿಗೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಸೂಚನೆ ನೀಡಿದ್ದಾರೆ.   ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಕೌಶಲ್ಯ ಮಿಷನ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ಸ್ವ ನಿಧಿ ಸಮೃದ್ದಿ ಯೋಜನೆಯಡಿ ಎಂಟು ಸಾಮಾಜಿಕ ಭದ್ರತಾ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ಒದಗಿಸಲು ಕ್ರಮ ವಹಿಸುವಂತೆ ಅವರು ಸೂಚನೆ ನೀಡಿದರು. ಪಿಂಕ್ ಆಟೋ […]

ಸಾಮಾಜಿಕ ಸಮಸ್ಯೆಗಳಿಗೆ ಸ್ಪಂದಿಸುವ ಸಂಶೋಧನೆ ಕೈಗೊಳ್ಳಿ- ಪ್ರೊ. ಬಿ. ಕೆ. ತುಳಸಿಮಾಲ

ವಿಜಯಪುರ: ಸಂಶೋಧನಾ ವಿದ್ಯಾರ್ಥಿನಿಯರು ಸಾಮಾಜಿಕ ಸಮಸ್ಯೆಗಳಿಗೆ ಸ್ಪಂದಿಸುವ ಸಂಶೋಧನೆಯನ್ನು ಕೈಗೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಬಿ. ಕೆ. ತುಳಸಿಮಾಲ ಹೇಳಿದರು. ವಿಜಯಪುರ ಜಿಲ್ಲೆಯ ತೊರವಿಯಲ್ಲಿರುವ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಘಟಕದ ವತಿಯಿಂದ ಆಯೋಜಿಸಲಾದ ಸಂಶೋಧನೆ ವಿದ್ಯಾರ್ಥಿನಿಯರಿಗೆ ಲ್ಯಾಪ್-ಟಾಪ್ ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಲ್ಯಾಪಟಾಪ್‍ಗಳ ಸದುಪಯೋಗವನ್ನು ಸಂಶೋಧನೆಗಷ್ಟೇ ಸೀಮಿತಗೊಳಿಸದೇ ಮಾಹಿತಿ ವಿಶ್ಲೇಷಣೆಗಳನ್ನು ಮಾಡಿ ಆ ಮೂಲಕ ಆರ್ಥಿಕವಾಗಿ ಸದೃಢರಾಗಬಹು […]

ಗುಮ್ಮಟ ನಗರಿಯಲ್ಲಿ ಡಿಸಿ ಟಿ. ಭೂಬಾಲನ ಸಿಟಿ ರೌಂಡ್ಸ್- ಒಳಚರಂಡಿ, ನೀರು ಸರಬರಾಜು, ರಸ್ತೆ ಕಾಮಗಾರಿಗಳ ಪರಿಶೀಲನೆ

ವಿಜಯಪುರ: ಜಿಲ್ಲಾಧಿಕಾರಿ ಟಿ. ಭೂಬಾಲನ್ ಅವರು ವಿಜಯಪುರ ನಗರದ ಜುಮ್ಮಾ ಮಸೀದಿ ರಸ್ತೆ, ಹಕೀಮ್ ಚೌಕ್, ಗೋಲಗುಂಬಜ್, ರೇಲ್ವೆ ಸ್ಟೇಶನ್ ರಸ್ತೆ, ನವಬಾಗ ರಸ್ತೆ ಸೇರಿದಂತೆ ನಾನಾ ಸ್ಥಳಗಳಿಗೆ ಭೇಟಿ ನೀಡಿ ರಸ್ತೆ, ನೀರು ಸರಬರಾಜು, ಒಳಚರಂಡಿ ವ್ಯವಸ್ಥೆ ಕುರಿತು ಪರಿಶೀಲನೆ ನಡೆಸಿದರು. ಬೆ. 7 ಗಂಟೆಗೆ ಮಹಾನಗರ ಪಾಲಿಕೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ನಗರ ನೀರು ಸರಬರಾಜು ಮಂಡಳಿ, ಪ್ರವಾಸೋದ್ಯಮ ಇಲಾಖೆ ಸೇರಿದಂತೆ  ನಾನಾ ಅಧಿಕಾರಿಗಳೊಂದಿಗೆ ಸಿಟಿ ರೌಂಡ್ಸ್ ನಡೆಸಿದ ಜಿಲ್ಲಾಧಿಕಾರಿಗಳು, ನಗರದ ಅತಾವುಲ್ಲಾ ವೃತ್ತದಿಂದ ಜಂಡಾಕಟ್ಟಿಯ […]

ಬೆಂಗಳೂರಿನಲ್ಲಿ ಮೇಕ್ ಮೈಟ್ರಿಪ್ ನಿಂದ ಎರಡು ಹೊಸ ಫ್ರಾಂಚೈಸಿ ಮಳಿಗೆಗಳ ಪ್ರಾರಂಭ

ಬೆಂಗಳೂರು: ಭಾರತದ ಮುಂಚೂಣಿಯ ಆನ್ಲೈನ್ ಟ್ರಾವೆಲ್ ಕಂಪನಿ ಮೇಕ್ ಮೈ ಟ್ರಿಪ್ ಕರ್ನಾಟಕದ ಬೆಂಗಳೂರಿನಲ್ಲಿ ಎರಡು ಹೊಸ ಫ್ರಾಂಚೈಸಿ ಮಳಿಗೆಗಳನ್ನು ತೆರೆದಿದೆ. ಈ ಮಳಿಗೆಗಳು ಕಮ್ಮನಹಳ್ಳಿ ಮತ್ತು ಇನ್ಫೆಂಟ್ರಿ ರಸ್ತೆಯ ಪ್ರದೇಶದಲ್ಲಿದ್ದು ನಗರದಲ್ಲಿ ಕ್ರಮವಾಗಿ ಮೇಕ್ ಮೈಟ್ರಿಪ್ ನ 16 ಮತ್ತು 17ನೇ ಮಳಿಗೆಗಳಾಗಿವೆ ಹಾಗೂ ಕರ್ನಾಟಕದಲ್ಲಿ ಹದಿನಾಲ್ಕನೆಯದಾಗಿವೆ.  ಈ ಫ್ರಾಂಚೈಸಿ ಜಾಲದ ವಿಸ್ತರಣೆಯು ಭಾರತದಲ್ಲಿ ಮುಂಚೂಣಿಯ 100+ ನಗರಗಳಲ್ಲಿ ಗ್ರಾಹಕರಿಗೆ ಸೇವೆ ಒದಗಿಸುವ ವಿಸ್ತಾರ ಕಾರ್ಯತಂತ್ರದ ಭಾಗವಾಗಿದ್ದು ಜನರು ಅವರು ವಿಶ್ವಾಸವಿರಿಸುವವರೊಂದಿಗೆ ಹೆಚ್ಚು ಅನುಕೂಲಕರವಾಗಿ ಸಂವಹನ […]